26-1-2022. ಬುಧವಾರ.

E-YELLAPUR.COM NEWS
ಯಲ್ಲಾಪುರ.
ಪಟ್ಟಣದ ನಾಯಕನಕೆರೆ ಶಾರದಾಂಬಾ ದೇವಾಲಯದಲ್ಲಿ, ದೇವಾಲಯದ ನೂತನ ಆಡಳಿತ ಮಂಡಳಿಯ ಸಭೆಯು ಬುಧವಾರ ಸಂಜೆ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಜಗದೀಶ ದೀಕ್ಷಿತ್, ಕಾರ್ಯದರ್ಶಿ ನರಸಿಂಹ ಗೇರಗದ್ದೆ, ಅರ್ಚಕ ಗೋಪಾಲಕೃಷ್ಣ ಭಟ್ಟ, ಪ್ರಮುಖರಾದ ಶ್ರೀನಿವಾಸ ಗಾಂವ್ಕಾರ್, ಅಶೋಕ ಶೆಟ್ಟಿ, ಜಿ.ಎನ್.ಭಟ್ ತಟ್ಟಿಗದ್ದೆ, ಎಸ್.ವಿ.ಭಟ್, ಸುಬ್ರಹ್ಮಣ್ಯ ಹೆಗಡೆ, ಶಂಕರ ಭಟ್ಟ ತಾರಿಮಕ್ಕಿ, ಟಿ.ಎನ್.ಭಟ್ಟ, ದತ್ತಾತ್ರೇಯ ಮುಂಡಗೋಡಿ, ಸುಬ್ರಾಯ ಭಟ್ಟ, ವಾಸುದೇವ ಹೆಗಡೆ, ವಿಶ್ವನಾಥ ಭಟ್ಟ ಶೀರ್ಲೆ, ಅನಂತ ಭಟ್ಟ ಮುಂತಾದವರು ಇದ್ದರು.

ಜ.30 ಭಾನುವಾರ ಶಾರದಾಂಬಾ ದೇವಾಲಯದ ಆವಾರದಲ್ಲಿ ಶ್ರಮದಾನ.

E-YELLAPUR.COM NEWS ; ಜನವರಿ 30 ಭಾನುವಾರದಂದು ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯದ ಆವಾರದಲ್ಲಿ ಶ್ರಮದಾನ ನಡೆಯಲಿದೆ. ಅಂದು ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯ ವರೆಗೆ ಶ್ರಮದಾನ ನಡೆಯಲಿದೆ. ಆಸಕ್ತರು ಶ್ರಮದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVT

ಬುಧವಾರ ಯಲ್ಲಾಪುರ ತಾಲೂಕಿನಲ್ಲಿ 11 ಜನರಿಗೆ ಕೊರೋನಾ ಸೋಂಕು.

E-YELLAPUR.COM NEWS ; ಇಂದು ಯಲ್ಲಾಪುರ ತಾಲೂಕಿನ ನಂದೊಳ್ಳಿ,ಯಲ್ಲಾಪುರದಲ್ಲಿ -7, ಮಲವಳ್ಳಿ-2, ಕಿರವತ್ತಿ-1,ವಜೃಳ್ಳಿಯಲ್ಲಿ -1 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇಂದು 55 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ತಾಲೂಕಿನಲ್ಲಿ 258 ಸಕ್ರೀಯ ಕೋವಿಡ್ ಪ್ರಕರಣಗಳು ಇವೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ,ನರೇಂದ್ರ ಪವಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

FACEBOOK GROUP – https://www.facebook.com/groups/593852164946589/

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.

https://chat.whatsapp.com/L2CReGIOXdX7UXCxXicb4Q

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading