26-1-2022. ಬುಧವಾರ.

E-YELLAPUR.COM NEWS
ಯಲ್ಲಾಪುರ.
ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯದ ಸಭಾಭವನದಲ್ಲಿ ಬುಧವಾರ ಅಷ್ಟಾವಧಾನ ಕಾರ್ಯಕ್ರಮ ನಡೆಯಿತು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಅವಧಾನಿಗಳಾಗಿ ಗಣೇಶ ಭಟ್ ಕೊಪ್ಪಲತೋಟ ನಡೆಸಿಕೊಟ್ಟರು. ನಿಷೇಧಾಕ್ಷರಿ, ಸಮಸ್ಯಾಪೂರ್ಣ, ದತ್ತಪದಿ, ಚಿತ್ರಕವಿತೆ, ಆಶುಕವಿತೆ, ಕಾವ್ಯವಾಚನ ,ಸಂಖ್ಯಾಬಂಧ, ಅಪ್ರಸ್ತುತ ಪ್ರಸಂಗ ವಿಭಾಗಗಳಲ್ಲಿ ಪ್ರಚ್ಛಕರಾಗಿ ರಾಜಶೇಖರ ಧೂಳಿ, ವೇ.ವಿಘ್ನೇಶ್ವರ ಭಟ್ಟ ಬೀಸಗೋಡು, ನರಸಿಂಹ ಭಟ್ಟ ಕೌಡಿಕೆರೆ, ವಿ.ಮಹೇಶ ಭಟ್ಟ ಇಡಗುಂದಿ, ವೆಂಕಟ್ರಮಣ ಭಟ್ಟ ಚಂದಗುಳಿ, ಗಣಪತಿ ಭಟ್ಟ ಕೋಲಿಬೇಣ, ತಿಮ್ಮಣ್ಣ ಭಟ್ಟ ಹೊನ್ನಗದ್ದೆ, ಪೂರ್ಣಿಮಾ ಉಪಾಧ್ಯಾಯ ಪಾಲ್ಗೊಂಡಿದ್ದರು. ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಗುರುರಾಜ ಕುಂದಾಪುರ ಹಾಗೂ ಶಿಕ್ಷಕರು, ವಿಧ್ಯಾರ್ಥಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಬಿ.ಇಡಿ ವಿಭಾಗದ ಪ್ರಾಚಾರ್ಯ ಎಸ್.ಎಲ್.ಭಟ್ಟ ಸ್ವಾಗತಿಸಿದರು. ವೀಣಾ ಭಾಗ್ವತ್ ನಿರೂಪಿಸಿದರು.

ADVT

E-YELLAPUR.COM NEWS.
ನಾಳೆ ವಿದ್ಯುತ್ ವ್ಯತ್ಯಯ.
ತಾಲೂಕಿನ ಕಿರವತ್ತಿಯ 110/11 ಕೆ.ವಿ.ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸ ಇರುವುದರಿಂದ ಯಲ್ಲಾಪುರ ಪಟ್ಟಣ,ಇಡಗುಂದಿ,ವಜೃಳ್ಳಿ,ಬೀಸಗೋಡ,ಆನಗೋಡ,ದೇಹಳ್ಳಿ,ಮಾಗೋಡ,ಉಪ್ಪಳೇಶ್ವರ,ಕಣ್ಣಿಗೇರಿ ಮಾರ್ಗದಲ್ಲಿ ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ( ಅಂತಿಮ ಬದಲಾವಣೆಗೆ ಒಳಪಟ್ಟಿದೆ ).

ಚಿತ್ರ ಸುದ್ದಿ.

ಪಟ್ಟಣದ ತಾಲೂಕಾ ಪಂಚಾಯತಿ ಆವಾರದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್ ಧ್ವಜಾರೋಹಣ ನೆರವೇರಿಸಿದರು.

ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿ ಆವಾರದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಧ್ವಜಾರೋಹಣ ನೆರವೇರಿಸಿದರು.

ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಆವಾರದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಬಿ.ಆರ್.ಪಿ.ಸಂಜೀವ ಕುಮಾರ್ ಹೊಸ್ಕೇರಿ ಹಾಗೂ ಇತರರು ಇದ್ದರು.

ತಾಲೂಕಿನ ಬೈಲಂದೂರು ಗೌಳಿವಾಡಾ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಶಾಲಾ ಅಭಿವೃದ್ಧಿ ಸಮೀತಿಯ ಭಕ್ಕು ಥೋರತ್ ಧ್ವಜಾರೋಹಣ ನೆರವೇರಿಸಿದರು. ಶಿಕ್ಷಕರಾದ ನಾರಾಯಣ ಕಾಂಬ್ಳೆ, ನಾಗರಾಜ ಹುಡೇದ ಇದ್ದರು.

ಪಟ್ಟಣದ ಪೋಲೀಸ್ ಠಾಣಾ ಆವಾರದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಸಿಪಿಐ ಸುರೇಶ ಯಳ್ಳೂರು ಧ್ವಜಾರೋಹಣ ನೆರವೇರಿಸಿದರು.

ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಣ ಸಲಹೆಗಾರ ತಿಮ್ಮಣ್ಣ ಭಟ್ ಧ್ವಜಾರೋಹಣ ನೆರವೇರಿಸಿದರು. ಅವಧಾನಿ ಗಣೇಶ ಭಟ್ಟ ಕೊಪ್ಪಲತೋಟ, ವ್ಯವಸ್ಥಾಪಕ ಗುರುರಾಜ ಕುಂದಾಪುರ ಹಾಗೂ ಶಿಕ್ಷಕರು, ಸಿಬ್ಬಂದಿಗಳು, ವಿಧ್ಯಾರ್ಥಿಗಳು ಇದ್ದರು.

FACEBOOK GROUP – https://www.facebook.com/groups/593852164946589/

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.

https://chat.whatsapp.com/L2CReGIOXdX7UXCxXicb4Q

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading