ಆನ್ಲೈನ್ ಟ್ರೇಡಿಂಗ್ ನಲ್ಲಿ ಲಾಭದ ಆಮಿಷ: ಸರ್ಕಾರಿ ಉದ್ಯೋಗಿಗೆ 20.72 ಲಕ್ಷ ರೂ ವಂಚನೆ
ಆನ್ಲೈನ್ ಟ್ರೇಡಿಂಗ ನಲ್ಲಿ ಹಣ ಹೂಡಿಕೆ ಮಾಡಿದರೆ ಹಣ ಡಬಲ್ ಆಗುತ್ತದೆ ಎಂದು ಸರ್ಕಾರಿ ನೌಕರರೊಬ್ಬರಿಗೆ ನಂಬಿಸಿದ ಅಪರಿಚಿತರು, ಹಂತಹಂತವಾಗಿ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.
ಸಿದ್ದಾಪುರದ ಸರ್ಕಾರಿ ನೌಕರ ಮಂಜಪ್ಪ ಅವರಿಗೆ ಹಣ ಡಬಲ್ ಆಗುತ್ತದೆ ಎಂದು ಆಮಿಷವೊಡ್ಡಿದ ಅಪರಿಚಿತರು ತಮ್ಮ ಜಾಬ್ ಫ್ಲಾಟ್ ಫಾರ್ಮ್ ಗೆ ಸೇರಿಸಿಕೊಂಡು, ಮಂಜಪ್ಪ ಅವರ ವಿವಿಧ ಬ್ಯಾಂಕ್ ಖಾತೆಗಳಿಂದ 2-7-2025ರಿಂದ, 11-62026ರ ವರೆಗೆ ಫೋನ್ ಪೇ, ಯುಪಿಐ ಐಡಿ ಮೂಲಕ ವಿವಿಧ ದಿನಾಂಕಗಳಂದು ಹಂತ, ಹಂತವಾಗಿ ಒಟ್ಟೂ 20,72,580 ರೂ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.
ಮಂಜಪ್ಪ ಅವರು ತನಗೆ ಹಣದ ಅಡಚಣೆಯಾದಾಗ ಹಣವನ್ನು ತೆಗೆಯಲು ಹೋದಾಗ ಹಣ ವಿತ್ ಡ್ರಾ ಮಾಡಲು ಸಾಧ್ಯವಾಗಿಲ್ಲ. ಆಗ ಇದೊಂದು ಮೋಸದ ಜಾಲತಾಣ ಎಂದು ಅರಿವಿಗೆಬಂದು ಸೈಬರ್ ಕ್ರೈಂ ಪೋರ್ಟಲ್ ನಲ್ಲಿ ಹಣವನ್ನು ಪಡೆದು ಮೋಸ ಮಾಡಿದ ಅಪರಿಚಿತರ ವಿರುದ್ಧ ದೂರು ನೀಡಿದ್ದರು. ಈಗ ಅವರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೊಬೈಲ್ ಹ್ಯಾಕ್ ಮಾಡಿ 3.69 ಲಕ್ಷ ರೂ ಲಪಟಾಯಿಸಿದ ವಂಚಕರು
ಮೊಬೈಲ್ ಅನ್ನು ಹ್ಯಾಕ್ ಮಾಡಿ ಅಥವಾ ಯಾವುದೋ ರೀತಿಯಿಂದ ಆನ್ ಲೈನ್ ಮುಖಾಂತರ ವ್ಯಕ್ತಿಯೊಬ್ಬರ ಅರಿವಿಗೆ ಬಾರದೇ ಅವರ ಖಾತೆಯಿಂದ ಅಪರಿಚಿತರು ತಮ್ಮ ಖಾತೆಗೆ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ ಘಟನೆ ನಡೆದಿದೆ.
ಈ ಕುರಿತು ಒಳಾಂಗಣ ವಿನ್ಯಾಸಕಾರ ಆನಂದ ಗಣಪತಿ ಭಟ್ಟ ಕೆಕ್ಕಾರ ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆನಂದ ಭಟ್ಟ ಅವರ ಮಂಗಳೂರಿನ ಕೆನರಾ ಬ್ಯಾಂಕ್ ಖಾತೆಯಿಂದ ಪರಿಚಿತರು, ಆನಂದ ಭಟ್ಟ ಅವರ ಅರಿವಿಗೆ ಬಾರದಂತೆ ಹಂತ,ಹಂತವಾಗಿ ಒಟ್ಟೂ 3,69,667 ರೂ ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ.
ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ! ಈ ಕೆರೆಯಲ್ಲಿ ಕಾಣಿಸಿಕೊಳ್ಳುವ ಮೊಸಳೆಯನ್ನು ಹಿಡಿದು ಬೇರೆಡೆಗೆ ಸಾಗಿಸಲು ಎರಡು ದಿನಗಳಿಂದ ನಡೆಸಿದ ಪ್ರಯತ್ನ… Read more: ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ!