ಜಯಕರ್ನಾಟಕ ಸಂಘಟನೆಯ ಯಲ್ಲಾಪುರ ತಾಲೂಕಾ ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಅವರು ಶನಿವಾರ ತಮ್ಮ ಹುಟ್ಟುಹಬ್ಬವನ್ನು ವೃದ್ಧಾಶ್ರಮ ನಿವಾಸಿಗಳಿಗೆ ಅನ್ನದಾನ ಮಾಡುವ ಮೂಲಕ ಸರಳವಾಗಿ ಆಚರಿಸಿಕೊಂಡರು.

ವಿಲ್ಸನ್ ಫರ್ನಾಂಡಿಸ್ ಅವರು ಸಾಮಾಜಿಕ ಹೋರಾಟಗಾರರಾಗಿ, ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಶನಿವಾರ ತಮ್ಮ ಹುಟ್ಟುಹಬ್ಬವನ್ನು ಯಾವುದೇ ಆಡಂಬರ, ಅದ್ದೂರಿಯಾಗಿ ಆಚರಿಸದೇ ವೃದ್ಧಾಶ್ರಮ ನಿವಾಸಿಗಳೊಂದಿಗೆ ಸರಳವಾಗಿ ಆಚರಿಸಿ ಮಾದರಿಯಾದರು.

ಶನಿವಾರ ಮಧ್ಯಾಹ್ನ ಯಲ್ಲಾಪುರ ಪಟ್ಟಣದ ನಾಯಕನಕೆರೆಯ ರಾಘವೇಂದ್ರ ವೃದ್ಧಾಶ್ರಮಕ್ಕೆ ತೆರಳಿದ ವಿಲ್ಸನ್ ಫರ್ನಾಂಡಿಸ್ ಅವರು ತಮ್ಮ ಸಂಘಟನೆಯ ಪ್ರಮುಖರೊಂದಿಗೆ ವೃದ್ದಾಶ್ರಮ ನಿವಾಸಿಗಳಿಗೆ ಅನ್ನದಾನ ಮಾಡಿದರು.

ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಇದ್ದರು.

====================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading