ಯಲ್ಲಾಪುರ ತಾಲೂಕಿನ ಇಡಗುಂದಿ ಸಮೀಪದ ಚಿನ್ನಾಪುರ ದೇವಸ್ಥಾನದ ಚಿನ್ನೇಶ್ವರ ದೇವರಿಗೆ ಬೆಳ್ಳಿ ಕವಚ ಸಮರ್ಪಿಸಲಾಯಿತು .
ತಾಲೂಕಿನ ಅರಬೈಲ್ ನ ವಿಶ್ವೇಶ್ವರ ನಾರಾಯಣ ಹೆಗಡೆ ಕಣ್ಣಿಪಾಲ ಹಾಗೂ ಕುಟುಂಬದವರೆಲ್ಲರೂ ಸೇರಿ ಈ ಬೆಳ್ಳಿ ಕವಚ ದೇವರಿಗೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಹಿರಿಯ ವೈದಿಕರಾದ ಕೃಷ್ಣ ಭಟ್ಟ ಚಿಮ್ನಳ್ಳಿ, ರಾಮಚಂದ್ರ ಭಟ್ಟ ಕಬ್ಗಾಲ, ಚಿನ್ನಾಪುರ ಸೀಮಾ ಪರಿಷತ್ ಅಧ್ಯಕ್ಷ ದತ್ತಾತ್ರೇಯ ನಾ ಹೆಗಡೆ, ಚಿನ್ನಾಪುರ ದೇವಾಲಯದ ಕಟ್ಟಡ ಸಮಿತಿ ಅಧ್ಯಕ್ಷ ಡಾ.ಜಿ ಪಿ ಭಟ್ಟ ಹೊನ್ನಗದ್ದೆ, ಉಮೇಶ ಭಾಗ್ವತ ಕಳಚೆ ಸೇರಿದಂತೆ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಬರಗದ್ದೆ ದೇವಾಲಯದಲ್ಲಿ ಕುಂಕುಮಾರ್ಚನೆ
ಶ್ರಾವಣ ಮಾಸದ ಪ್ರಯುಕ್ತ ಯಲ್ಲಾಪುರ ತಾಲೂಕಿನ ಬರಗದ್ದೆ ಶ್ರೀಲಕ್ಷ್ಮೀನರಸಿಂಹ ದೇವಾಲಯದಲ್ಲಿ ಸಾಮೂಹಿಕ ಕುಂಕುಮಾರ್ಚನೆ, ರುದ್ರಾಭಿಷೇಕ ಪೂಜೆ ನಡೆಯಿತು.