17-11-2021. ಬುಧವಾರ.

E-YELLAPUR.COM NEWS.


ಯಲ್ಲಾಪುರ.
ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ನಡೆದ ದೇಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್‍ ನವರು (ಐ.ಸಿ.ಎ.ಆರ್.) ನಡೆಸಿದ ರಾಷ್ಟ್ರ ಮಟ್ಟದ ಜೆ.ಆರ್.ಎಫ್. ಪರಿಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಈ ಫಲಿತಾಂಶದಲ್ಲಿ ಯಲ್ಲಾಪುರ ಪವಿತ್ರಮಾತಾ ಭಟ್ ಅವರು ದೇಶಮಟ್ಟದಲ್ಲಿ 32 ನೇ ರ‍್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಸಸ್ಯ ವಿಜ್ಞಾನ (ಪ್ಲಾಂಟ್ ಸೈನ್ಸ್) ವಿಭಾಗದಲ್ಲಿ ಇವರಿಗೆ ಈ ರ‍್ಯಾಂಕ್ ದೊರೆತಿದೆ. ದೇಶದ ವಿವಿದೆಡೆಯ 30 ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಈ ಪರಿಕ್ಷೆಯಲ್ಲಿ ಪಾಲ್ಗೊಂಡಿದ್ದರು. ಪವಿತ್ರಮಾತಾ ಭಟ್ ಅವರು ಪ್ರಸಕ್ತ ಸಾಲಿನಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ. ಅಗ್ರಿ ಪದವಿ ಪೂರೈಸಿದ್ದಾರೆ. ಇವರು ಯಲ್ಲಾಪುರದ ಹಿರಿಯ ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ ಹಾಗೂ ಲಲಿತಾ ಭಟ್ ದಂಪತಿಯ ಪುತ್ರಿ.

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

FACEBOOK GROUP – https://www.facebook.com/groups/593852164946589/

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/JH4e982fHYEHI2R9vegqPh

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading