ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸ್ಥಳೀಯ ಕೌಶಲ್ಯಯುತ ಕೆಲಸಗಾರರನ್ನು ಮತ್ತು ಗ್ರಾಹಕರನ್ನು ಒಂದೇ ವೇದಿಕೆಯಲ್ಲಿ ಜೋಡಿಸುವ ವಿನೂತನ ಡಿಜಿಟಲ್ ತಂತ್ರಜ್ಞಾನದ Unitefix Services Pvt Ltd ಕಂಪೆನಿಯು ಮೊಬೈಲ್ ಆ್ಯಪ್ ಅನ್ನು ಪರಿಚಯಿಸುತ್ತಿದೆ.

ಇದು ಕೇವಲ ಒಂದು ಆ್ಯಪ್ ಆಗಿರದೆ, ಜಿಲ್ಲೆಯ ನಿರುದ್ಯೋಗ ಸಮಸ್ಯೆ ನಿವಾರಣೆ ಹಾಗೂ ಸಾರ್ವಜನಿಕರ ದೈನಂದಿನ ಕೆಲಸ ಕಾರ್ಯಗಳನ್ನು ಸುಲಭಗೊಳಿಸುವ ಒಂದು ಪಾರದರ್ಶಕ ಡಿಜಿಟಲ್ ವೇದಿಕೆಯಾಗಿದೆ.

ಸ್ಥಳೀಯವಾಗಿ ಲಭ್ಯವಿರುವ, ಕಂಪ್ಯೂಟರ್ , CCTV ಎಲೆಕ್ಟ್ರಿಷಿಯನ್, ಪ್ಲಂಬರ್, ಬಡಗಿ (ಕಾಪೆರ್ಂಟರ್), ಪೇಂಟರ್, ಗೃಹೋಪಯೋಗಿ ವಸ್ತುಗಳ ರಿಪೇರಿ ಮಾಡುವವರು ಸೇರಿದಂತೆ ವಿವಿಧ ರಂಗಗಳ ನುರಿತ ಕಾರ್ಮಿಕರು ಮತ್ತು ವೃತ್ತಿಪರರು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿ, ನೇರವಾಗಿ ಗ್ರಾಹಕರನ್ನು ತಲುಪಲು ಈ ಆ್ಯಪ್ ಉತ್ತಮ ಅವಕಾಶ ಕಲ್ಪಿಸಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದ್ದು, ಕೆಲಸಗಾರರು ಹಾಗೂ ಕೆಲಸ ಮಾಡಿಸಿಕೊಳ್ಳುವ ಗ್ರಾಹಕರಿಬ್ಬರಿಗೂ ಸಂಪೂರ್ಣ ಪಾರದರ್ಶಕತೆ ಮತ್ತು ನಂಬಿಕಸ್ಥ ಸೇವೆ ಸಿಗಲಿದೆ.

ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಸಂಸ್ಥೆಯಾಗಿರುವ Unitefix ಜಿಲ್ಲೆಯ ಎಲ್ಲಾ ಭಾಗದ ಕೆಲಸಗಾರರಿಗೂ ಸದ್ಯಕ್ಕೆ ಉಚಿತವಾಗಿ ( Free Registration) ಸೇರಿಕೊಳ್ಳಲು ಸುವರ್ಣಾವಕಾಶ ನೀಡಿದೆ. ಸಾರ್ವಜನಿಕರು ಮತ್ತು ವೃತ್ತಿಪರರು ಗೂಗಲ್ ಪ್ಲೇಸ್ಟೋರ್ ಮೂಲಕ ಈ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಸಂಸ್ಥೆಯು ಪ್ರಾಯೋಗಿಕವಾಗಿ (Pilot Project) ಕೆಲವು ಪ್ರಮುಖ ಸೇವೆಗಳನ್ನು ಸದ್ಯಕ್ಕೆ ಯಲ್ಲಾಪುರ ಮತ್ತು ಹೊನ್ನಾವರ ತಾಲೂಕುಗಳಲ್ಲಿ ಆರಂಭಿಸಿದೆ. ಈ ಭಾಗದ ಜನರು ಆ್ಯಪ್ ಮೂಲಕ ತಮಗೆ ಬೇಕಾದ ಕೆಲಸಗಾರರನ್ನು ಸುಲಭವಾಗಿ ಸಂಪರ್ಕಿಸಿ ಕೆಲಸ ಮಾಡಿಸಿಕೊಳ್ಳಬಹುದು. ಶೀಘ್ರದಲ್ಲೇ ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುವುದು.

ನಮ್ಮ ಜಿಲ್ಲೆಯಲ್ಲೇ ಪ್ರಥಮವಾಗಿ ಸ್ಥಾಪಿತವಾಗಿರುವ ಈ ಡಿಜಿಟಲ್ ಸಂಸ್ಥೆಯ ಬೆಳವಣಿಗೆಗೆ ಜಿಲ್ಲೆಯ ಸಮಸ್ತ ಜನತೆಯ, ಉದ್ಯಮಿಗಳ ಹಾಗೂ ಕಾರ್ಮಿಕ ಬಂಧುಗಳ ಸಹಕಾರ ಅತ್ಯಂತ ಅಗತ್ಯವಾಗಿದೆ. ಪ್ರತಿಯೊಬ್ಬರೂ ಈ ಸ್ವದೇಶಿ ಆ್ಯಪ್ ಅನ್ನು ಬಳಸುವ ಮೂಲಕ ಸ್ಥಳೀಯ ಉದ್ಯೋಗಶೀಲತೆಗೆ ಬೆಂಬಲ ನೀಡಬೇಕು ಎಂದು ಈ ಸಂಸ್ಥೆಯ ಮುಖ್ಯಸ್ಥರು ಕೋರಿದ್ದಾರೆ. ಸದ್ಯ ಕೆಲಸ ಮಾಡಿಸಿ ಕೊಳ್ಳಲು ಅವಕಾಶವಿದ್ದು, ಅತೀ ಶೀಘ್ರದಲ್ಲೇ ಇದೇ ಆ್ಯಪ್ ನಲ್ಲಿ ಸರಕು, ಸಾಮಾನು ಮಾರಾಟ ಹಾಗೂ ಖರೀದಿಗೂ ಅವಕಾಶ ಕಲ್ಪಿಸಲಾಗುತ್ತದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

APP LINK ಇಲ್ಲಿದೆ 👇👇

https://play.google.com/store/apps/details?id=com.unitefix.app

=====================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading