




ಉಮ್ಮಚಗಿಯಲ್ಲಿ ಎಸ್.ಐ.ಆರ್. ಜಾಗೃತಿ ಕಾರ್ಯಕ್ರಮ

ಯಲ್ಲಾಪುರ ತಾಲೂಕಿನ ಉಮ್ಮಚ್ಗಿಯ ಎಸ್.ಐ.ಆರ್. ಜಾಗೃತಿ ಕಾರ್ಯಕ್ರಮ ಹಾಗೂ ಮಕ್ಕಳ ಚೆಸ್ ಸ್ಪರ್ಧಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ಪಂಚಾಯತ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ರಾಜೇಶ್ ಧನವಾಡಕರ್ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಮತದಾರರಾಗಿರುವುದರಿಂದ ಮಕ್ಕಳಿಗೆ ಚೆಸ್ ಸ್ಪರ್ಧೆ ಆಯೋಜಿಸುವ ಮೂಲಕ ಎಸ್.ಐ.ಆರ್ ಬಗ್ಗೆ ಮಾಹಿತಿ ಕೊಡುವುದು ಮತ್ತು ಮಕ್ಕಳ ಪಾಲಕರು ಮತದಾರರ ಸಮಗ್ರ ಪರಿಸ್ಕರಣೆಯಿಂದ ದೂರ ಉಳಿಯದೆ ಭಾಗಿಯಾಗಿ ಶೇ.100 ಪ್ರಗತಿ ಸಾಧಿಸಲು ಕಾರಣೀಕರ್ತರಾಗಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬ ಅರ್ಹ ಮತದಾರರೂ ಮತದಾರ ಪಟ್ಟಿಯಲ್ಲಿ ಉಳಿಯುವಂತಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಉಮ್ಮಚ್ಗಿ ಗ್ರಾ.ಪಂ.ನ ನಿಕಟಪೂರ್ವ ಅಧ್ಯಕ್ಷ ಕುಪ್ಪಯ್ಯ ಪೂಜಾರಿ, ತಾಲೂಕಾ ಯೋಜನಾಧಿಕಾರಿ ರಾಘವ, ಆಡಳಿತಾಧಿಕಾರಿ ಆಶಾ ಮಲಕನ್ನವರ್, ಪ್ರಮುಖರಾದ ಮಂಜಣ್ಣ, ಸಿ.ಆರ್.ಪಿ. ವಿಷ್ಣು ಭಟ್ಟ, ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ ನಾಯ್ಕ, ಪಿ.ಡಿ.ಒ.ನಸ್ರೀನ್ ಎಕ್ಕುಂಡಿ, ಮುಖ್ಯಾಧ್ಯಾಪಕಿ ಜಯಶ್ರೀ ಕುರ್ಡೇಕರ್ ಮೊದಲಾದವರು ಉಪಸ್ಥಿತಿತರಿದ್ದರು. ಗ್ರಾ.ಪಂ.ಕಾರ್ಯದರ್ಶಿ ಮೋಹನ್ ಸ್ವಾಗತಿಸಿ, ವಂದಿಸಿದರು.
ಮಕ್ಕಳಿಗೆ ಸಂಸ್ಕಾರಯುತವಾದ ಶಿಕ್ಷಣ ಮುಖ್ಯ: ಅನಂತಮೂರ್ತಿ ಹೆಗಡೆ
ಯಾವುದೇ ಶಾಲೆ ಉತ್ತಮ ಶಾಲೆಯೆಂದು ರೂಪಗೊಳ್ಳುವುದು ಅಲ್ಲಿರುವ ಒಳ್ಳೆಯ ಶಿಕ್ಷಕರಿಂದ, ಅವರು ಮಕ್ಕಳಿಗೆ ಶಿಕ್ಷಣದ ಜೊತೆಗೆ ನೀಡುವ ಸಂಸ್ಕಾರದಿಂದ ಉತ್ತಮ ಶಾಲೆಯಾಗಿ ರೂಪಗೊಳ್ಳುತ್ತದೆ ಎಂದು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅಭಿಪ್ರಾಯಪಟ್ಟರು.

ಅವರು ಸಿದ್ದಾಪುರ ತಾಲೂಕಿನ ತ್ಯಾಗಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಟ್ರಸ್ಟ್‍ನಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು ನಾವೆಲ್ಲರೂ ಸೇರಿ ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತ ಗುಣಮಟ್ಟದ ಶಿಕ್ಷಣ ನೀಡುವಂತಾಗಲು ಎಲ್ಲರೂ ಕೈಜೋಡಿಸಬೇಕು ಎಂದರು.
ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ರಾಜಾರಾಮ ಹೆಗಡೆ, ಶಾಲೆಯ ಮುಖ್ಯ ಶಿಕ್ಷಕಿ ಯಮುನಾ ಪೈ, ಪ್ರಮುಖರಾದ ನಟರಾಜ್ ಹೆಗಡೆ ಮುಂತಾದವರು ಇದ್ದರು.

=====================













