E-YELLAPUR.COM NEWS. ಅಂಕೋಲಾ: ಇಲ್ಲಿನ ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್‍ನಲ್ಲಿ ಸೋಮವಾರ ವಿಶ್ವ ಪ್ರಕೃತಿ ದಿನ ಆಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಮಾಜಿಕ ಕಾರ್ಯಕರ್ತ ಕೆ.ಆರ್ ನಾಯಕ ಬೇಲಿಕೇರಿ ಮಾತನಾಡಿ, ಅಭಿವೃದ್ದಿಯ ಹೆಸರಿನಲ್ಲಿ ಪರಿಸರ ಸಂರಕ್ಷಣೆಯನ್ನು ಮರೆಯಬಾರದು ಎಂದು ಕರೆ ನೀಡಿದರು.
ADVT
ಸಂಸ್ಥೆಯ ಉಪ ಪ್ರಾಚಾರ್ಯರಾದ ದೀಪಾಲಿ ಕುರ್ಡೇಕರ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯರಾದ ಶಂಕರಗೌಡ ಕಡೆಮನೆ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಗುರುದತ್ತ ಬಿ ನಾಯಕ ಇದ್ದರು. ನಯನಾ ತಾಂಡೇಲ್ ಕಾರ್ಯಕ್ರಮ ನಿರ್ವಹಿಸಿದರು. ರಶ್ಮಿ ನಾಯಕ ವಂದಿಸಿದರು.
ADVT
ನಾಳೆ ಯಲ್ಲಾಪುರ ವಿಶ್ವದರ್ಶನ ಶಿಕ್ಷಣ ಸಂಸ್ಥೆಗೆ ಕಾಶಿನಾಥ ನಾಯ್ಕ ಭೇಟಿ.
ಟೋಕಿಯೋ ಓಲಂಪಿಕ್ ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರ ಗುರು, ಖ್ಯಾತ ಜಾವಲಿನ್ ತರಬೇತುದಾರ ಕಾಶಿನಾಥ ನಾಯ್ಕ ಅವರು ನಾಳೆ ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಸಂಸ್ಥೆಯ ಬೆಳಕಿನಂದ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಅವರಿಗೆಗೌರವ ಸನ್ಮಾನ ಏರ್ಪಡಿಸಲಾಗಿದೆ. ನಂತರ ಅವರು ಕ್ರೀಡಾ ಸಾಧನೆಯ ಬಗ್ಗೆ ವಿಧ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಜಾಲತಾಣಗಳಲ್ಲಿ ವೈರಲ್ ಆದ ಬೇಡ್ತಿ ಸೇತುವೆ ಫೋಟೋ;
ಯಲ್ಲಾಪುರ ತಾಲೂಕಿನ ಬೇಡ್ತಿ ಸೇತುವೆಯ ಆಕರ್ಷಕ ಫೋಟೋ ಈಗ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಕ್ಯಾಮರಾದಿಂದ ಕ್ಲಿಕ್ಕಿಸಲಾದ ಈ ಆಕರ್ಷಕ ಫೋಟೋದಲ್ಲಿ ಬೇಡ್ತಿ ಸೇತುವೆಯ ವಿಹಂಗಮ ನೋಟ ಹಾಗೂ ಸುತ್ತಲಿನ ಸುಂದರ ಪ್ರಕೃತಿಯ ಮನಮೋಹಕ ದೃಶ್ಯ ನೋಡುಗರ ಮನಗೆದ್ದಿದೆ.