೧೨-೧-೨೦೨೨. ಬುಧವಾರ.

E-YELLAPUR.COM NEWS
ಆಶಾಕಾರ್ಯಕರ್ತೆರು ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ. ಪ್ರತಿ ಮನೆಗೂ ಭೇಟಿ ನೀಡಿ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಅವರ ಶುಶ್ರೂಷೆ ಮರೆಯುವಂತಾದ್ದಲ್ಲ.ಆಶಾ ಕಾರ್ಯಕರ್ತೆಯರಿಗೆ ಸರಕಾರ ಇನ್ನೂ ಹೆಚ್ಚಿನ ಸಹಾಯ ಸಹಕಾರವನ್ನು ನೀಡಬೇಕು ಎಂದು ಉಮ್ಮಚ್ಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಕಾರ್ಯದರ್ಶಿ ರಾಮಕೃಷ್ಣ ಹೆಗಡೆ ಕನೇನಳ್ಳಿ ಹೇಳಿದರು.

ADVT

ಅವರು ತಾಲೂಕಿನ ಉಮ್ಮಚಗಿಯ ವಿ.ಎಸ್. ಎಸ್. ಸಭಾಭವನದಲ್ಲಿ ನಡೆದ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿಯ ಸದಸ್ಯರು, ಆಶಾ ಕಾರ್ಯಕರ್ತೆಯರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರುಯ. ಈ ಕಾರ್ಯಕ್ರಮವನ್ನು ಉಮ್ಮಚ್ಗಿ ಗ್ರಾ.ಪಂ.ಅಧ್ಯಕ್ಷೆ ರೂಪಾ ಪೂಜಾರಿ ಅವರು ದೀಪ ಬೆಳಗಿಸಿ ಉದ್ಘಾಸಿದರು.

ವೇದಿಕೆಯಲ್ಲಿ ಚವತ್ತಿ ಉಪ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಸುಶ್ಮಾ,ಕುಂದರಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ರಮ್ಯಾ, ಹಾಸಣಗಿ ಗ್ರಾ.ಪಂ.ಅಧ್ಯಕ್ಷ ಪುರಂದರ, ತಾಲ್ಲೂಕು ಆರೋಗ್ಯ ನಿರೀಕ್ಷಕರಾದ ಮಹೇಶ ತಾಳಿಕೋಟೆ ಮೊದಲಾದವರಿದ್ದರು. ತಾಲೂಕಾ ಆರೋಗ್ಯ ಅಧಿಕಾರಿ ಎಸ್.ಟಿ. ಭಟ್ಟ ಸ್ವಾಗತಿಸಿದರು, ವಿರೂಪಾಕ್ಷ ಶಿರೂರ್ ನಿರ್ವಹಿಸಿ,ವಂದಿಸಿದರು.

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

FACEBOOK GROUP – https://www.facebook.com/groups/593852164946589/

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.

https://chat.whatsapp.com/L2CReGIOXdX7UXCxXicb4Q

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading