10-10-2021. ರವಿವಾರ.
E-YELLAPUR.COM NEWS.

ಶಿರಸಿ

ಜಿಲ್ಲೆಯಲ್ಲಿ ಉತ್ತಮ ತಾಂತ್ರಿಕ ಶಿಕ್ಷಣ ನೀಡುತ್ತಿರುವ ಶಿರಸಿಯ ಎಂ.ಇ.ಎಸ್. ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರುಷದ ಡಿಪ್ಲೋಮಾ ಇಂಜನಿಯರಿಂಗ್ ವಿದ್ಯಾರ್ಥಿಗಳಿಗೆ, ಡಿಪ್ಲೋಮಾ ಪದವೀಧರರಿಗಿರುವ ಔದ್ಯೋಗಿಕ ಅವಕಾಶಗಳ ಕುರಿತಾಗಿ ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ದೀವಗಿ ಟಾರ್ಕ ಟ್ರಾನ್ಸಪರ್ ಸಿಸ್ಟಂನ ನಿವೃತ್ತ ಗ್ರೂಪ್ ಹೆಡ್ ಸುಧೀಂದ್ರ ಪಿ. ದೇಶಪಾಂಡೆಯವರು ಡಿಪ್ಲೋಮಾ ಮುಗಿಸಿರುವ ವಿದ್ಯಾರ್ಥಿಗಳಿಗೆ ಬೇರೇ-ಬೇರೆ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳು ಲಭ್ಯವಿರುವ ಬಗ್ಗೆ ಮಾಹಿತಿ ನೀಡಿದರು.

ಅಲ್ಲದೇ ತಾಂತ್ರಿಕ ಸಂಸ್ಥೆಗಳಲ್ಲಿ , ವಿವಿಧ ವಿಭಾಗಳ ಸಂರಚನೆಗಳ ಬಗ್ಗೆ, ವಿದ್ಯಾರ್ಥಿಗಳು, ನೌಕರರಿಗೆ ಇರಬೇಕಾದ ಸಾಮಾಜಿಕ ಹೊಣೆಗಾರಿಕೆ, ಮೌಲ್ಯಗಳು ಮತ್ತು ಬಧ್ಧತೆ ಇವುಗಳ ಕುರಿತಾಗಿ ಸಮಗ್ರವಾಗಿ ತಿಳಿಸಿದರು.

ADVT

ಇವೆಲ್ಲವುಗಳನ್ನು ಅಳವಡಿಸಿಕೊಂಡಾಗ ಮಾತ್ರ ಉನ್ನತಮಟ್ಟಕ್ಕೇರಲು ಸಾಧ್ಯವೆಂದು ತಿಳಿಸಿದರು, ಶಿಕ್ಷಣಾಸಕ್ತ ವಿದ್ಯಾರ್ಥಿಗಳು ಈ ಸಂಸ್ಥೆಯ ಡಿಪ್ಲೋಮಾ ಇಂಜಿನಿಯರಿಂಗ್ ಕೋರ್ಸುಗಳಿಗೆ ಪ್ರವೇಶ ಪಡೆದು , ತಾಂತ್ರಿಕ ಶಿಕ್ಷಣದಿಂದ ಉಜ್ವಲ ಭವಿóಷ್ಯ ರೂಪಿಸಿಕೊಳ್ಳುವಂತೆ ಕರೆನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಪ್ರಭಾರಿ ಪ್ರಾಚಾರ್ಯ ಜಗನ್ನಾಥ ಅವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

FACEBOOK GROUP – https://www.facebook.com/groups/593852164946589/

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/FIBfndirvSLCTUzJq4BMP1

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading