ಅನೇಕ ದಶಕಗಳಿಂದ ಚಿನ್ನ ಹಾಗೂ ವಜ್ರದ ಆಭರಣಗಳ ಮಾರಾಟಕ್ಕೆ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿರುವ ಪ್ರತಿಷ್ಠಿತ ಸ್ವರ್ಣ ಜುವೆಲ್ಲರಿ ಕಂಪನಿಯಿಂದ ಯಲ್ಲಾಪುರ ಪಟ್ಟಣದ ವೆಂಕಟ್ರಮಠದ ಸಭಾಭವನದಲ್ಲಿ ನಾಲ್ಕು ದಿನ ನಡೆಯುತ್ತಿರುವ ಬಂಗಾರದ ಹಾಗೂ ವಜ್ರಾಭರಣಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟಕ್ಕೆ ರವಿವಾರ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶ್ವಾಸಾರ್ಹ ವ್ಯವಹಾರ ಹಾಗೂ ಶ್ರೇಷ್ಠ ಗುಣಮಟ್ಟದ ಬಂಗಾರ, ಬೆಳ್ಳಿ ಮತ್ತು ವಜ್ರಾಭರಣಗಳ ಮಾರಾಟಕ್ಕೆ ಹೆಸರುವಾಸಿಯಾದ ಸ್ವರ್ಣ ಸಂಸ್ಥೆಯವರು ದಸರಾ ಹಬ್ಬದ ಸಂದರ್ಭದಲ್ಲಿ ಯಲ್ಲಾಪುರದಲ್ಲಿ ಬಂಗಾರ ಹಾಗೂ ವಜ್ರಾಭರಣಗಳನ್ನು ಖರೀದಿಸಲು ಗ್ರಾಹಕರಿಗೆ ಅವಕಾಶ ಕಲ್ಪಿಸಿರುವುದು ಶ್ಲಾಘನೀಯವಾಗಿದೆ. ಬಂಗಾರ ಹಾಗೂ ವಜ್ರಾಭರಣಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟದ ಸಂದರ್ಭದಲ್ಲಿ ಹಲವು ವಿಶೇಷ ಕೊಡುಗೆಗಳನ್ನೂ ಸಹ ನೀಡುತ್ತಿದ್ದಾರೆ. ವೈವಿಧ್ಯಮಯ ಆಭರಣಗಳ ಬೃಹತ್ ಸಂಗ್ರಹವೂ ಇಲ್ಲಿದೆ. ಇಂತಹ ಅವಕಾಶದ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.

ಸ್ವರ್ಣ ಜುವೆಲ್ಲರಿ ಸಂಸ್ಥೆಯ ಮಾಲೀಕರಾದ ಅವಿನಾಶ ಗೋಪಾಲಕೃಷ್ಣ ನಾಯಕ ಗುಜ್ಜಾಡಿ, ಯಲ್ಲಾಪುರದ ರಾಮಾ ಸ್ಟೋರ್ಸ್ ಮಾಲೀಕ ಮಾರುತಿ ನಾಯಕ, ಸಂಸ್ಥೆಯ ಹುಬ್ಬಳ್ಳಿ ವಿಭಾಗದ ಪ್ರಮುಖರಾದ ವಿಭಾ ನಾಯಕ, ವೆಂಕಟ್ರಮಣ ದೇವಾಲಯದ ಅರ್ಚಕ ಪ್ರಮೋದ ಭಟ್ ಮುಂತಾದವರು ಇದ್ದರು.

===========

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading