ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ, ತಮ್ಮ ಲಾಭಕ್ಕಾಗಿ ಅಂದರ್ ಬಾಹರ್ ಇಸ್ಪಿಟ್ ಜುಗಾರಾಟ ಆಡುತ್ತಿದ್ದ ಐವರ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮದ ದೊಡ್ಡ ಯಲವಳ್ಳಿ ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳಾದ ಕಿರವತ್ತಿಯ ಮಹ್ಮದ್ ಯುಸೂಫ್ ಶೇಖ್, ಹೊಸಳ್ಳಿಯ ರಾಜು , ಹುಣಸಗೇರಿಯ ಮಂಜುನಾಥ , ಕಿರವತ್ತಿಯ ಲಕ್ಷ್ಮಣ , ಹೊಸಳ್ಳಿಯ ಮಾರುತಿ ಎನ್ನುವವರು ಜುಗಾರಾಟ ಆಡುತ್ತಿದ್ದಾಗ ಪಿಎಸ್ಸೈ ರಾಜಶೇಖರ ವಂದಲಿಯವರು ಸಿಬ್ಬಂದಿಗಳೊಡನೆ ದಾಳಿ ನಡೆಸಿ, 750 ರೂ ನಗದು ಹಣ ಹಾಗೂ ಜುಗಾರಾಟದ ಸಲಕರಣೆಗಳನ್ನು ವಶಕ್ಕೆ ಪಡೆದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

========================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading