





ಬೇಡ್ತಿ,ವರದಾ ಲಿಂಕ್ ಯೋಜನೆ ಡಿಪಿಆರ್ ಗೆ ರಾಜ್ಯ ಸರ್ಕಾರದ ಒಪ್ಪಿಗೆ, ಡಿಪಿಆರ್ ಪೂರ್ವಕಾರ್ಯ ತಯಾರಿ: ರವೀಂದ್ರ ನಾಯ್ಕ

ಶಿರಸಿ: ಜಿಲ್ಲೆಯ ಜನರ ತೀವ್ರ ವಿರೋಧದ ಹಿನ್ನಲೆಯಲ್ಲಿ ಬೇಡ್ತಿ-ವರದಾ (ಹೀರೇವಡ್ಡಟ್ಟಿ) ಲಿಂಕ್ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ಮೇರೆಗೆ ಕರ್ನಾಟಕ ನೀರಾವರಿ ನಿಗಮವೂ ವಿವರವಾದ ಯೋಜನಾ ವರದಿ (ಡಿಪಿಆರ್ ) ತಯಾರಿಕೆಯ ಕಾರ್ಯ ಯೋಜನೆಗೆ ಪೂರಕ ಕಾರ್ಯ ಪ್ರಾರಂಭಿಸಿದೆ ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಈ ಕುರಿತು ಶುಕ್ರವಾರ ಪ್ರಕಟಣೆ ನೀಡಿದ ಅವರು, ಜಿಲ್ಲೆಗೆ ಮಾರಕವಾದ ಪರಿಸರ ಮತ್ತು ಜನವಿರೋಧಿ ಅವೈಜ್ಞಾನಿಕ ನೀತಿಯ ಯೋಜನೆಗೆ ತೀವ್ರವಾದ ಹೋರಾಟದ ಹಿನ್ನಲೆಯಲ್ಲಿ ಡಿಪಿಆರ್ ಕಾರ್ಯದ ತಯಾರಿ ಪ್ರಾರಂಭವಾಗಿರುವುದನ್ನು ಹೇಳಿದರು. ಮುಖ್ಯ ಇಂಜಿನಿಯರ್ ಎನ್ ಡ ಬ್ಲೂ ಡಿ ಎ ಹೈದರಾಬಾದ ಮತ್ತು ಧಾರವಾಡದ ಕೆ ಎನ್ ಎನ್ ಎಲ್ ಚೀಪ್ ಇಂಜಿನೀಯರ್ ಕಛೇರಿಯ ಮಾರ್ಗದರ್ಶನದಂತೆ ಕರ್ನಾಟಕ ನೀರಾವರಿ ನಿಗಮವೂ ಬೇಡ್ತಿ- ವರದಾ ನದಿಯ ಡಿಪಿಆರ್ ಕಾರ್ಯಕ್ಕೆ ಪೂರ್ವ ನಿಯೋಜಿತ ಡಿಪಿಆರ್ ನಲ್ಲಿ ಹಾವೇರಿ ಜಿಲ್ಲೆಯಲ್ಲಿ 5 ರಿಂದ 6 ಟಿ ಎಮ್ ಸಿ ಎಸ್ಟೋ ನೀರು ಸಂಗ್ರಹಣ ಅವಕಾಶಕ್ಕೆ ಮತ್ತು ಅನ್ವೇಷಣೆ ಕುರಿತು ಚರ್ಚಿಸಿ ಅಂತಿಮ ಗೊಳಿಸಲು ಧಾರವಾಡದ ಮಲಪ್ರಭಾ ಯೋಜನಾ ವಲಯದ ಕೆ ಎನ್ ಎನ್ ಎಲ್ ಮುಖ್ಯ ಇಂಜಿನಿಯರ್ ( ನೋಡಲ್ ಅಧಿಕಾರಿ ) ಅಧ್ಯಕ್ಷತೆಯಲ್ಲಿ ನವೆಂಬರ್ 12 ರಂದು ಮಲಪ್ರಭಾ ಯೋಜನಾ ವಲಯದ ಮುಖ್ಯ ಇಂಜಿನಿಯರ್ ಕಛೇರಿಯಲ್ಲಿ ಸಭೆ ಕರೆಯಲಾಗಿತ್ತು.
ಸಭೆಯ ಸೂಚನೆಯಲ್ಲಿ ಬೇಡ್ತಿ ವರದ ಲಿಂಕ್ ಯೋಜನೆಗೆ ಎನ್ ಡಬ್ಲೂ ಡಿ ಎ ಯು ಲಿಂಕ್ ಯೋಜನೆಗೆ ಡಿಪಿಆರ್ ಅನ್ನು ಸಿದ್ದಪಡಿಸುತ್ತಿದೆ ಮತ್ತು ಇದಕ್ಕಾಗಿ ಮುಖ್ಯ ಇಂಜಿನೀಯರ್ ನೀರಾವರಿ ನಿಗಮ, ಮಲಪ್ರಭಾ ಯೋಜನಾ ವಲಯ ಧಾರವಾಡ ಇವರು ಯೋಜನೆಯ ಸಮನ್ವಯಕ್ಕಾಗಿ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಮುಖ್ಯ ಇಂಜಿನೀಯರ್ ನೀರಾವರಿ ನಿಗಮದ ಮಲಪ್ರಭಾ ಯೋಜನಾ ವಲಯದ ಬೇಡ್ತಿ ವರದಾ ನದಿ ಸಂಪರ್ಕ ಯೋಜನೆಯ ಡಿಪಿಆರ್ ತಯಾರಿಕೆಗಾಗಿ ನೋಡಲ್ ಅಧಿಕಾರಿ ಹೋರಡಿಸಿರುವ ಸಭೆಯ ಸೂಚನೆಯ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಮುಖರಾದ ಹಿರಿಯ ವಕೀಲ ಉದಯ ನಾಯ್ಕ ಮತ್ತು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಗ್ರೀನ್ ಕಾರ್ಡ ಪ್ರಮುಖ ಲಕ್ಷ್ಮಣ ನಾಯ್ಕ ಐಗೋಡಜಡ್ಡಿ ಉಪಸ್ಥಿತರಿದ್ದರು.
ಸಂಗ್ರಹ ಸಾಮರ್ಥ್ಯದ ಕುರಿತು ಸಭೆ :
ಕರ್ನಾಟಕ ನೀರಾವರಿ ನಿಗಮವೂ ಪ್ರಸ್ತುತ ಹಾವೇರಿ ಜಿಲ್ಲೆಯಲ್ಲಿ 5 ರಿಂದ 6 ಟಿ ಎಮ್ ಸಿ ನೀರನ್ನು ಸಂಗ್ರಹಕ್ಕಾಗಿ ಸಂಭಾವ್ಯ ,ಸಂಗ್ರಹಣ ಸಾಮರ್ಥ್ಯವಿರುವ ಹೊಸ ಸಂಗ್ರಹಣ ಜಲಾಶಯಗಳ ರಚನೆಗೆ ಸೂಕ್ತವಾದ ಸ್ಥಳಗಳನ್ನ ಗುರುತಿಸುವುದು , ಗುರುತಿಸಲಾದ ಎಮ್ ಐ ಟ್ಯಾಂಕ್ ಗಳು ಮತ್ತು ಇತರ ಟ್ಯಾಂಕ್ ಗಳಲ್ಲಿ ಪ್ರಮುಖ ಲಕ್ಷಣಗಳು, ಅಸ್ತಿತ್ವದಲ್ಲಿರುವ ಸಂಗ್ರಹಣ ಸಾಮರ್ಥ್ಯ ಮತ್ತು ಹೆಚ್ಚುವರಿ ಸಂಗ್ರಹಣೆಗೆ ಅವಕಾಶ, ಪ್ರಸ್ತಾವಿತ ಯೋಜನೆಯ ಜೋಡಣೆ ಉದ್ದಕ್ಕೂ ಎಮ್ ಐ ಅಥವಾ ಜಡ್ ಪಿ ಟ್ಯಾಂಕ್ ಗಳು ಮತ್ತು ಇತರ ಸಂಭಾವ್ಯ ಸಂಗ್ರಹಣಾ ತಾಣಗಳ ವಿವರಗಳನ್ನ ಚರ್ಚಿಸಿ ಯೋಜನೆಗೆ ಸಂಬಂಧಿಸಿದ ಅಂಶಗಳನ್ನ ಎನ್ ಡಬ್ಲೂ ಡಿ ಗೆ ಸಲ್ಲಿಸಲು ಮೇಲಿನ ವಿವರಗಳನ್ನು ಚರ್ಚಿಸಲು ಮತ್ತು ಅಂತಮ ಗೊಳಿಸಲು ಸಭೆಯನ್ನು ಕರೆಯಲಾಗಿತ್ತು ಎಂದು ಸಲಹೆ ಸೂಚನೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಹೋರಾಟಗಾರ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

=================















