30-1-2022 ಭಾನುವಾರ.
E-YELLAPUR.COM NEWS
ಯಲ್ಲಾಪುರ.
ತಾಲೂಕಿನ ಕೆಳಾಸೆಯ 26 ವರ್ಷದ ಮಹಿಳೆಯನ್ನು ಹೆರಿಗೆಗೆಂದು 108 ಅಂಬ್ಯುಲೆನ್ಸ್ ನಲ್ಲಿ ಯಲ್ಲಾಪುರ ತಾಲೂಕಾ ಆಸ್ಪತ್ರೆಗೆ ತರುತ್ತಿದ್ದ ಸಂದರ್ಭದಲ್ಲಿ ಹೆರಿಗೆ ನೋವು ಹೆಚ್ಚಾಗಿ ತಾಲೂಕಿನ ಇಡಗುಂದಿಯ ಬಳಿ ಅಂಬ್ಯುಲೆನ್ಸ್ ನಲ್ಲಿ ಇದ್ದ ಸಿಬ್ಬಂದಿಗಳು ಸುರಕ್ಷಿತ ಹೆರಿಗೆ ಮಾಡಿಸಿದ ಘಟನೆ ನಡೆದಿದೆ.
( ನಿಖರ,ನಿರಂತರ, ಸಮಗ್ರ ಸುದ್ದಿಗಳಿಗಾಗಿ e-yellapur.com digital News ಓದಿ.)
ADVT
ಮಹಿಳೆಗೆ ಇದು ಮೊದಲ ಹೆರಿಗೆಯಾಗಿದ್ದು, ನವಜಾತ ಶಿಶು 2.5 ಕೆ.ಜಿ.ತೂಕ ಇದೆ. ಮಹಿಳೆಯ ತಾಯಿಯ ಸಹಕಾರದಿಂದ ತುರ್ತು ವೈದ್ಯಕೀಯ ತಂತ್ರಜ್ಞೆ ಕುಸುಮಾ ನಾಯ್ಕ ಹಾಗೂ ಅಂಬ್ಯುಲೆನ್ಸ್ ಚಾಲಕ ತಬ್ರೇಜ್ ಶೇಕ್ ಅವರು ಹೆರಿಗೆ ಮಾಡಿಸಿದ್ದು, ಇವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಯಲ್ಲಾಪುರದಲ್ಲಿಭಾನುವಾರ 73 ಜನರಿಗೆ ಕೋವಿಡ್ ಸೋಂಕು, ಓರ್ವ ವ್ಯಕ್ತಿ ಮೃತ.
E-YELLAPUR.COM NEWS . ಯಲ್ಲಾಪುರ ತಾಲೂಕಿನಲ್ಲಿ ಭಾನುವಾರ 73 ಜನರಿಗೆ ಕೋವಿಡ್ ಸೋಂಕು ಧೃಢಪಟ್ಟಿದೆ. ತಾಲೂಕಿನಲ್ಲಿ 423 ಸಕ್ರೀಯ ಕೋವಿಡ್ ಪ್ರಕರಣಗಳು ಇವೆ.
ಕೋವಿಡ್ ಹಾಗೂ ಇತರ ಖಾಯಿಲೆಗಳಿಂದ ಬಳಲುತ್ತಿದ್ದ 79 ವರ್ಷದ ವ್ಯಕ್ತಿಯೊಬ್ಬರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಿಂದ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ತರುತ್ತಿರುವಾಗ ಹಳಿಯಾಳ ಕ್ರಾಸ್ ಸಮೀಪ ಅಂಬ್ಯುಲೆನ್ಸ್ ನಲ್ಲಿಯೇ ಮರಣ ಹೊಂದಿದ ಘಟನೆ ನಡೆದಿದೆ. ತೀವೃ ಜ್ವರದಿಂದ ಬಳಲುತ್ತಿದ್ದ ಇವರನ್ನು ಜ.21ರಂದು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆಂದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
( ನಿಖರ,ನಿರಂತರ, ಸಮಗ್ರ ಸುದ್ದಿಗಳಿಗಾಗಿ e-yellapur.com digital News ಓದಿ.) ಚಿಕಿತ್ಸೆಗೆ ಸ್ಪಂದಿಸದೇ ಇದ್ದ ಕಾರಣ ಜ.29ರಂದು ರಾತ್ರಿ ವಾಪಸ್ ಯಲ್ಲಾಪುರ ಆಸ್ಪತ್ರೆಗೆ ತರಲಾಗುತ್ತಿತ್ತು. ತಾಲೂಕಿನಲ್ಲಿ ಈವರೆಗೆ ಕೋವಿಡ್ ಸೋಂಕಿನಿಂದ ಮರಣ ಹೊಂದಿದವರ ಸಂಖ್ಯೆ 41 ಕ್ಕೆ ಏರಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್ ಇಂದು ಸಂಜೆ ಮಾಹಿತಿ ನೀಡಿದ್ದಾರೆ.
ಹೋಲಿ ರೋಜರಿ ಶಾಲೆಯಲ್ಲಿ ರಾಷ್ಟ್ರೀಯ ಹುತಾತ್ಮರ ದಿನಾಚರಣೆ.
E-YELLAPUR.COM NEWS ಯಲ್ಲಾಪುರ ಪಟ್ಟಣದ ಹೋಲಿ ರೋಜರಿ ಪ್ರೌಢ ಶಾಲೆಯಲ್ಲಿ ಭಾನುವಾರ ರಾಷ್ಟ್ರೀಯ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು. ದೇಶಕ್ಕಾಗಿ ಹುತಾತ್ಮರಾದ ಮಹನೀಯರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
( ನಿಖರ,ನಿರಂತರ, ಸಮಗ್ರ ಸುದ್ದಿಗಳಿಗಾಗಿ e-yellapur.com digital News ಓದಿ.)
ಎರಡು ನಿಮಿಷದ ಮೌನಾಚರಣೆ ಮಾಡಲಾಯಿತು.
ಶಾಲಾ ಮುಖ್ಯಾಧ್ಯಾಪಕ ಫಾದರ್ ರೇಮಂಡ್ ಫರ್ನಾಂಡೀಸ್, ಶಿಕ್ಷಕರಾದ ಅಂತೋನ ರೋಡ್ರಿಗಸ್, ಚಂದ್ರಶೇಖರ, ಜಗದೀಶ ಭಟ್ಟ, ವೆಂಕಟ್ರಮಣ ಭಟ್ಟ, ಎಂ.ರಾಜಶೇಖರ್ ಮುಂತಾದವರು ಇದ್ದರು.
ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur
FACEBOOK GROUP – https://www.facebook.com/groups/593852164946589/
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q
- ಮೊದಲನೇ ಪ್ರಜಾಸೇವೆ ಆಂದೋಲನ ಸಭೆಯ 1163 ಅರ್ಜಿಗಳ ವಿಲೇವಾರಿ : ಜಿಲ್ಲಾಧಿಕಾರಿ
by TEAM E – YELLAPUR
- ಗಂಧದ ಮರ ಕಡಿದವರು ಯಾರು? ತೀವ್ರಗೊಂಡ ತನಿಖೆ
by TEAM E – YELLAPUR
- ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: 10 ಜನರ ವಿರುದ್ಧ ಪ್ರಕರಣ ದಾಖಲು
by TEAM E – YELLAPUR
- ಬೈಕಿಗೆ ಕ್ರೂಸರ್ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೇ ಬೈಕ್ ಸವಾರ ಸಾವು
by TEAM E – YELLAPUR
- ಶಾಂತಿ, ಸೌಹಾರ್ದಯುತ ಗಣೇಶೋತ್ಸವ ಆಚರಣೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್
by TEAM E – YELLAPUR
- ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ!
by TEAM E – YELLAPUR
- ಪಡಿತರ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು
by TEAM E – YELLAPUR
- ಸ್ವದೇಶಿ ವಸ್ತುಗಳ ಮಾರಾಟ ಮೇಳ, ಆಹಾರ ಮೇಳಕ್ಕೆ ಉದ್ಯಮಿ ಬಾಲು ನಾಯಕ ಚಾಲನೆ
by TEAM E – YELLAPUR
- ಹಾಲು ಸಂಗ್ರಹಣೆ ಮತ್ತು ಮಾರಾಟದಲ್ಲಿ ಆನಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಉತ್ತಮ ಸಾಧನೆ
by TEAM E – YELLAPUR
- ಡಿ.ಜೆ. ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ
by TEAM E – YELLAPUR
- ಶಿಕ್ಷಕಿ ಉಷಾಬಾಯಿ ನಾಯಕರಿಗೆ ಕಾಯಕರತ್ನ ಪ್ರಶಸ್ತಿ ಪ್ರದಾನ
by TEAM E – YELLAPUR
- ಯಲ್ಲಾಪುರದಲ್ಲಿ ಸೆ.11ರಿಂದ ಮೂರು ದಿನ ಸ್ವದೇಶಿ ವಸ್ತುಗಳ ಮಾರಾಟ ಮೇಳ ಮತ್ತು ಆಹಾರ ಮೇಳ
by TEAM E – YELLAPUR
- ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಪಾಲ್ಗೊಂಡ ಉದ್ಯಮಿ ಬಾಲು ನಾಯಕ
by TEAM E – YELLAPUR
- ಲಯನ್ಸ್ ಕ್ಲಬ್ ವತಿಯಿಂದ ಅದ್ದೂರಿಯಾಗಿ ನಡೆದ ಬಾಲಗೋಪಾಲ ಮತ್ತು ರಾಧಾ-ಕೃಷ್ಣ ವೇಷ ಸ್ಪರ್ಧೆ
by TEAM E – YELLAPUR
- ಅರಣ್ಯ ಇಲಾಖೆಯ ಕಾರ್ಯಾಚರಣೆ: ವನ್ಯಜೀವಿ ಉತ್ಪನ್ನಗಳ ಅಕ್ರಮ ಸಾಗಾಟ ಜಾಲ ಪತ್ತೆ, ಇಬ್ಬರ ಬಂಧನ
by TEAM E – YELLAPUR
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related