YTSS ಕಾಲೇಜು ವಿದ್ಯಾರ್ಥಿ ಸಂಸತ್ ಚುನಾವಣೆ: ಪ್ರಧಾನ ಕಾರ್ಯದರ್ಶಿಯಾಗಿ ಭವಿಕ್ ಬಾಲಕೃಷ್ಣ ನಾಯಕ ಅವಿರೋಧ ಆಯ್ಕೆ
ಯಲ್ಲಾಪುರ ಪಟ್ಟಣದ ಪ್ರತಿಷ್ಠಿತ ವಾಯ್.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಕಾಲೇಜು ವಿಭಾಗದ ವಿದ್ಯಾರ್ಥಿ ಸಂಸತ್ ಚುನಾವಣೆಯು ಶನಿವಾರ ನಡೆಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಭವಿಕ್ ಬಾಲಕೃಷ್ಣ ನಾಯಕ ಅವಿರೋಧ ಆಯ್ಕೆಯಾದರು.
ಮಹಿಳಾ ಪ್ರತಿನಿಧಿಯಾಗಿ ತನಿಶಾ ರವಿ ಶೇಟ್, ಸಾಂಸ್ಕೃತಿಕ ಪ್ರತಿನಿಧಿಗಳಾಗಿ ನಾಗರಾಜ ಎಸ್ ಶಾನಭಾಗ ಮತ್ತು ಸುಮನ ಚವ್ಹಾಣ, ಕ್ರೀಡಾ ಪ್ರತಿನಿಧಿಗಳಾಗಿ ಅನ್ಶ್ ಎಸ್ ಪತ್ತಾರ ಮತ್ತು ಶ್ರೀದೇವಿ ಗಂಗಾನಾಯ್ಕ ಆಯ್ಕೆಯಾದರು.
ಪ್ರಾಂಶುಪಾಲ ಆನಂದ ಹೆಗಡೆ ಮಾರ್ಗದರ್ಶನದಲ್ಲಿ ಚುನಾವಣಾಧಿಕಾರಿಯಾಗಿ ಪರವೀನಬಾನು ಸುಂಕದ ಹಾಗೂ ಎಲ್ಲಾ ಉಪನ್ಯಾಸಕರ ಸಹಕಾರದಿಂದ ಚುನಾವಣೆ ಯಶಸ್ವಿಯಾಗಿ ಜರುಗಿತು.
ಸಂಸ್ಥೆಯ ಅಧ್ಯಕ್ಷರು ಹಾಗೂ ಪಧಾಧಿಕಾರಿಗಳು ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳು ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.