ಜೀವನ ನಡೆಸುವುದು ಕಷ್ಟ ಎಂಬ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ವ್ಯಕ್ತಿಯೊಬ್ಬ ನೇಣಿಗೆ ಶರಣಾದ ಘಟನೆ ನಡೆದಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ನವೀನ ಬಾಂದೇಕರ್ ದೂರು ದಾಖಲಿಸಿದ್ದಾರೆ.
ದೂರಿನ ಪ್ರಕಾರ ತಾಲೂಕಿನ ಸಹಸ್ರಳ್ಳಿ ಸಮೀಪದ ಕಬ್ಬಿನಗುಳಿಯ 50 ವರ್ಷದ ಪುಂಡಲೀಕ ತುಕಾರಾಮ ಗಾವಡೆ ಎಂಬ ಎಂಬ ಕೃಷಿಕ ಈ ವರ್ಷ ಮಳೆ ಸರಿಯಾಗಿ ಬಂದಿಲ್ಲ, ನಾನು ಬೆಳೆ ಕೂಡ ಮಾಡಿಲ್ಲ, ಜೀವನ ನಡೆಸುವುದು ಕಷ್ಟವಾಗಿದೆ, ನಾನು ಇನ್ನು ಎರಡು ಮಕ್ಕಳ ಮದುವೆ ಮಾಡಬೇಕು ಎಂದು ಹೇಳುತ್ತಿದ್ದರು.
ಇದೇ ವಿಷಯವನ್ನು ಪುಂಡಲೀಕ ತುಕಾರಾಮ ಗಾವಡೆ ಮನಸ್ಸಿಗೆ ಹಚ್ಚಿಕೊಂಡು ಅ.6 ರಂದು ಮಧ್ಯಾಹ್ನ 1.30 ಗಂಟೆಯಿಂದ ಅ.9 ಬೆಳಿಗ್ಗೆ 6.30 ಗಂಟೆಯ ನಡುವಿನ ಅವಧಿಯಲ್ಲಿ ಕಬ್ಬಿನಗುಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡು ಜಾತಿಯ ಮರದ ಕೊಂಬೆಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ಮೃತನ ಮರಣದಲ್ಲಿ ಯಾವುದೇ ಸಂಶಯ ಇಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.