31-1-2022. ಸೋಮವಾರ.
E-YELLAPUR.COM NEWS ಯಲ್ಲಾಪುರ. ಪಟ್ಟಣ ಪಂಚಾಯತಿ ಮಾಸಿಕ ಸರ್ವ ಸಾಮಾನ್ಯ ಸಭೆಯು ಸುನಂದಾ ದಾಸ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ಈ ಸಭೆಯಲ್ಲಿ ಅರಣ್ಯ ಹಕ್ಕು ಸಮೀತಿಗಳ ರಚನೆಯ ಕುರಿತು ಹಾಗೂ ವಿವಿಧ ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ನಿಖರ,ನಿರಂತರ,ಸಮಗ್ರ ವರದಿಗಾಗಿ e-yellapur.com digital news ಓದಿ. 2022-23 ನೇ ಸಾಲಿನ ಆಸ್ತಿ ತೆರಿಗೆಯನ್ನು ಶೇ.3 ರಷ್ಟು ಹೆಚ್ಚು ಮಾಡಲು ಸಭೆ ಅನುಮೋದನೆ ನೀಡಿತು. ಪಟ್ಟಣದ ವಿವಿದೆಡೆ ನಾಮ ಫಲಕಗಳನ್ನು ಅಳವಡಿಸಲು ಸ್ಥಳ ನಿಗದಿ ಹಾಗೂ ಸ್ಥಾಯಿ ಸಮೀತಿಯಲ್ಲಿ ಮಂಜೂರಿಯಾದ ಟೆಂಡರ್ ಗಳಿಗೆ ಅನುಮೋದನೆ ನೀಡುವ ಕುರಿತು ಬಿಸಿ,ಬಿಸಿ ಚರ್ಚೆ ನಡೆಯಿತು. ಸಭೆಯಲ್ಲಿ ಸ್ಥಾಯಿ ಸಮೀತಿಯ ಅಧ್ಯಕ್ಷ ಅಮಿತ್ ಅಂಗಡಿ, ಮುಖ್ಯಾಧಿಕಾರಿ ಸಂಗನಬಸವ, ಸಮಾಜಕಲ್ಯಾಣ ಇಲಾಖೆಯ ಮನಿಷ್ ನಾಯ್ಕ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.
ಡಿ.ಎನ್.ಗಾಂವ್ಕಾರ್ ರಾಜೀನಾಮೆ ; ಕಾಂಗ್ರೆಸ್ ಪಕ್ಷದಲ್ಲಿ ಭುಗಿಲೆದ್ದ ಅಸಮಾಧಾನ.
E-YELLAPUR.COM NEWS. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಡಿ.ಎನ್.ಗಾಂವ್ಕಾರ್ ಅವರು ಭಾನುವಾರ ರಾಜೀನಾಮೆ ನೀಡಿದ ವಿಷಯವು ಸ್ಥಳೀಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡಿದೆ. ಡಿ.ಎನ್. ಗಾಂವ್ಕಾರ್ ರಾಜೀನಾಮೆ ವಿಷಯ ಪ್ರಕಟವಾಗುತ್ತಿದ್ದಂತೆಯೇ ಪರ-ವಿರೋಧ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ. ಸೋಮವಾರ ಹೊಸ ವಿಷಯವೊಂದು ಮುನ್ನೆಲೆಗೆ ಬಂದಿದೆ. ನಿಖರ,ನಿರಂತರ,ಸಮಗ್ರ ವರದಿಗಾಗಿ
e-yellapur.com digital news ಓದಿ. ಕಳೆದ ಅಕ್ಟೋಬರ್ 15 ರಂದೇ ರಾಜ್ಯ ಕಾಂಗ್ರೆಸ್ ಘಟಕದಿಂದ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಬೇರೊಬ್ಬರನ್ನು ನೇಮಿಸಿ ಆದೇಶ ಮಾಡಿದ ನೇಮಕಾತಿ ಪತ್ರವು ಜಾಲತಾಣಗಳಲ್ಲಿ ಈಗ ಎಲ್ಲೆಡೆ ವೈರಲ್ ಆಗಿದೆ. ಮೂರು ತಿಂಗಳ ಹಿಂದೆ ನೇಮಕವಾಗಿದ್ದರೂ ಇಷ್ಟು ದಿನ ಮುಚ್ಚಿಟ್ಟಿರುವುದು ಏಕೆ ಎಂಬ ಪ್ರಶ್ನೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಎದುರಾಗಿದೆ. ಈ ಆದೇಶ ಪತ್ರವು ತೀವೃ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಮುಂದಿನ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ.
ಈ ಕುರಿತು ಡಿ.ಎನ್.ಗಾಂವ್ಕಾರ್ ಅವರು e-yellapur.com digital news ಪ್ರತಿನಿಧಿಯೊಂದಿಗೆ ಮಾತನಾಡಿ, ಮೂರು ತಿಂಗಳ ಹಿಂದೆ ಬೇರೊಬ್ಬರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ವಿಷಯ ನನಗೆ ತಿಳಿದಿರಲಿಲ್ಲ. ಪಕ್ಷದ ವರಿಷ್ಠರು ಬಯಸಿದ್ದರೆ ಆಗಲೇ ರಾಜೀನಾಮೆ ನೀಡುತ್ತಿದ್ದೆ. ಇಷ್ಟು ದಿನದ ನಂತರ ಪತ್ರವನ್ನು ಬಹಿರಂಗಗೊಳಿಸಿರುವುದು ಪಕ್ಷಕ್ಕಾಗಿ 16 ವರ್ಷ ದುಡಿದ ನನ್ನ ಮನಸ್ಸಿಗೆ ಬಹಳ ಬೇಸರ ತರಿಸಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ADVT
ಸ್ನೇಹಸಾಗರ ಶಾಲೆಯಲ್ಲಿ ರಾಷ್ಟ್ರೀಯ ಹುತಾತ್ಮರ ದಿನಾಚರಣೆ.
ತಾಲೂಕಿನ ಇಡಗುಂದಿಯ ಸ್ನೇಹಸಾಗರ ವಸತಿ ಶಾಲೆಯಲ್ಲಿ ರಾಷ್ಟ್ರೀಯ ಹುತಾತ್ಮರ ದಿನಾಚರಣೆ ಆಚರಿಸಲಾಯಿತು. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಮಹನೀಯರ ಕುರಿತು ಮುಖ್ಯಾಧ್ಯಾಪಕ ವಾಸು ಎಸ್ ದತ್ತ ಅವರು ಮಾತನಾಡಿದರು. ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು. ಶಾಲೆಯ ಶಿಕ್ಷಕರು, ಸಿಬ್ಬಂದಿಗಳು ಇದ್ದರು.
ಯಲ್ಲಾಪುರ ತಾಲೂಕಿನಲ್ಲಿ ಸೋಮವಾರ 62 ಜನರಿಗೆ ಕೋವಿಡ್ ಸೋಂಕು
ತಾಲೂಕಿನಲ್ಲಿ ಸೋಮವಾರ 62 ಜನರಿಗೆ ಕೋವಿಡ್ ಸೋಂಕು ಧೃಢಪಟ್ಟಿದೆ. ಇಂದು 198 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur
FACEBOOK GROUP – https://www.facebook.com/groups/593852164946589/
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q
ಮೊದಲನೇ ಪ್ರಜಾಸೇವೆ ಆಂದೋಲನ ಸಭೆಯ 1163 ಅರ್ಜಿಗಳ ವಿಲೇವಾರಿ : ಜಿಲ್ಲಾಧಿಕಾರಿ by TEAM E – YELLAPUR
September 16, 2026
ಗಂಧದ ಮರ ಕಡಿದವರು ಯಾರು? ತೀವ್ರಗೊಂಡ ತನಿಖೆ by TEAM E – YELLAPUR
September 15, 2026
ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: 10 ಜನರ ವಿರುದ್ಧ ಪ್ರಕರಣ ದಾಖಲು by TEAM E – YELLAPUR
September 15, 2026
ಬೈಕಿಗೆ ಕ್ರೂಸರ್ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೇ ಬೈಕ್ ಸವಾರ ಸಾವು by TEAM E – YELLAPUR
September 15, 2026
ಶಾಂತಿ, ಸೌಹಾರ್ದಯುತ ಗಣೇಶೋತ್ಸವ ಆಚರಣೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ by TEAM E – YELLAPUR
September 13, 2026
ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ! by TEAM E – YELLAPUR
September 13, 2026
ಪಡಿತರ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು by TEAM E – YELLAPUR
September 13, 2026
ಸ್ವದೇಶಿ ವಸ್ತುಗಳ ಮಾರಾಟ ಮೇಳ, ಆಹಾರ ಮೇಳಕ್ಕೆ ಉದ್ಯಮಿ ಬಾಲು ನಾಯಕ ಚಾಲನೆ by TEAM E – YELLAPUR
September 11, 2026
ಹಾಲು ಸಂಗ್ರಹಣೆ ಮತ್ತು ಮಾರಾಟದಲ್ಲಿ ಆನಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಉತ್ತಮ ಸಾಧನೆ by TEAM E – YELLAPUR
September 11, 2026
ಡಿ.ಜೆ. ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ by TEAM E – YELLAPUR
September 10, 2026
ಶಿಕ್ಷಕಿ ಉಷಾಬಾಯಿ ನಾಯಕರಿಗೆ ಕಾಯಕರತ್ನ ಪ್ರಶಸ್ತಿ ಪ್ರದಾನ by TEAM E – YELLAPUR
September 10, 2026
ಯಲ್ಲಾಪುರದಲ್ಲಿ ಸೆ.11ರಿಂದ ಮೂರು ದಿನ ಸ್ವದೇಶಿ ವಸ್ತುಗಳ ಮಾರಾಟ ಮೇಳ ಮತ್ತು ಆಹಾರ ಮೇಳ by TEAM E – YELLAPUR
September 9, 2026
ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಪಾಲ್ಗೊಂಡ ಉದ್ಯಮಿ ಬಾಲು ನಾಯಕ by TEAM E – YELLAPUR
September 9, 2026
ಲಯನ್ಸ್ ಕ್ಲಬ್ ವತಿಯಿಂದ ಅದ್ದೂರಿಯಾಗಿ ನಡೆದ ಬಾಲಗೋಪಾಲ ಮತ್ತು ರಾಧಾ-ಕೃಷ್ಣ ವೇಷ ಸ್ಪರ್ಧೆ by TEAM E – YELLAPUR
September 9, 2026
ಅರಣ್ಯ ಇಲಾಖೆಯ ಕಾರ್ಯಾಚರಣೆ: ವನ್ಯಜೀವಿ ಉತ್ಪನ್ನಗಳ ಅಕ್ರಮ ಸಾಗಾಟ ಜಾಲ ಪತ್ತೆ, ಇಬ್ಬರ ಬಂಧನ by TEAM E – YELLAPUR
September 9, 2026
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related
Post navigation