9-1-2022. ಭಾನುವಾರ.

E-YELLAPUR.COM NEWS
ಯಲ್ಲಾಪುರ.
ರಾಜನಹಳ್ಳಿಯ ವಾಲ್ಮೀಕಿ ಮಹಾಸಂಸ್ಥಾನಕ್ಕೆಂದು ಪಟ್ಟಣದ ಬಿಕ್ಕು ಗುಡಿಗಾರ ಕೇಂದ್ರದಲ್ಲಿ ತಯಾರಿಸಲಾದ ಬೃಹತ್ ಭವ್ಯ ರಥವನ್ನು ಭಾನುವಾರ ರಾಜನಹಳ್ಳಿಗೆ ಟ್ರಕ್ ಮೂಲಕ ಕೊಂಡೊಯ್ಯಲಾಯಿತು. ಸಚಿವ ಶಿವರಾಮ ಹೆಬ್ಬಾರ್ ಅವರು ರಥವನ್ನು ವೀಕ್ಷಿಸಿ ಬೀಳ್ಕೊಟ್ಟರು.

ಹಲವು ವಿಶೇಷತೆಗಳಿಂದ ಕೂಡಿದ ಈ ಆಕರ್ಷಕ ರಥದಲ್ಲಿ ರಾಮಾಯಣದ ಪ್ರಮುಖ ಘಟನೆಗಳ ಚಿತ್ರಾವಳಿಯನ್ನು ರಚಿಸಲಾಗಿದೆ. ಆಕರ್ಷಕ ಕುಸುರಿ ಕೆತ್ತನೆ ಇದೆ. ರಂಜಲು,ಸಾಗವಾನಿ,ವಾಟೆ ಮರಗಳನ್ನು ಬಳಸಿ ತಯಾರಿಸಲಾದ ಈ ರಥವನ್ನು ಬಿಡಿ,ಬಿಡಿಯಾಗಿ ರಾಜನಹಳ್ಳಿಗೆ ಕೊಂಡೊಯ್ದು, ಪುನಃ ಜೋಡಿಸಿ, ಅಂತಿಮ ಹಂತದ ಕೆಲಸ ಪೂರ್ಣಗೊಳಿಸಲಾಗುತ್ತದೆ.

ಸದ್ಯದಲ್ಲಿಯೇ ರಾಜನಹಳ್ಳಿ ಸಂಸ್ಥಾನದಲ್ಲಿ ನಡೆಯುವ ಜಾತ್ರಾಮಹೋತ್ಸವದಲ್ಲಿ ಈ ರಥವನ್ನು ಬಳಸಿ ರಥೋತ್ಸವ ನಡೆಸಲಾಗುತ್ತದೆ ಎಂದು ಕಲಾಕೇಂದ್ರದ ಸಂತೋಷ ಗುಡಿಗಾರ್,ಅರುಣ ಗುಡಿಗಾರ್,ಆದಿತ್ಯ ಗುಡಿಗಾರ್ ಅವರು e-yellapur.com News ಪ್ರತಿನಿಧಿಗೆ ಮಾಹಿತಿ ನೀಡಿದ್ದಾರೆ.

ADVT

ವೀಕ್ ಎಂಡ್ ಕರ್ಫ್ಯೂಗೆ ಯಲ್ಲಾಪುರದಲ್ಲಿ ಮಿಶ್ರ ಪ್ರತಿಕ್ರಿಯೆ.

ವೀಕ್ ಎಂಡ್ ಕರ್ಫ್ಯೂಗೆ ಇಂದು ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಟ್ಟಣದಲ್ಲಿ ಜನರ ಹಾಗೂ ವಾಹನಗಳ ಓಡಾಟ ಸೀಮಿತವಾಗಿತ್ತು. ಬೆಳಿಗ್ಗೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬಂದವರ ಓಡಾಟ ಇತ್ತು. ಮಧ್ಯಾಹ್ನದ ನಂತರ ಜನರ ಓಡಾಟ ಕಡಿಮೆ ಇತ್ತು.

ನಾಳೆ ಮುನ್ನೆಚ್ಚರಿಕಾ ಡೋಸ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ.

ಎಲ್ಲ ಆರೋಗ್ಯ ಸಿಬ್ಬಂದಿಗಳಿಗೆ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಮುನ್ನೆಚ್ಚರಿಕಾ ಡೋಸ್ ನೀಡುವ ಕಾರ್ಯಕ್ರಮಕ್ಕೆ ನಾಳೆ ಬೆಳಿಗ್ಗೆ ಸಚಿವ ಶಿವರಾಮ ಹೆಬ್ಬಾರ್ ಅವರು ಚಾಲನೆ ನೀಡಲಿದ್ದಾರೆ. 60 ವರ್ಷ ಮೇಲ್ಪಟ್ಟ ಕೋಮಾರ್ಬಿಡ್ ಇರುವ ಹಿರಿಯ ನಾಗರಿಕರಿಗೂ ಮುನ್ನೆಚ್ಚರಿಕಾ ಡೋಸ್ ನೀಡಲಾಗುವುದು. ತಾಲೂಕಾ ಆಸ್ಪತ್ರೆಯ ಆವಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್ ತಿಳಿಸಿದ್ದಾರೆ.

ಇಂದು ನಂದೊಳ್ಳಿಯಲ್ಲಿ ಒಂದು ಕೋವಿಡ್ ಪ್ರಕರಣ.


ತಾಲೂಕಿನ ನಂದೊಳ್ಳಿಯಲ್ಲಿ (ಯಲ್ಲಾಪುರ ನಗರವೂ ಸೇರಿ) ಇಂದು ಒಂದು ಕೋವಿಡ್ ಪ್ರಕರಣ ಧೃಢಪಟ್ಟಿದೆ.

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

FACEBOOK GROUP – https://www.facebook.com/groups/593852164946589/

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.

https://chat.whatsapp.com/L2CReGIOXdX7UXCxXicb4Q

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading