ಯಲ್ಲಾಪುರ ತಾಲೂಕಿನಾದ್ಯಂತ ನಾಗರ ಪಂಚಮಿ ಹಬ್ಬವನ್ನು ಸೋಮವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಬೆಳಿಗ್ಗೆಯಿಂದಲೇ ನಾಗದೇವರ ದರ್ಶನ ಪಡೆದು ಭಕ್ತರು ಪೂಜೆ ಸಲ್ಲಿಸಿದರು. ನಾಗದೇವರ ಮೂರ್ತಿಗಳಿಗೆ ಭಕ್ತರು ಹಾಲೆರದು, ನಾನಾ ವಿಧವಾದ ನೈವೇದ್ಯಗಳನ್ನು ಸಮರ್ಪಿಸಿದರು.

ಯಲ್ಲಾಪುರ ಪಟ್ಟಣದ ನಾಯಕನಕೆರೆಯ ಶಾರದಾಂಬಾ ದೇವಾಲಯದ ಆವರಣದಲ್ಲಿರುವ ನಾಗದೇವರ ಗುಡಿಯಲ್ಲಿ ವಿ.ಗೋಪಾಲಕೃಷ್ಣ ಭಟ್ಟ ಕುಂಕಿಪಾಲ ನೇತ್ರತ್ವದಲ್ಲಿ ನಾಗಪೂಜೆ ನಡೆಯಿತು.

ದೇವಿಮೈದಾನ ಸಮೀಪದ ನಾಗರಗುಡಿ, ಕಾಳಮ್ಮನಗರದ ನಾಗರಕಟ್ಟೆ, ಬಸ್ ನಿಲ್ದಾಣದ ಸಮೀಪದ ನಾಗರಗುಡಿ, ಗ್ರಾಮದೇವಿ ದೇವಾಲಯದ ಆವರಣದಲ್ಲಿರುವ ನಾಗರ ದೇವಾಲಯ, ಉದ್ಯಮನಗರದ ನಾಗದೇವಾಲಯ ಹಾಗೂ ವಿವಿಧೆಡೆ ನಾಗ ದೇವರಪೂಜೆ ನಡೆಯಿತು.

ತಾಲೂಕಿನ ಗ್ರಾಮೀಣ ಭಾಗದಲ್ಲಿ ನಾಗಾರಾಧನೆ ನಡೆಯಿತು. ತೋಟ, ಗದ್ದೆಯ ಸಮೀಪ ಇರುವ ನಾಗಮೂರ್ತಿಗಳಿಗೆ ಪೂಜೆ ಸಲ್ಲಿಸಿದ ಭಕ್ತರು ಚಪ್ಪೆರೊಟ್ಟಿ, ಕಡಬು ಮುಂತಾದ ಮುಂತಾದ ವಿಶೇಷ ಖಾದ್ಯಗಳನ್ನು ಸಮರ್ಪಿಸಿದರು. ಸೋಮವಾರ ಮಳೆ ಸ್ವಲ್ಪ ಬಿಡುವು ನೀಡಿರುವುದು ಭಕ್ತರು ನಾಗದೇವರ ಪೂಜೆ ನಡೆಸಲು ಅನುಕೂಲವಾಯಿತು.

=================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading