ಸರಕಾರಿ ಸೇವೆಯಲ್ಲಿ ಕೆಲಸ ಮಾಡುವವರು ಜನಸ್ನೇಹಿಯಾಗಿರಬೇಕು. ನಾಡಿನ ಸಂಸ್ಕೃತಿ, ಭಾಷಾಭಿವೃದ್ದಿಯಲ್ಲಿ ಪ್ರಮುಖಪಾತ್ರ ವಹಿಸುವ ಸರಕಾರಿ ನೌಕರರು ವೃತ್ತಿಯೊಂದಿಗೆ ಉತ್ತಮ ಸೃಜನಶೀಲ ಪ್ರವೃತ್ತಿಯನ್ನು ಮೈಗೂಡಿಸಿಕೊಂಡು ಕಲೆ ಸಾಹಿತ್ಯ ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರ ಬೆಳಗುವ ಕೆಲಸ ಮಾಡಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಅವರು ಯಲ್ಲಾಪುರ ಪಟ್ಟಣದ ಅಡಿಕೆಭವನದಲ್ಲಿ ನಡೆದ ರಾಜ್ಯ ಸರಕಾರಿ ನೌಕರರ ಮತ್ತು ಸಾಹಿತ್ಯ ಪರಿಷತ್ತು (ರಿ) ಬೆಂಗಳೂರು ಹಮ್ಮಿಕೊಂಡ ಜಿಲ್ಲಾ ಘಟಕದ ಪದಗ್ರಹಣ,ಸಾಂಸ್ಕೃತಿಕ ವೈಭವ,ಉತ್ತಮ ಸೇವಾ ಸಂಸ್ಥೆ ಹಾಗೂ ಕಾಯಕ ರತ್ನ ಪ್ರಶಸ್ತಿ ಪಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಿಶೇಷ ಅತಿಥಿಗಳಾಗಿ ಆಗಮಿಸಿದ ರಾ.ಸ.ನೌ.ಸಂ.ಸಾ.ಪರಿಷತ್ತಿನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಮಾ ಆರ್ ಮಾತನಾಡಿ ಸರಕಾರಿ ನೌಕರರಿಗೆ ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳು ಇಂದಿನ ಕಾರ್ಯದೊತ್ತಡದಲ್ಲಿ ಮಾಯವಾಗುತ್ತಿವೆ. ಪ್ರತಿಯೊಬ್ಬ ನೌಕರ ಪ್ರತಿಭಾವಂತ, ಕ್ರಿಯಾಶೀಲರಾಗಿರುತ್ತಾರೆ. ಇಂತಹ ಪ್ರತಿಭೆಗಳಿಗೆ ಸೂಕ್ತ ವೇದಿಕೆ ನೀಡಿ ಪೆÇ್ರೀತ್ಸಾಹ ನೀಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶವೆಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ ಶಿವಲೀಲಕ್ಕ ಮಾತನಾಡಿ ಮನುಷ್ಯನಾದವನೂ ಒಂದಿಲ್ಲೊಂದು ಕಾಯಕ ಮಾಡುತ್ತ, ಶಿವಶರಣರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆದು ಬದುಕನ್ನು ಸದ್ವನಿಯೋಗ ಮಾಡಿಕೊಳ್ಳಬೇಕು ಎಂದರು.

ಕ.ಸಾ.ಪ.ಜಿಲ್ಲಾದ್ಯಕ್ಷರಾದ ಬಿ.ಎನ್ ವಾಸರೆ ಮಾತನಾಡಿ ಕನ್ನಡ ನಾಡು ನುಡಿ ಉಳಿಸುವ ಕೆಲಸವನ್ನು ಒಟ್ಟಾಗಿ ಮಾಡಬೇಕು ಎಂದರು. ಇದೇ ಸಂದರ್ಭದಲ್ಲಿ ಸಂತೋಷ ಕುಸನೂರರವರ ತ್ರಿವೇಣಿಯಂತರಂಗ ಪುಸ್ತಕ ಬಿಡುಗಡೆಗೊಳಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಜಿಲ್ಲಾಧ್ಯಕ್ಷ ಸಂತೋಷಕುಮಾರ ಪಾಟೀಲ್ ಮಾತನಾಡಿ, ಇಂತಹ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತನು ಮನ ಧನ ಸಹಾಯ ಕಲ್ಪಿಸಿದ ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಎಲ್ಲ ವಲಯ ಅರಣ್ಯಾಧಿಕಾರಿಗಳಿಗೆ, ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿಗಳಿಗೆ ಹಾಗೂ ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಎಲ್ಲ ವಲಯ ಅರಣ್ಯಾಧಿಕಾರಿಗಳಿಗೆ ಕೃತಜ್ಞತೆ ಅರ್ಪಿಸಿದರು. ತಮ್ಮ ಮಾತೃ ಇಲಾಖೆಯು ಸಂಘಟನೆಯ ಬೆನ್ನಿಗೂ ನಿಂತಿತು ಎಂದು ಹೇಳಿದರು.

ತಾಲೂಕಾ ಘಟಕದ ಅಧ್ಯಕ್ಷರಿಗೆ ಪದಗ್ರಹಣ ಪ್ರತಿಜ್ಞಾವಿಧಿಯನ್ನು ಹಿರಿಯ ಉಪಾಧ್ಯಕ್ಷರಾದ ಸಾಹಿತಿ,ಶಿಕ್ಷಕಿ ಶಿವಲೀಲಾ ಹುಣಸಗಿ ಬೋಧಿಸಿದರು. ಕಾಯಕ ರತ್ನ ಪ್ರಶಸ್ತಿ ಪಧಾನ ಮಾಡಲಾಯಿತು. ಉಷಾ ನಾಯಕ (ಶಿಕ್ಷಣ ಸೇವೆ) ತುಳಸಿ ಗೌಡ(ರೈತ ಮಹಿಳೆ)ನಾಗರಾಜ ಕಲಾಲ( ಸಂಘಟನೆ) ಮುತ್ತುರಾಜ ಹಳ್ಳಿ(ಉರಗ ತಜ್ಞ) ವೆಂಕಟೇಶ ಗೌಡ( ಶಿಕ್ಷಣ ಸೇವೆ), ಪ್ರಭಾ ಜಯರಾಜ ಗೋವಿ( ಪತ್ರಿಕೋದ್ಯಮ) ಜ್ಞಾನ ಪ್ರಕಾಶ ಕಾರಂತ( ವೈದ್ಯಕೀಯ )ಗುರುನಾಯಕ( ಶೌರ್ಯ)ವಿ.ಜಿ.ಭಟ್ಟ( ಶಿಕ್ಷಣ)
ಹನುಮಂತ ಚೋಟನ್ನವರ(ಶಿಕ್ಷಣ) ದೇವಿಗೌಡ(ನಾಟಿ ಔಷಧ) ಸುಮಾ.ಜಿ(ಶಿಕ್ಷಣ) ಬಿ.ಜಿ.ತುರಮರಿ( ಮಾದರಿ ಶಾಲೆ ನಿರ್ಮಾಣ) ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ ತೊದಲಬಾಗಿ, ಎಲ್.ಐ.ಲಕ್ಕಮ್ಮನವರ್, ಫರ್ವಿನ್ ಭಾನು ಬುಳ್ಳಣ್ಣನವರ್, ಬಸವರಾಜ ಬಾಗಲ್, ಸುಬ್ರಾಯ ಬಿದ್ರೆಮನೆ, ಜಯಶ್ರೀ ಬೆರಗೌಡ ಪಾಲ್ಗೊಂಡಿದ್ದರು.

ಜಿಲ್ಲಾ ಮಟ್ಟದ ಉತ್ತಮ ಸೇವಾ ಸಂಸ್ಥೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಮ್ಮೂರು ಸೇವಾ ಟ್ರಸ್ಟ್ ಶಿರಸಿ, ಗ್ರಾಮ ಅರಣ್ಯ ಸಮಿತಿ ಮೌಳಂಕಿ ದಾಂಡೇಲಿ, ನಿನಾದ ಸಾ.ಸಾ.ಸಂ ಭಟ್ಕಳ,ಗ್ರಾ.ಅ.ಸಮಿತಿ ಹೆಮ್ಮಾಡಿ, ಎಸ್.ಡಿ.ಎಮ್.ಸಿ ಅರಬೈಲ್,ಜಿಲ್ಲಾ ಗ್ರಾಮ ಒಕ್ಕಲು ಸಂಘ, ಕುಮಟಾ ಎಸ್.ಡಿ.ಎಮ್.ಸಿ ಕಸ್ತೂರಬಾ ನಗರ ಶಾಲೆ ಸಿರಸಿ, ಸಾಂಸ್ಕೃತಿಕ ವೈಭವದಲ್ಲಿ ಭಾಗವಹಿಸಿದ ಸಂಗೀತ ಸೇವೆ ಜ್ಞಾನ ಪ್ರಜ್ಞಾ ಅಂಧ ಮಕ್ಕಳ ಶಾಲೆ ಮುಂಡಗೋಡ.

ನೃತ್ಯ ಪ್ರದರ್ಶನ,ಯಕ್ಷಗಾನ,ಭರತನಾಟ್ಯ, ಶಿಕ್ಷಕಿಯರ ಜಾನಪದ ನೃತ್ಯ ಸಿದ್ದಿ ಜನಾಂಗದ ಡಮಾಮಿ ನೃತ್ಯ, ಹಾಲಕ್ಕಿ ಒಕ್ಕಲಿಗರ ನೃತ್ಯ ಪ್ರದರ್ಶನಗೊಂಡವು. ಪ್ರಧಾನ ಕಾರ್ಯದರ್ಶಿ ಶೈಲ ಐನಾಪೂರ ಸ್ವಾಗತಿಸಿದರು. ಪ್ರಾರ್ಥನೆ ಜ್ಞಾನ ಪ್ರಜ್ಞಾ ಅಂಧ ಮಕ್ಕಳಿಂದ, ನಾಡಗೀತೆ ಮೊರಾರ್ಜಿ ಶಾಲಾ ಮಕ್ಕಳಿಂದ ಪ್ರಾರ್ಥನೆ ನಡೆಯಿತು. ಗೌರವಾಧ್ಯಕ್ಷ ವಿಠ್ಠಲ ಕೊರವೆಕರ ಪ್ರಾಸ್ತಾವಿಕ ಮಾತನಾಡಿದರು. ವಿಷ್ಣು ಪಟಗಾರ ಜೋಯಿಡಾ, ವೀಣಾ ಜೋಶಿ ಕುಮಟಾ ನಿರ್ವಹಿಸಿದರು. ಸದ್ಗುರು ಭಟ್ಟ ವಂದಿಸಿದರು.

================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading