ಉತ್ತರ ಕನ್ನಡ ಜಿಲ್ಲೆಯ 14 ಗ್ರಾಮ ಪಂಚಾಯತಗಳಲ್ಲಿ ಹೊಸದಾಗಿ ಗ್ರಾಮ ಒನ್ ಕೇಂದ್ರ ಅನುಷ್ಠಾನಗೊಳಿಸಲು ಅವಶ್ಯಕತೆ ಇದ್ದು, ಗ್ರಾಮ ಪಂಚಾಯತಗಳಲ್ಲಿ ಸಮಗ್ರ ನಾಗರಿಕ ಸೇವೆ ಒದಗಿಸಲು ಗ್ರಾಮ ಒನ್ ಕೇಂದ್ರ ಆರಂಭಿಸಲು ಪ್ರಾಂಚೈಸಿಗಳನ್ನು ಆಹ್ವಾನಿಸಲಾಗಿದೆ.

ಅಂಕೋಲಾ ತಾಲೂಕಿನ ಅಗಸೂರು, ಭಟ್ಕಳ ತಾಲೂಕಿನ ಕೊಪ್ಪ, ದಾಂಡೇಲಿ ತಾಲೂಕಿನ ಆಲೂರ, ಹೊನ್ನಾವರ ತಾಲೂಕಿನ ಕೋಡಣಿ, ಕಾರವಾರ ತಾಲೂಕಿನ ಕೆರವಡಿ, ಕುಮಟಾ ತಾಲೂಕಿನ ಬರ್ಗಿ, ಸಿದ್ದಾಪುರ ತಾಲೂಕಿನ ನಿಲಕುಂದ, ಶಿರಸಿ ತಾಲೂಕಿನ ಸುಗಾವಿ, ಸಾಲ್ಕಣಿ, ಗುಡ್ಡಾಪುರ, ಸೂಪಾ ತಾಲೂಕಿನ ಬಂಜಾರ್‍ಕುಣಗ, ನಾಗೋಡ್, ಉಳವಿ, ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಮ ಪಂಚಾಯತಗಳಲ್ಲಿ ಹೊಸದಾಗಿ ಗ್ರಾಮ ಒನ್ ಕೇಂದ್ರ ಆರಂಭಿಸಲು ಆಸಕ್ತ ಪ್ರಾಂಚೈಸಿಗಳು ಆಗಸ್ಟ್ 15 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ತಹಶೀಲ್ದಾರ ಕಚೇರಿ ಸಂಪರ್ಕಿಸುವಂತೆ ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಪಬ್ಲಿಕ್ ಸ್ಕೂಲ್ ಶಿರವಾಡದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿಯಲ್ಲಿ ದತ್ತಾಂಶ ನಿರ್ವಹಣೆ ಸಹಾಯಕ ಹಾಗೂ ಭದ್ರತಾ ಸಿಬ್ಬಂದಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ದತ್ತಾಂಶ ನಿರ್ವಹಣೆ ಸಹಾಯಕ ಹುದ್ದೆಗೆ ಯಾವುದೇ ಪದವಿ ಜೊತೆಗೆ ಕಂಪ್ಯೂಟರ್ ಕೋರ್ಸ್ ಸರ್ಟಿಫಿಕೇಟ್ ಹಾಗೂ ಭದ್ರತಾ ಸಿಬ್ಬಂದಿ ಹುದ್ದೆಗೆ ಎಸ್. ಎಸ್. ಎಲ್. ಸಿ ಉತ್ತೀರ್ಣರಾಗಿರಬೇಕು. ಈ ಹುದ್ದೆಗಳಿಗೆ ತಿಂಗಳಿಗೆ 10 ಸಾವಿರ ಗೌರವಧನ ನೀಡಲಾಗುವುದು ಎಂದು ಶಿರವಾಡದ ಸ.ಪ.ಪೂ. ಕಾಲೇಜು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರವಾರ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಕಾರವಾರ ಅಂಚೆ ವಿಭಾಗದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಮತ್ತು ಭಾರತೀಯ ಅಂಚೆ ಇಲಾಖೆ ಸಹಯೋಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಗಾಗಿ ಪೋಸ್ಟಲ್ ಸಖಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಂಚೆ ಇಲಾಖೆಯ ಪೋಸ್ಟಲ್ ಲೈಫ್ ಇನ್ಶೂರೆನ್ಸ್, ಗ್ರಾಮೀಣ ಅಂಚೆ ಜೀವವಿಮೆ, ಸೇರಿದಂತೆ ವಿವಿಧ ಅಂಚೆ ಸೇವೆಗಳನ್ನು ನಿಮ್ಮ ಗ್ರಾಮದ ಮನೆ-ಮನೆಗೆ ತಲುಪಿಸಿ ಆರ್ಥಿಕವಾಗಿ ಸ್ವಾವಲಂಬಿಯಾಗಬಹುದು.

ಅರ್ಹತೆಗಳು: ಸ್ವಸಹಾಯ ಸಂಘದ ಸಕ್ರಿಯ ಸದಸ್ಯೆಯಾಗಿರಬೇಕು, ಕನಿಷ್ಟ 10ನೇ ತರಗತಿ ಉತ್ತೀರ್ಣರಾಗಿರಬೇಕು, 18 ರಿಂದ 50 ವರ್ಷದೊಳಗಿರಬೇಕು, ಸ್ಮಾರ್ಟ್ ಫೋನ್ ಬಳಸುವ ಜ್ಞಾನ ಮತ್ತು ಸ್ಥಳೀಯ ಭಾಷಾ ಜ್ಞಾನ ಕಡ್ಡಾಯ.

ಆ. 13 ರಂದು ಬೆಳಗ್ಗೆ 11 ಗಂಟೆಗೆ ಸರಿಯಾಗಿ ಅಧೀಕ್ಷಕರ ಕಚೇರಿಯಲ್ಲಿ, ಕಾರವಾರದಲ್ಲಿ ಮೌಖಿಕ ಸಂದರ್ಶನವನ್ನು ಏರ್ಪಡಿಸಲಾಗಿದೆ ಆಸಕ್ತ ಎಲ್ಲಾ ಸ್ವಸಹಾಯ ಸಂಘದ ಸಕ್ರಿಯ ಸದಸ್ಯರು ಪೋಟೋ, ಆಧಾರ್ ಕಾರ್ಡ್ ನಕಲು ಪ್ರತಿ, ಅಂಚೆ ಕಚೇರಿಯ ಉಳಿತಾಯ ಖಾತೆ ಪಾಸ್ ಪುಸ್ತಕದ ಪ್ರತಿ, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ ನಕಲು ಪ್ರತಿ, ಸ್ವಸಹಾಯ ಸಂಘದ ಗುರುತಿನ ಚೀಟಿ ದಾಖಲೆಗಳೊಂದಿಗೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ಅಂಚೆ ಜೀವ ವಿಮಾ ಅಭಿವೃದ್ಧಿ ಅಧಿಕಾರಿ, ಕಾರವಾರ ಅಂಚೆ ವಿಭಾಗ, ಕಾರವಾರ -581301 ಸಂಪರ್ಕಿಸುವಂತೆ ಕಾರವಾರ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

======================

Leave a Reply

You cannot copy content of this page