ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಬೆಳೆ ವಿಮೆ ನೋಂದಣಿಗೆ ಅಂತಿಮ ದಿನಾಂಕ ವಿಸ್ತರಣೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ 2026-27 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ, ಮುಸುಕಿನ ಜೋಳ, ಹಾಗೂ ಹತ್ತಿ ಬೆಳೆಗಳಿಗೆ ಇಪ್ಕೋ ಟೋಕಿಯೋ ಜನರಲ್ ಇನ್ನೂರನ್ಸ್ ಕಂಪನಿಯಿಂದ ವಿಮಾ ಸೌಲಭ್ಯ ದೊರೆಯಲಿದೆ. ಮೆಕ್ಕೆಜೋಳ ಹಾಗೂ ಹತ್ತಿ ಬೆಳೆಗಳಿಗೆ ವಿಮೆ ನೊಂದಾಯಿಸಿಕೊಳ್ಳಲು ಬೆಳೆ ಸಾಲ ಪಡೆದರೈತರಿಗೆ ಮಾತ್ರ ಅಂತಿಮ ದಿನಾಂಕ ವಿಸ್ತರಿಸಲಾಗಿದ್ದು, ಆಗಸ್ಟ್ 7 ರವರೆಗೆ ವಿಮೆ ನೊಂದಾಯಸಿಕೊಳ್ಳಲು ಅವಕಾಶವಿರುತ್ತದೆ. ಭತ್ತದ ಬೆಳೆಗೆ ವಿಮೆ ನೊಂದಾಯಿಸಿಕೊಳ್ಳಲು ಬೆಳೆ ಸಾಲ ಪಡೆದ ರೈತರು ಹಾಗೂ ಪಡೆಯದ ರೈತರಿಗೆ ಆಗಸ್ಟ್ 14 ಅಂತಿಮ ದಿನಾಂಕವಾಗಿರುತ್ತದೆ.
ರೈತರು ಪ್ರೋಟ್ ಐಡಿ, ಆಧಾರ ಕಾರ್ಡ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಪಹಣಿಯ ಪ್ರತಿಗಳ ಜೊತೆ ತಮ್ಮ ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್, ವ್ಯವಸಾಯ ಸೇವಾ ಸಹಕಾರಿ ಸಂಘ, ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಬೆಳೆ ವಿಮ ನೊಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ ಅಥವಾ ಟೋಲ್ ಪ್ರೀ ಸಂಖ್ಯೆ 1800 103 5490 ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಚೆ ಇಲಾಖೆಯಿಂದ ಬುಕಿಂಗ್, ಪಿಕ್-ಅಪ್ ಮತ್ತು ಡೆಲಿವರಿ ಪಾಲುದಾರರಿಗಾಗಿ ಆನ್ಲೈನ್ ಅರ್ಜಿಗಳ ಆಹ್ವಾನ
ಅಡ್ವಾನ್ಸ್ ಪೋಸ್ಟಲ್ ಟೆಕ್ನಾಲಜಿ 2.0 ವ್ಯವಸ್ಥೆಯಡಿಯಲ್ಲಿ ಕೊರಿಯರ್, ಎಕ್ಸ್ಪ್ರೆಸ್ ಮತ್ತು ಪಾರ್ಸೆಲ್ ಜಾಲವನ್ನು ಬಲಪಡಿಸಲು ಮತ್ತು ಸಾರ್ವಜನಿಕರಿಗೆ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ತಲುಪಿಸಲು ಭಾರತೀಯ ಅಂಚೆ ಇಲಾಖೆಯು ಹೊಸ ಫ್ರಾಂಚೈಸಿ ಯೋಜನೆ 2.0 ಪ್ರಾರಂಭಿಸಿದೆ.
ಈ ಯೋಜನೆಯು ಸ್ಥಳೀಯ ಅಂಗಡಿಕಾರರು, ಸಣ್ಣ ಉದ್ಯಮಿಗಳು, ಲಾಜಿಸ್ಟಿಕ್ಸ್ ಸಂಸ್ಥೆಗಳು, ಅಗ್ರಿಗೇಟರ್ ಗಳು ಮತ್ತು ಯುವಕರಿಗೆ ಭಾರತೀಯ ಅಂಚೆಯೊಂದಿಗೆ ಬುಕಿಂಗ್, ಪಾರ್ಸೆಲ್ ಡೆಲಿವರಿ ಮತ್ತು ಮನೆಬಾಗಿಲ ಸಂಗ್ರಹಣೆ ಸೇವೆಗಳನ್ನು ಒದಗಿಸಲು ಅತ್ಯುತ್ತಮ ಸ್ವಯಂ ಉದ್ಯೋಗದ ಹಾಗೂ ಉದ್ಯಮಶೀಲತೆಯ ಅವಕಾಶವನ್ನು ನೀಡುತ್ತದೆ.
ಆಸಕ್ತ ಅಭ್ಯರ್ಥಿಗಳು ಭಾರತೀಯ ಅಂಚೆಯ ಅಧಿಕೃತ ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಪರಿಶೀಲಿಸಿ, ಆಯ್ಕೆಯಾದ ಅಭ್ಯರ್ಥಿಗಳಿಗೆ 15 ದಿನಗಳ ಒಳಗೆ ನಿಶ್ಚಿತಾರ್ಥ ಪತ್ರ ನೀಡಲಾಗುವುದು. ಹೆಚ್ಚಿನ ವಿವರಗಳಿಗಾಗಿ, ಮಾರ್ಗಸೂಚಿಗಳಿಗಾಗಿ ಹತ್ತಿರದ ಅಂಚೆ ಕಚೇರಿ ಹಾಗೂ ದೂ.ಸಂ: 08382221431/221435, ಮೊ.ಸಂ: 9686541879 ನ್ನು ಸಂಪರ್ಕಿಸಿ ಅಥವಾ ವೆಬ್‍ಸೈಟ್‍ಗೆ ಭೇಟಿ ನೀಡಬಹುದೆಂದು ಕಾರವಾರ ವಿಭಾಗದ ಅಂಚೆ ಅಧೀಕ್ಷಕರಾದ ಹೂವಪ್ಪ ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.