ಮಾಜಿ ಶಾಸಕ, ಶಿಕ್ಷಣಪ್ರೇಮಿ ದಿ. ಉಮೇಶ ಭಟ್ಟ ಅವರ ಅಭಿಮಾನಿ ಬಳಗದ ವತಿಯಿಂದ ಗುರುವಾರ ಯಲ್ಲಾಪುರ ಪಟ್ಟಣದ ನಾಯಕನಕೆರೆ ರಾಘವೇಂದ್ರ ಹಿರಿಯ ನಾಗರಿಕರ ವಸತಿಗೃಹದಲ್ಲಿ ದಿ ಉಮೇಶ ಭಟ್ಟ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ನುಡಿನಮನ ಕಾರ್ಯಕ್ರಮದ ಮೂಲಕ ಉಮೇಶ ಭಟ್ಟ ಅವರ ಏಳನೇಯ ವರ್ಷದ ಸಂಸ್ಮರಣೆ ಮಾಡಲಾಯಿತು. ಇದೇ ವೇಳೆ ವೃದ್ದಾಶ್ರಮಕ್ಕೆ ಟೇಬಲ್ ನ್ನುಕೊಡುಗೆಯಾಗಿ ನೀಡಲಾಯಿತು.

ಟಿ ಎಂಎಸ್ ಮಾಜಿ ಮುಖ್ಯಕಾರ್ಯನಿರ್ವಾಹಕ ಸಿ ಎಸ್ ಹೆಗಡೆ ಮಾತನಾಡಿ, ಉಮೇಶ ಭಟ್ಟ ಅವರ ಶಿಕ್ಷಣ ಸಮಾಜದ ಸೇವೆ ಅನುಕರಣೀಯ. ಯಲ್ಲಾಪುರ ಮಾರ್ಕೆಟಿಂಗ್ ಸೊಸೈಟಿಗೆ ಸ್ಥಳ ಮಂಜೂರಿ ಮಾಡುವಲ್ಲಿ ಹಾಗೂ ಸೊಸೈಟಿಯ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದೆ ಎಂದರು.

ಉಮೇಶ ಭಟ್ಟ ಅಭಿಮಾನಿ ಬಳಗದ ಪ್ರಮುಖ ವೇಣುಗೋಪಾಲ ಮದ್ಗುಣಿ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣ ವ್ಯಾಪಾರಿಕರಣ ಆಗುತ್ತಿರುವ ಸಂದರ್ಭದಲ್ಲಿ ಉಮೇಶ ಭಟ್ಟ ಬಡಮಕ್ಕಳ ಶಿಕ್ಷಣದ ಸಲುವಾಗಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳಸಿ ಸಾವಿರಾರು ಮಕ್ಕಳ ಭವಿಷ್ಯದ ಬೆಳಕಾಗಿದ್ದರು.ಅವರ ಸಾಮಾಜಿಕ ಕಾಳಜಿ ಕಳಕಳಿ ಮಾದರಿಯಾಗಿದೆ ಎಂದರು.

ರಾಘವೇಂದ್ರ ವೃದ್ದಾಶೃಮದ ಮುಖ್ಯಸ್ಥ ಚಂದ್ರಪ್ಪ ಅಣ್ಣೇರ, ಪ್ರಮುಖರಾದ ಶ್ರೀಪತಿ ಭಟ್ಟ, ಎನ್ ಡಿ ಹೆಬ್ಬಾರ, ನಾಗೇಂದ್ರ ಯಲ್ಲಾಪುರ, ವಿನಾಯಕ ಹೆಬ್ಬಾರ್, ಜೈರಾಜ ಗೋವಿ, ಪ್ರಭಾವತಿ ಗೋವಿ ಭಾಗವಹಿಸಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಬಿದ್ರೆಮನೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ದಿ. ಉಮೇಶ ಭಟ್ಟ ಅವರಿಂದ ಸಹಾಯ ಪಡೆದವರು ಅವರನ್ನು ಮರೆತಿರುವ ಸಂದರ್ಭದಲ್ಲಿ, ಅವರ ಅಭಿಮಾನಿ ಬಳಗ ಅವರ ಸಂಸ್ಮರಣೆ ಮೂಲಕ ಹೊಸ ಪೀಳಿಗೆಗೆ ಉಮೇಶ ಭಟ್ಟ ಅವರನ್ನು ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಅನುಕಣೀಯ ಎಂದರು. ಕಾನಿಪ ಸಂಘದ ಉಪಾಧ್ಯಕ್ಷ ಶ್ರೀಧರ ಅಣಲಗಾರ ನಿರೂಪಿಸಿ ವಂದಿಸಿದರು.

===================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading