3-2-2022. ಗುರುವಾರ.

E-YELLAPUR.COM NEWS
ಯಲ್ಲಾಪುರ.
ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯದ ಸಭಾಭವನದಲ್ಲಿ ತಾಲೂಕಾ ಕನ್ನಡ ವೈಶ್ಯ ಸಮಾಜದವರ ಆಶ್ರಯದಲ್ಲಿ ಮಾಘ ಶುದ್ಧ ಪ್ರತಿಪದೆ ಕಾರ್ಯಕ್ರಮ ಸರಳವಾಗಿ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರು ಹಾಗೂ ಸಮಾಜದ ಮುಖಂಡರು ಕಾರ್ಯಕ್ರಮವನ್ನು ಉಧ್ಘಾಟಿಸಿದರು.
ನಿಖರ, ವಿಶ್ವಾಸಾರ್ಹ ಸುದ್ದಿಗಳಿಗಾಗಿ e-yellapur.com digital News ಓದಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿರುವ ಪಟ್ಟಣದ ಪಂಡಿತ್ ಮೆಮೋರಿಯಲ್ ಆಸ್ಪತ್ರೆಯ ವೈದ್ಯ ಡಾ.ವಿಶಾಲ ಪಂಡಿತ್ ಅವರನ್ನು ಹಾಗೂ ನಾನಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಮಹನೀಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕನ್ನಡ ವೈಶ್ಯ ಸಮಾಜದ ಪ್ರಮುಖರು ಇದ್ದರು.

ಇದೇ ಸಂದರ್ಭದಲ್ಲಿ ಪಂಡಿತ್ ಆಸ್ಪತ್ರೆಗೆ ಆಕ್ಸಿಜೆನ್ ಕಾಂನ್ಸಂಟ್ರೇಟರ್ ಅನ್ನು ಹಸ್ತಾಂತರಿಸಲಾಯಿತು.

ಕಾಳಮ್ಮನಗರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪೈಪ್ ಕಾಂಪೋಸ್ಟ್ ತಯಾರಿ ಪ್ರಾತ್ಯಕ್ಷಿಕೆ.

ಪಟ್ಟಣದ ಕಾಳಮ್ಮನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇಂಧನ ಸಂರಕ್ಷಣಾ ಕ್ಲಬ್ ಆಶ್ರಯದಲ್ಲಿ ಗುರುವಾರ ಪೈಪ್ ಕಾಂಪೋಸ್ಟ್ ತರಬೇತಿ ಪ್ರಾತ್ಯಕ್ಷಿಕೆ ನಡೆಯಿತು. ಶಿಕ್ಷಕ ಶ್ರೀಧರ ಹೆಗಡೆಯವರು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಮುಖ್ಯಾಧ್ಯಾಪಕ ದೇವಿದಾಸ ಪಟಗಾರ, ಶಿಕ್ಷಕರಾದ ವೆಂಕಟೇಶ ಪಾಲನಕರ್, ನಾಗರತ್ನಾ ನಾಯಕ ಹಾಗೂ ವಿಧ್ಯಾರ್ಥಿಗಳು ಇದ್ದರು.

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

FACEBOOK GROUP – https://www.facebook.com/groups/593852164946589/

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.

https://chat.whatsapp.com/L2CReGIOXdX7UXCxXicb4Q

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading