ಯಲ್ಲಾಪುರ.
2-2-2022. ಬುಧವಾರ.

E-YELLAPUR.COM NEWS
ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಪಾರಸು ಮಾಡುವಂತೆ ಒತ್ತಾಯಿಸಿ ತಾಲೂಕಾ ಮಡಿವಾಳ ಸಮುದಾಯದವರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ನಿಖರ,ನಿರಂತರ,ಸಮಗ್ರ ವರದಿಗಾಗಿ e-yellapur.com digital news ಓದಿ. ಈ ಕುರಿತು ಸಲ್ಲಿಸಿದ ಮನವಿಯಲ್ಲಿ ಮಡಿವಾಳ ಸಮುದಾಯವನ್ನು ದೇಶದ 18 ರಾಜ್ಯಗಳಲ್ಲಿ ಹಾಗೂ 3 ಕೇಂದ್ರಾಡಳತ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ರಾಜ್ಯದಲ್ಲಿಯೂ ನಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಆಗ್ರಹಿಸಲಾಗಿದೆ.
ಮನವಿಯನ್ನು ಗ್ರೇಡ್-2 ತಹಸೀಲ್ದಾರ್ ಸಿ.ಜಿ.ನಾಯ್ಕ ಸ್ವೀಕರಿಸಿದರು. ಈ ಸಂದರ್ಭದಲ್ಲಿ
ಮಡಿವಾಳ
ಸಮುದಾಯದ ಪ್ರಮುಖರು ಇದ್ದರು.

ಅವೈಜ್ಞಾನಿಕವಾಗಿ ನಿರ್ಮಿಸಿದ್ದ ಹಂಪ್ ತೆರವು

E-YELLAPUR.COM NEWS ಪಟ್ಟಣದ ದೇವಿಮೈದಾನ ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಕಳೆದ ವಾರ ನಿರ್ಮಿಸಲಾಗಿದ್ದ ಅವೈಜ್ಞಾನಿಕ, ದೊಡ್ಡ ಹಂಪ್ ಅನ್ನು ಅಂತೂ ತೆರವುಗೊಳಿಸಲಾಗಿದೆ. ಈ ಅವೈಜ್ಞಾನಿಕ ಹಂಪ್ ನಿಂದ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿತ್ತು. ನಿಖರ,ನಿರಂತರ,ಸಮಗ್ರ ವರದಿಗಾಗಿ e-yellapur.com digital news ಓದಿ. ಹೆದ್ದಾರಿಯ ಇಳಿಜಾರಿನಲ್ಲಿ ದೊಡ್ಡದಾದ ಹಂಪ್ ನಿರ್ಮಿಸಿರುವುದರಿಂದ ವಾಹನ ಸವಾರರಿಗೆ ಹಂಪ್ ಇರುವುದು ಅರಿವಿಗೆ ಬಾರದೇ ವಾಹನಗಳ ನಿಯಂತ್ರಣ ತಪ್ಪುವಂತಾಗಿತ್ತು.ಈಗ ಈ ಹಂಪ್ ಅನ್ನು ತೆರವುಗೊಳಿಸಲಾಗಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

FACEBOOK GROUP – https://www.facebook.com/groups/593852164946589/

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.

https://chat.whatsapp.com/L2CReGIOXdX7UXCxXicb4Q

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading