6-10-2021. ಬುಧವಾರ.

E-YELLAPUR.COM NEWS.

ಯಲ್ಲಾಪುರ ಪಟ್ಟಣದ ಮೂಲಕ ಹಾದು ಹೋದ ರಾಷ್ಟ್ರೀಯ ಹೆದ್ದಾರಿಯಲ್ಲಿ, ಶಾರದಾಂಬಾ ದೇವಸ್ಥಾನದ ಹತ್ತಿರ ಅ.3ರಂದು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಅಡ್ಡಗಟ್ಟಿ, ಚಾಕು ತೋರಿಸಿ ಬೆದರಿಸಿ, ಕಿಸೆಗೆ ಕೈ ಹಾಕಿ 3.500 ರೂ ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಯಲ್ಲಾಪುರ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಡ್ಡಿ ಸಬಗೇರಿಯ 20 ವರ್ಷದ ಕೂಲಿ ಕೆಲಸದ ಪ್ರಸನ್ನಕುಮಾರ್ ತಂದೆ ಸಂತೋಷ ಜಾಧವನನ್ನು ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ 1240 ರೂ ನಗದು ಹಣ ಮತ್ತು ಈ ಕೃತ್ಯಕ್ಕೆ ಬಳಸಿದ ಚಾಕು ಹಾಗೂ 35 ಸಾವಿರ ರೂ ಮೌಲ್ಯದ ಪಲ್ಸರ್ ಬೈಕ್ ಅನ್ನು ಜಪ್ತು ಮಾಡಲಾಗಿದೆ. ಕಾಳಮ್ಮನಗರದ ಲಾರಿ ಕ್ಲೀನರ್ ವೃತ್ತಿಯ ಅಮನ್ ತಂದೆ ಮಹ್ಮದ ಶಫೀ ಕಣವಿ ಈ ಕುರಿತು ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೋಲೀಸರು ಪ್ರಕರಣವನ್ನು ಬೇಧಿಸಿ, ಆರೋಪಿನ್ನು ಬಂಧಿಸಿದ್ದಾರೆ. ಜಿಲ್ಲಾ ಪೋಲೀಸ್ ಅಧಿಕ್ಷಕ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ, ಡಿವೈಎಸ್ಪಿ ರವಿ ನಾಯ್ಕ ಇವರ ಮಾರ್ಗದರ್ಶನದಲ್ಲಿ, ಸಿಪಿಐ ಸುರೇಶ ಯಳ್ಳೂರು ಇವರ ನೇತ್ರತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಿಎಸ್ಸೈ ಮಂಜುನಾಥ ಗೌಡರ ಹಾಗೂ ಪಿಎಸ್ಸೈ ಪ್ರಿಯಾಂಕಾ ನ್ಯಾಮಗೌಡ, ಮತ್ತು ಸಿಬ್ಬಂದಿಗಳಾದ ಮಹ್ಮದ ಶಫೀ, ಸವರಾಜ ಹಗರಿ, ಗಜಾನನ ನಾಯ್ಕ, ರಾಜೇಶ ನಾಯಕ, ಮಂಜಪ್ಪ ಪೂಜಾರ, ಸಂತೋಷ ನಾಯ್ಕ, ಕರಿಯಪ್ಪ ಹರಿಜನ, ವಿಜಯ ಜಾದವ,ದೀಪಾ ಪೈ, ಶೋಭಾ ನಾಯ್ಕ ಪಾಲ್ಗೊಂಡಿದ್ದರು.

e-yellapur.com ಮಾಧ್ಯಮದ ವತಿಯಿಂದ ಶರನ್ನವರಾತ್ರಿಯ ಪ್ರಯುಕ್ತ ನವದುರ್ಗಾ ದರ್ಶನ ಸರಣಿ ಆರಂಭ.

ಶರನ್ನವರಾತ್ರಿಯ ಪ್ರಯುಕ್ತ ಮಾಧ್ಯಮದ ವತಿಯಿಂದ ನವದುರ್ಗಾ ದರ್ಶನ ಎಂಬ ವಿಶೇಷ ಸರಣಿಯು ನಾಳೆಯಿಂದ ಆರಂಭವಾಗಲಿದೆ. ನವರಾತ್ರಿಯ ಸಂದರ್ಭದಲ್ಲಿ ಶಕ್ತಿ ದೇವತೆಗಳ ದರ್ಶನವು ವಿಶೇಷ ಪುಣ್ಯಪ್ರದವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಶಕ್ತಿ ದೇವಾಲಯಗಳ ಕುರಿತು ವಿವಿಧ ವಿಶೇಷ ಮಾಹಿತಿಗಳನ್ನು ಹಾಗೂ ಶ್ರೀದೇವರ ದರ್ಶನವನ್ನು ಬಿತ್ತರಿಸಲು ತೀರ್ಮಾನಿಸಲಾಗಿದೆ. ಓದುಗರು ತಾವು ಇರುವ ಕಡೆಯಿಂದಲೇ ದೇವರ ದರ್ಶನ ಪಡೆಯಬಹುದಾಗಿದೆ. ಒಂಬತ್ತು ದಿನಗಳ ಕಾಲ ಈ ಸರಣಿ ಮುಂದುವರಿಯಲಿದೆ. ಇದೊಂದು ಅಪರೂಪದ ಅವಕಾಶವಾಗಿದ್ದು, ಆಸಕ್ತರು ಶರನ್ನವರಾತ್ರಿಯ ಪ್ರಯುಕ್ತ ಮಾಧ್ಯಮದ ವತಿಯಿಂದ ನವದುರ್ಗಾ ದರ್ಶನ ಎಂಬ ವಿಶೇಷ ಸರಣಿಯು ನಾಳೆಯಿಂದ ಆರಂಭವಾಗಲಿದೆ. ನವರಾತ್ರಿಯ ಸಂದರ್ಭದಲ್ಲಿ ಶಕ್ತಿ ದೇವತೆಗಳ ದರ್ಶನವು ವಿಶೇಷ ಪುಣ್ಯಪ್ರದವಾಗಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

FACEBOOK GROUP – https://www.facebook.com/groups/593852164946589/

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/FIBfndirvSLCTUzJq4BMP1

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading