ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ನೇಣು ಹಾಕಿಕೊಂಡು ಮೃತಪಟ್ಟ ಘಟನೆ ಯಲ್ಲಾಪುರ ತಾಲೂಕಿನ ಕನ್ನಡಗಲ್ ಸಮೀಪದ ಲಾಲಗುಳಿಯ ಹಳಬೈಲಿನಲ್ಲಿ ನಡೆದಿದೆ.
ಹಳಬೈಲಿನ ಕೃಷಿಕರಾದ 63 ವರ್ಷದ ಕೃಷ್ಣ ತಂದೆ ಶಿವಾ ಮರಾಠಿ ಎಂಬುವವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದೇ ವಿಷಯಕ್ಕೆ ಬೇಸತ್ತು ತಮ್ಮ ಮನೆಯ ಪಕ್ಕದಲ್ಲಿರುವ ಗಿಡಕ್ಕೆ ನೇಣುಹಾಕಿಕೊಂಡು ಮೃತಪಟ್ಟಿದ್ದಾರೆ. ಇವರ ಮರಣದಲ್ಲಿ ಯಾವುದೇ ಸಂಶಯ ಇಲ್ಲ ಎಂದು ಮೃತರ ಪುತ್ರ ರವಿ ಮರಾಠಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆ.30ರಂದು ರಾತ್ರಿ 9 ಗಂಟೆಯಿಂದ ಆ.31ರ ಬೆಳಿಗ್ಗೆ 6.30 ಗಂಟೆಯ ನಡುವಿನ ಅವಧಿಯಲ್ಲಿ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.