30-1-2022. ಭಾನುವಾರ.

E-YELLAPUR.COM NEWS
ಯಲ್ಲಾಪುರ.
ಪಟ್ಟಣದ ವಿಶ್ವದರ್ಶನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರೀಡಾ ವಿಜೇತ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಬಹುಮಾನವನ್ನು ವಿತರಿಸಿದ ಪ್ರಗತಿಪರ ಕೃಷಿಕ, ಶಿಕ್ಷಣ ಪ್ರೇಮಿ ನಾರಾಯಣ ಹೆಗಡೆ ಗಡಿಕೈ ಮಾತನಾಡಿ, ಪಠ್ಯ ಚಟುವಟಿಕೆಗಳಿಗಿಂತ ಶಾಲೆಗಳಲ್ಲಿ ಕಲಿಸುವ ಜೀವನ ಶಿಕ್ಷಣ ಅಮೂಲ್ಯವಾದದ್ದು. ಕೇವಲ ಪುಸ್ತಕಗಳನ್ನು ಓದುವುದರಿಂದ ಎಲ್ಲ ರೀತಿಯ ಶಿಕ್ಷಣ ದೊರೆಯುವುದಿಲ್ಲ. ಶಾಲಾ ಹಂತದಲ್ಲಿ ಜೀವನ ಶಿಕ್ಷಣ ಒದಗಿಸುವ ಅಗತ್ಯವಿದೆ. ಬಾಲ್ಯದಲ್ಲಿಯೇ ಪಡೆದ ಶಿಕ್ಷಣ ಶಾಶ್ವತವಾಗಿರುತ್ತದೆ. ಆ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಸ್ಪೂರ್ತಿದಾಯಕ ವಿಚಾರಗಳನ್ನು ಕಲಿಸಬೇಕು. ಸಾಧಕರ ಬಗ್ಗೆ ಪರಿಚಯಿಸಿ ಅವರ ಸಾಧನೆಯ ಶ್ರಮದ ಕುರಿತು ವಿವರಿಸಬೇಕು. ಮಹತ್ವದ ಸಾಧನೆ ಮಾಡಿದ ವ್ಯಕ್ತಿಗಳ ಜೀವನದ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂದರು.

ADVT

ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅವರು ಗೌರವಿಸಿದರು. ಆದರ್ಶ ವಿದ್ಯಾರ್ಥಿಯಾಗಿ ಗುರುತಿಸಿಕೊಂಡ ಆದರ್ಶ ಪ್ರಸನ್ನ ಹೆಗಡೆಕಟ್ಟೆಗೆ ಸನ್ಮಾನಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕ ಗುರುರಾಜ ಕುಂದಾಪುರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ, ಶಿಕ್ಷಕರಾದ ಮುಕ್ತಾ ಶಂಕರ್, ಗಣೇಶ ಭಟ್ಟ, ಪ್ರಸನ್ನ ಹೆಗಡೆ, ಲೆಕ್ಕಪರಿಶೋಧಕ ವಿಘ್ನೇಶ್ವರ ಗಾಂವ್ಕರ್, ಪ್ರಮುಖರಾದ ಪ್ರಕಾಶ ಭಟ್ಟ, ಆಸ್ಮಾ ಶೇಖ್ ಮೊದಲಾದವರು ಇದ್ದರು.

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

FACEBOOK GROUP – https://www.facebook.com/groups/593852164946589/

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.

https://chat.whatsapp.com/L2CReGIOXdX7UXCxXicb4Q

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading