ಮತದಾರರ ಪಟ್ಟಿ ಪರಿಷ್ಕಕರಣೆ ಕುರಿತು ವಿಶೇಷ ಆಂದೋಲನ: ಜಿಲ್ಲಾಧಿಕಾರಿ
ಮತದಾರರ ಪಟ್ಟಿಯ ಪರಿಷ್ಕಕರಣೆ ಕುರಿತಂತೆ ಜಿಲ್ಲೆಯಲ್ಲಿ ಆಗಸ್ಟ್ 29 ಮತ್ತು 30 ಹಾಗೂ ಸೆಪ್ಟಂಬರ್ 19 ಮತ್ತು 20 ರಂದು ಜಿಲ್ಲೆಯ ಎಲ್ಲಾ ವಿಧಾನ ಸಭಾ ಮತಕ್ಷೇತ್ರಗಳಲ್ಲಿ ವಿಶೇಷ ಆಂದೋಲನ ದಿನಗಳನ್ನು ನಿಗದಿಪಡಿಸಲಾಗಿದ್ದು,ಈ ದಿನಗಳಂದು ಜಿಲ್ಲೆಯ ಮತದಾರರು ತಮ್ಮ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಬಿ.ಎಲ್.ಓ ಗಳನ್ನು ಭೇಟಿ ಮಾಡಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಕೆ.ಲಕ್ಷ್ಮೀಪ್ರಿಯಾ
ಮತದಾರರ ಪಟ್ಟಿಯ ವಿಶೇಷ ಆಂದೋಲನ ದಿನಗಳಂದು ಆಯಾ ಮತಗಟ್ಟೆಗಳಲ್ಲಿ ಬಿಎಲ್‍ಒಗಳು (ಮತಗಟ್ಟೆ ಮಟ್ಟದ ಅಧಿಕಾರಿಗಳು) ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಲಭ್ಯವಿರಲಿದ್ದು, ಈ ಸಂದರ್ಭದಲ್ಲಿ ಮತದಾರರಿಂದ ಹೊಸದಾಗಿ ಹೆಸರು ಸೇರ್ಪಡೆ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ ಸೇರಿದಂತೆ ಅಗತ್ಯ ಅರ್ಜಿಗಳನ್ನು ನಮೂನೆ-6, ನಮೂನೆ-6ಎ, ನಮೂನೆ-7 ಹಾಗೂನಮೂನೆ-8ರಲ್ಲಿಸ್ವೀಕರಿಸುವುದರ ಜೊತೆಗೆ ಕರಡು ಮತದಾರರ ಪಟ್ಟಿಯಲ್ಲಿನ ಮತದಾರರ ಹೆಸರುಗಳನ್ನು ಗುರುತಿಸಲು ಕೂಡಾ ಸಹಕರಿಸಲಿದ್ದು ಜಿಲ್ಲೆಯ ಸಾರ್ವಜನಿಕರು ಈ ವಿಶೇಷ ಆಂದೋಲನದ ಸದುಪಯೋಗ ಪಡೆಯುವಂತೆ ತಿಳಿಸಿದ್ದಾರೆ.