ಯಲ್ಲಾಪುರ ತಾಲೂಕಿನ ಕಳಚೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸಹ್ಯಾದ್ರಿ ವಿವಿದ್ಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಕಳೆದ ಆರ್ಥಿಕ ವರ್ಷದಲ್ಲಿ 60,48,522 ರೂ ನಿವ್ವಳ ಲಾಭವಾಗಿದೆ ಎಂದು ಸಂಘದ ಅಧ್ಯಕ್ಷ ಉಮೇಶ ಭಾಗ್ವತ್ ಹೇಳಿದ್ದಾರೆ.

ಯಲ್ಲಾಪುರ ಪಟ್ಟಣದ ಎಪಿಎಂಸಿ ಆವಾರದ ಸಂಘದ ಶಾಖಾ ಕಚೇರಿಯಲ್ಲಿ ಸಂಘದ ಪ್ರಗತಿಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಎಲ್ಲಾ ಶಾಖೆಗಳೂ ಎಲ್ಲರ ಸಹಕಾರದಿಂದ ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ. ಈರಾಪುರದಲ್ಲಿ ಸ್ವಂತ ನಿವೇಶನ ಖರೀದಿಸಿ, ನೂತನ ಕಟ್ಟಡದಲ್ಲಿ ಸಂಘದ ಶಾಖೆ ಆರಂಭವಾಗಿದೆ. ಇತ್ತೀಚೆಗೆ ಜೋಯ್ಡಾದಲ್ಲಿ ಸಂಘದ ನೂತನ ಶಾಖೆಯನ್ನು ಆರಂಭಿಸಲಾಗಿದೆ. ಅಲ್ಲಿ ಅಡಿಕೆ ವ್ಯವಹಾರ ಉತ್ತಮವಾಗಿ ನಡೆಯುತ್ತಿದೆ.

ಸಂಘವು ಅಡಿಕೆ ವ್ಯವಹಾರದೊಂದಿಗೆ ಕೃಷಿಕರಿಗೆ ಅಗತ್ಯ ಇರುವ ವಿವಿಧ ಸೇವಾ ಸೌಲಭ್ಯಗಳನ್ನು ನೀಡುತ್ತಿದೆ. ಸಂಘವು ಕಳೆದ ಸಾಲಿನಲ್ಲಿ 8 ಸಾವಿರ ಕ್ವಿಂಟಾಲ್ ಅಡಿಕೆ ವಿಕ್ರಿ ಮಾಡಿದೆ. ಮುಂಬರುವ ದಿನಗಳಲ್ಲಿ ಹಸಿ ಅಡಿಕೆ ಟೆಂಡರ್ ಆರಂಭಿಸಲಾಗುವುದು. ಮುಂಡಗೋಡದಲ್ಲಿ ಸಂಘದ ಶಾಖೆಯನ್ನು ತೆರೆಯುವ ಚಿಂತನೆ ನಡೆಸಲಾಗಿದೆ ಎಂದ ಅವರು ಸಂಘದ ಪ್ರಗತಿಯನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಘವೇಂದ್ರ ಭಟ್ಟ, ನಿರ್ದೇಶಕರಾದ ರಾಮಕೃಷ್ಣ ಹೆಗಡೆ, ಶ್ರೀಕಾಂತ ಹೆಬ್ಬಾರ್, ಶ್ರೀಪಾದ ಗಾಂವ್ಕಾರ್, ಶ್ರೀನಾಥ ಹೆಗಡೆ, ರಾಘವೇಂದ್ರ ಭಟ್ಟ, ಗಜಾನನ ಭಟ್ಟ, ಪ್ರೇಮಾ ಹೆಗಡೆ, ವಿನುತಾ ಗದ್ದೆ ಹಾಗೂ ಮುಖ್ಯಕಾರ್ಯನಿರ್ವಾಹಕ ದತ್ತಾತ್ರೇಯ ಹೆಗಡೆ, ಶಾಖಾ ವ್ಯವಸ್ಥಾಪಕರಾದ ಪರಶುರಾಮ ಮರಾಠೆ, ಅನಂತ ಹೆಗಡೆ, ಉದಯ ಭಾಗ್ವತ್ ಮುಂತಾದವರು ಇದ್ದರು.

========================

Leave a Reply

You cannot copy content of this page