7-10-2021. ಗುರುವಾರ.

E-YELLAPUR.COM NEWS.

ಯಲ್ಲಾಪುರ ಪಟ್ಟಣದ ನಾಯಕನಕೆರೆ ಪ್ರದೇಶದಲ್ಲಿ ನೆಲೆನಿಂತಿರುವ ಶ್ರೀಬಾಲಾ ತ್ರಿಪುರ ಸುಂದರಿ ಶಾರದಾಂಬಾ ಸನ್ನಿಧಿಯು ಜಾಗ್ರತ ಕ್ಷೇತ್ರವೆಂದೇ ಪರಿಗಣಿಸಲ್ಪಟ್ಟಿದೆ. ಶ್ರೀಸ್ವರ್ಣವಲ್ಲೀ ಮಠದ ಶಾಖಾ ಮಠವಾದ ಈ ದೇವಾಲಯವು ಶತಮಾನಗಳ ಹಿಂದೆ ಮಹಾ ತಪಸ್ವಿಗಳಾದ ಆತ್ಮಾನಂದ ಸರಸ್ವತೀ ಸ್ವಾಮೀಜಿಯವರಿಂದ ಪ್ರತಿಷ್ಠಾಪಿಸಲ್ಪಟ್ಟಿತು.

ಈಗ ಈ ದೇವಾಲಯವನ್ನು ಹೊಸದಾಗಿ ನಿರ್ಮಿಸಲಾಗಿದ್ದು, ಸ್ವರ್ಣವಲ್ಲೀ ಶ್ರೀಗಳಿಂದ ಪುನಃಪ್ರತಿಷ್ಠೆಯಾಗಿದೆ. ವಿಶಾಲವಾದ ಕೆರೆ,ಸುಂದರ ಪರಿಸರದಿಂದ ಕೂಡಿದ ದೇವಾಲಯದ ಆವಾರದಲ್ಲಿ ಆಂಜನೇಯ,ಶಂಕರಾಚಾರ್ಯ,ನಾಗ ದೇವತಾ ದೇವಾಲಯಗಳಿವೆ. ಪಾಠ ಶಾಲೆ ಇದೆ. ಪ್ರತಿ ನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.

ನವದುರ್ಗಾ ದರ್ಶನ -1 VIDEO

ನವದುರ್ಗಾ ದರ್ಶನ -1 VIDEO

ಪ್ರಸ್ತುತ ಶರನ್ನವರಾತ್ರಿಯ ಸಂದರ್ಭಲ್ಲಿ ನಿತ್ಯ ಸಪ್ತಶತೀ ಪಾರಾಯಣ,ವೇದಪಾರಾಯಣ,ಮಹಾಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಲಲಿತಾ ಪಂಚಮಿಯಂದು ನವಚಂಡಿ ಹವನ ಹಾಗೂ ವಿಜಯ ದಶಮಿಯಂದು ಸನ್ನಿಧಿಯಲ್ಲಿ ವಿಶೇಷವಾದ ಅಕ್ಷರಾರಂಭ ಸೇವೆ ನಡೆಯುತ್ತದೆ.
ವರ್ಷಂಪ್ರತಿ ನಡೆಯುತ್ತಿದ್ದ ಅನ್ನಪ್ರಸಾದ ಹಾಗೂ ಸಾಂಸ್ಕೃತಿಕ
ಕಾರ್ಯಕ್ರಮಗಳು ಈ ವರ್ಷ ಇರುವುದಿಲ್ಲ ಎಂದು ತಿಳಿಸಲಾಗಿದೆ.

ADVT

ನವರಾತ್ರಿಯ ಇಂದಿನ ವಿಶೇಷತೆ;

ನವರಾತ್ರಿಯ ಮೊದಲ ದಿನ ದೇವಿಯನ್ನು ಶೈಲಪುತ್ರಿ ರೂಪದಲ್ಲಿ ಪೂಜಿಸಲಾಗುತ್ತದೆ.

ವಂದೇ ವಾಂಛಿತ ಲಾಭಾಯ ಚಂದ್ರಾರ್ಧಕೃತಶೇಖರಂ |
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಂ ||

ಶೈಲ ಎಂದರೆ ಪರ್ವತ. ಅವಳು ಅಷ್ಟು ದೃಢ. ಆದ್ದರಿಂದ ಈ ದೇವಿಗೆ ಆ ಹೆಸರು ಬಂದಿದೆ. ಈ ದೇವಿಯನ್ನು ಪೂಜಿಸಿದಾಗ ನಮಗೆ ದೃಢತೆ ಹೆಚ್ಚಾಗುತ್ತದೆ. ಪಾರ್ವತಿ ದೇವಿ ಶಿವನನ್ನು ಪಡೆಯಲು ಕಠೋರ ತಪಸ್ಸು ಮಾಡಿದ್ದಳು. ಈಕೆಯನ್ನು ಪರೀಕ್ಷೆ ಮಾಡಲು ಸಪ್ತ ಋಷಿಗಳು ಬಂದಿದ್ದರಂತೆ. ಆದರೆ ದೇವಿ ತನ್ನ ಸಂಕಲ್ಪದಂತೆ ಬೆಟ್ಟದಂತೆ ದೃಢವಾಗಿದ್ದಳು. ದೇವಿ ಶೈಲಪುತ್ರಿಯನ್ನು ಯಾವಾಗಲೂ ಆದಿಶಕ್ತಿಯೆಂದು ಗುರುತಿಸಲಾಗಿದೆ. ಆಕೆ ಗೂಳಿ ಮೇಲೆ ಸವಾರಿ ಮಾಡುತ್ತಿದ್ದ ಕಾರಣ ಆಕೆಯನ್ನು ವೃಷರುಧ ಎಂದು ಕರೆಯಲಾಗುತ್ತದೆ. ಆಕೆಗೆ ಎರಡು ಕೈಗಳಿದ್ದು, ಒಂದರಲ್ಲಿ ತ್ರಿಶೂಲ ಮತ್ತೊಂದರಲ್ಲಿ ಕಮಲದ ಹೂವಿದೆ. ಅರ್ಧಚಂದ್ರಾಕೃತಿಯು ಆಕೆಯ ಹಣೆಯಲ್ಲಿದೆ. ದೇವಿ ಶೈಲಪುತ್ರಿಯು ಈ ಮೂಲಾಧಾರ ಚಕ್ರದ ದೇವತೆ. ಈ ಚಕ್ರವು ಸ್ಥಿರತೆ ಮತ್ತು ಶಕ್ತಿಯ ಪ್ರತೀಕವಾಗಿದೆ. ಜೀವನದಲ್ಲಿ ಶಕ್ತಿ ಹಾಗೂ ಸ್ಥಿರತೆ ಪ್ರಾಪ್ತಿಯಾಗಲು ನವರಾತ್ರಿಯ ಮೊದಲ ದಿನ ಶೈಲಪುತ್ರಿ ದೇವಿಯನ್ನು ಪೂಜಿಸಬೇಕು.

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

FACEBOOK GROUP – https://www.facebook.com/groups/593852164946589/

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/FIBfndirvSLCTUzJq4BMP1

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading