29-8-2021. ರವಿವಾರ.

e-yellapur.com. News.
ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ e-yellapur.com ವತಿಯಿಂದ ಏರ್ಪಡಿಸಲಾದ ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೊ ಸ್ಫರ್ಧೆಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಉತ್ತರಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳ ವಿವಿಧ ಪ್ರದೇಶಗಳಿಂದ ಈ ಸ್ಫರ್ಧೆಗೆ ನಿರೀಕ್ಷೆಗೂ ಮೀರಿ ಮುದ್ದುಕೃಷ್ಣ ವೇಷಧಾರಿ ಮಕ್ಕಳ ಫೋಟೋಗಳು ಬಂದಿವೆ.

ಫೋಟೋ ಕಳಿಸಲು ಕೊನೆಯ ದಿನವಾಗಿದ್ದ ಅ.27 ರ ಒಳಗೆ ಸ್ವೀಕೃತವಾದ ಮಕ್ಕಳ ಮುದ್ದು ಕೃಷ್ಣ ವೇಷ ಫೋಟೊಗಳನ್ನು ನಿರ್ಣಾಯಕರಿಗೆ ಕಳಿಸಲಾಗಿದೆ. ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿದ್ದು, ಈ ಸ್ಫರ್ಧೆಯ ಫಲಿತಾಂಶವನ್ನು ನಾಳೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಘೋಷಿಸಲಾಗುವುದು. ಪ್ರಥಮ,ದ್ವಿತಿಯ,ತೃತೀಯ ಬಹುಮಾನಿತ ಮಕ್ಕಳಿಗೆ ಸದ್ಯದಲ್ಲಿಯೇ ಯಲ್ಲಾಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗಣ್ಯರಿಂದ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಕುರಿತು ಸ್ಫರ್ಧಾ ವಿಜೇತ ಮಕ್ಕಳ ಪಾಲಕರಿಗೆ ಫೋನ್ ಮೂಲಕ ತಿಳಿಸಲಾಗುವುದು. ಈ ಸ್ಫರ್ಧಾ ಕಾರ್ಯಕ್ರಮಕ್ಕೆ ಖ್ಯಾತ ಆಭರಣ ಮಳಿಗೆಯಾದ ಗೌತಮ್ ಜುವೆಲ್ಲರ್ಸ್ ಮಾಲಕರಾದ ಪ್ರಕಾಶ್ ಎಂ. ಶೇಟ್ ಅವರು ಸಹಪ್ರಾಯೋಜಕರಾಗಿದ್ದಾರೆ. ಈ ಸ್ಫರ್ಧೆಯಲ್ಲಿ ಭಾಗವಹಿಸಿ, ಉತ್ತಮ ಫೋಟೋ ಎಂದು ಆಯ್ಕೆಯಾದ 10 ಆಕರ್ಷಕ ಮುದ್ದುಕೃಷ್ಣ ವೇಷ ಧರಿಸಿದ್ದ ಮಕ್ಕಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಸ್ಫರ್ಧೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ಎಲ್ಲ ಮಕ್ಕಳಿಗೆ ಹಾಗೂ ಪಾಲಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ.


Team e-yellapur.com.

============================

==ADVT==

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/KlvHKrtcQbl1m1rcati7gv

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

FACEBOOK GROUP – https://www.facebook.com/groups/593852164946589

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading