ಪ್ರಗತಿ ವಿದ್ಯಾಲಯದ ವಿದ್ಯಾರ್ಥಿಗಳಿಗೆ ವೀರಾಗ್ರಣಿ ಪ್ರಶಸ್ತಿ
17 ವರ್ಷ ವಯೋಮಿತಿಯ ಒಳಗಿನ ಮಂಚಿಕೇರಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಪ್ರಗತಿ ವಿದ್ಯಾಲಯ ಭರತನಹಳ್ಳಿಯ ವಿದ್ಯಾರ್ಥಿಗಳು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ.
ವೈಯಕ್ತಿಕ ವಿಭಾಗದಲ್ಲಿ ಬಾಲಕ, ಬಾಲಕಿಯರ 100 ಮೀ. ಓಟದಲ್ಲಿ ಪ್ರಥಮ, ಉದ್ದ ಜಿಗಿತ ಪ್ರಥಮ, ಬಾಲಕಿಯರ 400 ಮೀ.ಹರ್ಡಲ್ಸ್, ಉದ್ದ ಜಿಗಿತ, ತ್ರಿವಿಧ ಜಿಗಿತಗಳು ಪ್ರಥಮ, ಬಾಲಕ ಬಾಲಕಿಯರ 200ಮೀ ಓಟ, ರೀಲೆಯಲ್ಲಿ ದ್ವಿತೀಯ, ಬಾಲಕರ 200ಮೀ ಓಟ, ಹರ್ಡಲ್ಸ್,
ಎತ್ತರ ಜಿಗಿತ ಬಾಲಕ ಬಾಲಕಿಯರ ಭರ್ಜಿ ಎಸೆತದಲ್ಲಿ ತೃತೀಯ, ನಡಿಗೆ, ಚಕ್ರ ಎಸೆತ, ಗುಂಡು ಎಸೆತದಲ್ಲಿ ತೃತೀಯ, ಬಾಲಕಿಯರ ಚೆಸ್ ದ್ವಿತೀಯ, ಬಾಲಕರ ಚೆಸ್ ದ್ವಿತೀಯ, ಸ್ಥಾನಗಳನ್ನು ಪಡೆದಿರುತ್ತಾರೆ. ಗುಂಪು ವಿಭಾಗದಲ್ಲಿ ಬಾಲಕ ಬಾಲಕಿಯರ ವಾಲಿಬಾಲ್ ಪ್ರಥಮ, ಬಾಲಕ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪ್ರಥಮ ಸ್ಥಾನಗಳನ್ನು ಪಡೆದು ಈ ಮೂಲಕ ಶಾಲೆಯು ಮಂಚಿಕೇರಿ ವಲಯ ಮಟ್ಟದ ಸಮಗ್ರ ವೀರಾಗ್ರಣಿ ಪಡೆದಿದೆ.