23-8-2021. ಸೋಮವಾರ.
E-ಯಲ್ಲಾಪುರ.

ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು. ಸೇವಾ ಮನೋಭಾವನೆಯಿಂದ ಮಾಡುವ ಕಾರ್ಯಗಳು ಸಾರ್ಥಕತೆಯ ಜೊತೆಗೆ ಸಾಫಲ್ಯತೆಯನ್ನು ತಂದುಕೊಡುತ್ತವೆ ಎಂದು ಇಡಗುಂದಿಯ ಸ್ನೇಹಸಾಗರ ವಸತಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ LION ಎಸ್.ಎಲ್.ಭಟ್ ಹೇಳಿದರು.

–ADVT–

–ADVT–

ಅವರು ಯಲ್ಲಾಪುರ ನಗರದ ಬಸ್ ನಿಲ್ಧಾಣ ಸಮೀಪದ ಏಕದಂತ ಕಟ್ಟಡದಲ್ಲಿ ರವಿವಾರ ಸಂಜೆ ನಡೆದ ಯಲ್ಲಾಪುರ LIONS CLUB ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿ ಮಾತನಾಡಿದರು.

–ADVT–

–ADVT–

ಯಲ್ಲಾಪುರ LIONS CLUB ವತಿಯಿಂದ ಬಹಳಷ್ಟು ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಪದಗ್ರಹಣ ಸಮಾರಂಭವು ಈ ಸಂಘಟನೆಯ ಪ್ರಮುಖ ಕಾರ್ಯಕ್ರಮವಾಗಿದೆ. ಬೇರೆ ಕಡೆಗಳಲ್ಲಿ, ನಾನಾ ಸಂದರ್ಭಗಳಲ್ಲಿ ಅಧಿಕಾರದಿಂದ ಕೆಳಗೆ ಇಳಿಯುವಾಗ ಬೇಸರ,ದುಃಖ ಇರುವುದನ್ನು ನೋಡುತ್ತೇವೆ. ಆದರೆ ಈ ಸಂಘಟನೆಯಲ್ಲಿ ಅಧಿಕಾರವನ್ನು ಬೇರೆಯವರಿಗೆ ಹಸ್ತಾಂತರಿಸುವಾ ಖುಷಿ ಇರುತ್ತದೆ.

–ADVT–

ಇದು ವಿಶೇಷವಾಗಿದೆ ಎಂದ ಅವರು, LIONS CLUB 104 ವರ್ಷಗಳ ಮಹೋನ್ನತವಾದ ಇತಿಹಾಸ ಇದೆ ಜಾಗತಿಕ ಮಟ್ಟದಲ್ಲಿ ಉತ್ತಮ ಸಂಘಟನೆಹೊಂದಿದ್ದು ವಿಶ್ವದಾದ್ಯಂತ 50 ಲಕ್ಷಕ್ಕೂ ಅಧಿಕ ಸದಸ್ಯರನ್ನು ಈ ಸಂಘಟನೆ ಹೊಂದಿದೆ. ಈ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ತಾಲೂಕಾ LIONS CLUB ಅಧ್ಯಕ್ಷರಾಗಿ ಪುನರಾಯ್ಕೆಯಾದ LION ಶ್ರೀಧರ ಶೆಟ್ಟಿ ಮಾತನಾಡಿ, LIONS CLUB ವತಿಯಿಂದ ತಾಲೂಕಿನಲ್ಲಿ ಹತ್ತು-ಹಲವು ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಕೋವಿಡ್ ಕಾರಣದಿಂದಾಗಿ ಕೆಲವು ಕಾರ್ಯಕ್ರಮಗಳು ಮುಂದೂಡಲ್ಪಟ್ಟಿವೆ.

–ADVT–

ಸದ್ಯದಲ್ಲಿಯೇ ನಾನಾ ರಚನಾತ್ಮಕ, ಸೇವಾ ಕಾರ್ಯಗಳನ್ನು ಸಂಘಟಿಸುವ ಗುರಿ ಹೊಂದಲಾಗಿದೆ ಎಂದರು. ಇದೇ ಸಂದರ್ಭದಲ್ಲಿ LIONS CLUB ಸದಸ್ಯರಿಗೆ ವಿವಿಧ ಜವಾಬ್ಧಾರಿಗಳನ್ನು ವಹಿಸಲಾಯಿತು. ಡಿಸ್ಟ್ರಿಕ್ಟ್ ಚೇರ್ ಪರ್ಸನ್ಸ್ ಆಗಿ LION ಎಸ್.ಎಲ್.ಭಟ್ ಹಾಗೂ LION ಶಾಂತಾರಾಮ ಹೆಗಡೆ ಆಯ್ಕೆಯಾದರು.

–ADVT–

–ADVT–

ಬೋರ್ಡ್ ಆಫ್ ಡೈರೆಕ್ಟರ್ ಆಗಿ ನಂದನ ಬಾಳಗಿ, ಶಾಂತಾರಾಮ ಹೆಗಡೆ, ನಾಗರಾಜ ನಾಯ್ಕ ಅವರ ಹೆಸರನ್ನು ಘೋಷಿಸಲಾಯಿತು. ಉಪಾಧ್ಯಕ್ಷರಾಗಿ LION ಎಸ್.ಎನ್.ನಾಯ್ಕ್, LION ಮಂಜುನಾಥ ನಾಯ್ಕ್, ಕಾರ್ಯದಶೀಯಾಗಿ LION ಅಕ್ತರ್ ಅಲಿ ಪುನರಾಯ್ಕೆಯಾಗಿದ್ದು, ಖಜಾಂಚಿಯಾಗಿ LION ಸುರೇಶ ಬೋರ್ಕರ್ ಸದಸ್ಯತ್ವ ಸಮೀತಿಯ ಪ್ರಮುಖರಾಗಿ LION ಗೋಪಾಲ ನೇತ್ರೇಕರ್ ಆಯ್ಕೆಯಾದರು.

–ADVT–

LION ಘನಶ್ಯಾಮ ಹೆಗಡೆ, LION ಶಿವಾನಂದ ಹೆಗಡೆ ಅವರಿಗೆ ವಿವಿಧ ಜವಾಬ್ಧಾರಿಗಳನ್ನು ನೀಡಲಾಯಿತು. ನೂತನ ಸದಸ್ಯರಾಗಿ ವಿಶಾಲ್ ಬೀಡಿಕರ್, ಎಸ್.ಎಸ್.ಹಳ್ಳನ್ನವರ್ ಪ್ರತಿಜ್ಞಾವಿಧಿ ಸ್ವೀಕರಿಸಿದರು.

–ADVT–


ಕಾರ್ಯಕ್ರಮದಲ್ಲಿ LION ನಂದನ ಬಾಳಗಿ, LION ನಾಗರಾಜ ನಾಯ್ಕ್, ಡಾ.ಸತೀ ಭಟ್, ವೀಣಾ ಭಟ್, ಭವ್ಯಾ ಶೆಟ್ಟಿ, ಸಂಧ್ಯಾ ಹೆಗಡೆ, ಮುಂತಾದವರು ಪಾಲ್ಗೊಂಡಿದ್ದರು.

ಕಾರ್ಯದರ್ಶಿ LION ಅಕ್ತರ್ ಅಲಿ ವಾರ್ಷಿಕ ವರದಿ ವಾಚಿಸಿದರು. LION ಮಂಜುನಾಥ ನಾಯ್ಕ ಸ್ವಾಗತಿಸಿದರು. LION ಸುರೇಶ ಬೋರ್ಕರ್ ವಂದಿಸಿದರು. LION ಶಾಂತಾರಾಮ ಹೆಗಡೆ ನಿರ್ವಹಿಸಿದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/BrL0e7zB8Qo1yeFemCvdus

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

FACEBOOK GROUP – https://www.facebook.com/groups/593852164946589

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading