ನಮ್ಮ ದೇಶ, ಸಂಸ್ಕಾರ, ಸಂಸ್ಕೃತಿ ಇವೆಲ್ಲವೂ ನಮಗೆ ಹಿರಿಯರು ನೀಡಿದ ಬದುಕಿನ ಕ್ರಮವಾಗಿದೆ. ಸ್ವಾತಂತ್ರ್ಯ ಎಂದರೆ ಗುಲಾಮಗಿರಿಯಿಂದ ಇಂದಿನ ಸ್ವತಂತ್ರವನ್ನು ಕೊಡಿಸಿದ ಕ್ಷಣ. ಈ ಬದುಕನ್ನು ನೀಡಿದ ಮಹನೀಯರು ಪ್ರಾತಃಸ್ಮರಣೀಯರು ಎಂದು ಯಲ್ಲಾಪುರದ ಹೋಲಿ ರೋಜರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ ರಾಜಶೇಖರ ಹೇಳಿದರು.

ಶನಿವಾರ ಬೆಳಿಗ್ಗೆ ಶಾಲೆಯಲ್ಲಿ ಧ್ವಜಾರಣವನ್ನು ನೆರವೇರಿಸಿ ಮಾತನಾಡಿ, ಅಂದಿನ ಹಿರಿಯ ತಲೆಮಾರಿನ ಜನ ಒಗ್ಗಟ್ಟಿನಿಂದ ನೀಡಿರುವ ಸ್ವಾತಂತ್ರ್ಯವನ್ನು ನಾವಿಂದು ಅನುಭವಿಸುತ್ತೇವೆ. ಈ ಸ್ವಾತಂತ್ರ್ಯದ ಸವಿ ಅತ್ಯಂತ ಅಮೂಲ್ಯ ಅದನ್ನ ಪಡೆಯಬೇಕಾದರೆ ನಡೆಸಿದ ಹೋರಾಟಗಳ ಅರಿವಿಲ್ಲದೆ ನಾವಿಂದು ದೇಶದ ಬಗ್ಗೆ ದೇಶದ ಕುರಿತು ಚಿಂತನೆ ಮಾಡುವಲ್ಲಿ ಎಡವುತ್ತಿದ್ದೇವೆ.

ಎಳೆಯ ಮನಸ್ಸಿನ ಮಕ್ಕಳಲ್ಲಿ ಸುಭದ್ರ ಸಮಷ್ಟಿ ಭಾವದ ರಾಷ್ಟ್ರದ ಕಲ್ಪನೆ ಅತ್ಯಂತ ಅಮೂಲ್ಯ. ನನ್ನ ದೇಶ ನನಗೇನು ನೀಡಿದೆ ಎನ್ನುವುದನ್ನು ಯೋಚಿಸುವುದಕ್ಕಿಂತ ದೇಶಕ್ಕಾಗಿ ನಾನೇನು ಮಾಡಬಲ್ಲೆ, ಎನ್ನುವುದನ್ನು ಯೋಚಿಸಿಸುವ ಸ್ಥಿತಿ ಇಂದು ನಮ್ಮ ಮುಂದಿದೆ ಎಂದು ಮಕ್ಕಳಿಗೆ ಸ್ವಾತಂತ್ರ್ಯದ ದಿನಾಚರಣೆ ಮಹತ್ವದ ಅರಿವಿನ ಬಗ್ಗೆ ಕಿವಿಮಾತು ಹೇಳಿದರು. ಸ್ವಾತಂತ್ರ್ಯಕ್ಕೂ ಸ್ವೇಚ್ಛಾಚಾರಕ್ಕೂ ಇರುವ ವ್ಯತ್ಯಾಸವನ್ನು ಅರಿತು ನಾವು ದೇಶವನ್ನು ಕಟ್ಟಬೇಕಾಗಿದೆ ಎಂದರು.

ಹೋಲಿರೋಜರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ಜಂಟಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಎರಡು ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿಗಳು ಹಾಜರಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಿರಿಯ ನಿವೃತ್ತ ಶಿಕ್ಷಕರಾದ ದಾಸಿಂತ್ ಫನಾರ್ಂಡಿಸ್ ಚಂದ್ರಶೇಖರ್ ಧ್ವಜವಂದನೆಯಲ್ಲಿ ಭಾಗವಹಿಸಿದರು ಹಿರಿಯ ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕ ಆಗ್ನೇಯಲ್ ಫನಾರ್ಂಡಿಸ್ ವಂದಿಸಿದರು.

ಸ್ವಾತಂತ್ರ್ಯೋತ್ಸವದ ನಿಮಿತ್ತ ನಡೆಸಿದ ದೇಶಭಕ್ತಿ ಗೀತೆ ಚಿತ್ರಕಲಾ ಸ್ಪರ್ಧೆ ಇನ್ನಿತರ ಹಲವು ಸ್ಪರ್ಧಿಗಳ ಬಹುಮಾನಗಳನ್ನ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಯಿತು. ಶಿಕ್ಷಕರ ವೆಂಕಟರಮಣ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ನೆಲ್ಸನ್ ಗೋನ್ಸಾಲ್ವಿಸ ಮತ್ತು ಮಲ್ಲಿಕಾರ್ಜುನ ನಿರ್ವಹಿಸಿದರು.

=========

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading