ಯಲ್ಲಾಪುರ ಪಟ್ಟಣದ ನ್ಯಾಯಾಲದಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಿತು.
ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಕುಮಾರ್ ಎಸ್ ಅವರ ನೇತ್ರತ್ವ ವಹಿಸಿದ್ದರು. ಒಟ್ಟೂ 64 ಪ್ರಕರಣಗಳು ದಾಖಲಾಗಿದ್ದವು, ಇವುಗಳಲ್ಲಿ 45 ಪ್ರಕರಣಗಳು ಇತ್ಯರ್ಥಗೊಂಡಿವೆ. ಒಟ್ಟೂ 79,46,353 ರೂ ಭರಣವಾಯಿತು. ಸಂಧಾನಕಾರರಾಗಿ ನ್ಯಾಯವಾದಿ ರವಿ ಶಿವನಗೌಡ ಪಾಟೀಲ್ ಪಾಲ್ಗೊಂಡಿದ್ದರು.
ಸಿವಿಲ್ ನ್ಯಾಯಾಲಯದಲ್ಲಿ ಸಿವಿಲ್ ನ್ಯಾಯಾಧೀಶರಾದ ಅನಿತ ಕುಮಾರಿ ಅವರ ನೇತ್ರತ್ವದಲ್ಲಿ 320 ಪ್ರಕರಣಗಳು ದಾಖಲಾಗಿದ್ದವು. ಇವುಗಳಲ್ಲಿ 257 ಪ್ರಕರಣಗಳು ಇತ್ಯರ್ಥಗೊಂಡಿವೆ. ಒಟ್ಟೂ 38,65988 ರೂ ಭರಣವಾಗಿದೆ. ಸಂಧಾನಕಾರರಾಗಿ ಶ್ರೀಕಾಂತ ಚೌಹ್ವಾಣ ಕಾರ್ಯನಿರ್ವಹಿಸಿದರು.
ಬ್ಯಾಂಕ್ ಪ್ರಕರಣ ಪಿ.ಎಲ್.ಸಿ 529 ಪ್ರಕರಣಗಳು ದಾಖಲಾಗಿದ್ದವು. ಇವುಗಳಲ್ಲಿ 8 ಪ್ರಕರಣ ಇತ್ಯರ್ಥವಾಗಿದೆ. ಒಟ್ಟೂ 6,63,00 ರೂ ಭರಣವಾಗಿದೆ. ವಕೀಲರ ಸಂಘದ ಅಧ್ಯಕ್ಷ ವಿ.ಟಿ.ಭಟ್ಟ, ಅಪರ ಸರ್ಕಾರಿ ವಕೀಲರಾದ ಎನ್.ಟಿ.ಗಾಂವ್ಕಾರ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಝೀನತ್ ಭಾನು ಶೇಖ್, ವಕೀಲರು, ನ್ಯಾಯಾಲಯದ ಸಿಬ್ಬಂದಿಗಳು, ವಿವಿಧ ಬ್ಯಾಂಕ್ ಮತ್ತು ಸೊಸೈಟಿಗಳ ಪ್ರಮುಖರು ಇದ್ದರು