9-10-2021 ಶನಿವಾರ.

E-YELLAPUR.COM NEWS.

ಯಲ್ಲಾಪುರ ಪಟ್ಟಣದ ಮಧ್ಯವರ್ತಿ ಸ್ಥಳದಲ್ಲಿ, ಗುಡ್ಡದ ಮೇಲೆ ಭವ್ಯವಾದ ಆಲಯದಲ್ಲಿ ವಿರಾಜಮಾನಳಾಗಿರುವ ಕೋಟೆಕರಿಯಮ್ಮ ದೇವಿಯು ಭಕ್ತರನ್ನು ಪೊರೆಯುವ ಮಹಾಮಾತೆಯಾಗಿದ್ದಾಳೆ. ಈ ದೇವಾಲಯಕ್ಕೆ ಮಹೋನ್ನತವಾದ ಐತಿಹಾಸಿಕ ಹಿನ್ನೆಲೆ ಇದೆ. ಅನೇಕ ವರ್ಷಗಳ ಹಿಂದೆ ಸಾಮಂತ ರಾಜನೊಬ್ಬ ಈ ಪ್ರದೇಶದಲ್ಲಿ ವಿಶಾಲವಾದ ಕೋಟೆಯನ್ನು ಕಟ್ಟಿ ಆಡಳಿತ ನಡೆಸಿದ ಬಗ್ಗೆ ಉಲ್ಲೇಖಿಸಲಾಗಿದೆ.

ರಾಜನ ಕೋಟೆಯೊಳಗೆ ಪ್ರತಿಷ್ಠಾಪಿಸಲ್ಪಟ್ಟ ದೇವಿಯು ಊರನ್ನು ರಕ್ಷಿಸುತ್ತಿದ್ದಳು. ಆಗ ವೈಭವದ ಪೂಜೆ ನಡೆಯುತ್ತಿತ್ತು. ಈಗ ಈ ಪ್ರದೇಶದಲ್ಲಿ ಕೋಟೆಯ ಹಾಗೂ ಐತಿಹಾಸಿಕ ಅವಶೇಷಗಳು ಭೂಮಿಯೊಳಗೆ ಹುದುಗಿವೆ ಎನ್ನುತ್ತಾರೆ ಈ ದೇವಾಲಯದ ಕಾರ್ಯದರ್ಶಿ ಮಧುಸೂದನ ಬಾಳಗಿ.

ಕಳೆದ 10 ವರ್ಷಗಳ ಹಿಂದೆ ಇಲ್ಲಿನ ಆಲದ ಮರದ ಕೆಳಗಡೆ ಇದ್ದ ಪುರಾತನ ದೇವಿಯ ವಿಗ್ರಹವನ್ನು ತಂದು ಪ್ರತಿಷ್ಠಾಪಿಸಿ, ಈಗ ಆಕರ್ಷಕ ದೇವಾಲಯವನ್ನು ನಿರ್ಮಿಸಲಾಗಿದೆ. ಗರ್ಭಗುಡಿಯ ಇಕ್ಕೆಲಗಳಲ್ಲಿ ಪರಿವಾರ ದೇವತೆಗಳಾದ ರುದ್ರ ಹಾಗೂ ಸುಬ್ರಹ್ಮಣ್ಯ ದೇವರ ಗುಡಿ ಇದೆ. ಹಬ್ಬ-ಹರಿದಿನಗಳಂದು ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಶರನ್ನವರಾತ್ರಿಯ ಸಂದರ್ಭದಲ್ಲಿ ದೇವರ ಸನ್ನಿಧಿಯಲ್ಲಿ ಸಪ್ತಶತಿ ಪಾರಾಯಣ, ಹಣ್ಣು-ಕಾಯಿ,ಉಡಿಸೇವೆ ಮುಂತಾದವುಗಳು ನಡೆಯುತ್ತವೆ. ಪ್ರತಿ ದಿನ ಸಾಯಂಕಾಲ ಲಲಿತಾ ಸಹಸ್ರನಾಮದಿಂದ ಶ್ರೀದೇವರಿಗೆ ಅರ್ಚನೆ ನಡೆಯುತ್ತದೆ. ಪ್ರತಿ ದಿನ ದೇವರಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ.

ನವರಾತ್ರಿಯ ಮೂರನೇ ದಿನದ ದೇವಿಯ ರೂಪ ಚಂದ್ರಘಂಟಾ.

ಶರನ್ನವರಾತ್ರಿಯ ಇಂದಿನ ದಿನ ದೇವಿಯ ಪ್ರತಿರೂಪವಾದ ಚಂದ್ರಗಂಟಾ ದೇವಿಯು ಭಕ್ತರ ಕಷ್ಟಗಳನ್ನು ಕ್ಷಣಮಾತ್ರದಲ್ಲೇ ನಿವಾರಿಸಿ, ಸಂತೋಷ, ಸಮೃದ್ಧಿಯನ್ನು ನೀಡುತ್ತಾಳೆ.
ದುಷ್ಟಶಕ್ತಿಗಳಿಗೆ ಸಿಂಹಸ್ವಪ್ನವಾಗಿಯೂ, ತನ್ನ ಭಕ್ತರನ್ನು ಪ್ರೀತಿಯಿಂದ ಸಲಹುವ ತಾಯಿ ಈಕೆ. ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು
ಚಂದ್ರಘಂಟೆಯನ್ನು ಚಂದ್ರಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಇವಳಿಗೆ ಹತ್ತು ಕೈಗಳಿದ್ದು, ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ.
ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿಯನ್ನು ಪಡೆಯಬಹುದು. ಈಕೆಯನ್ನು ಆರಾಧಿಸಿದರೆ ಮನೆಯಲ್ಲಿ ಎಂದಿಗೂ ಆಹಾರ ಕೊರತೆ ಕಂಡುಬರದು. ಚಂದ್ರಗಂಟಾದೇವಿಯನ್ನು ಮಲ್ಲಿಗೆ ಹೂವುಗಳಿಂದ ಪೂಜಿಸಿದರೆ ಇಷ್ಟಾರ್ಥ ಸಿದ್ಧಿಯಾಗುವುದು.

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

FACEBOOK GROUP – https://www.facebook.com/groups/593852164946589/

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/FIBfndirvSLCTUzJq4BMP1

/

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading