
30-8-2021. ಸೋಮವಾರ,
e-yellapur.com News.
ಸುಜ್ಞಾನ ನೆಟ್‍ವರ್ಕ್ಅವರ e-yellapur.com ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಮುದ್ದು ಕೃಷ್ಣ ವೇಷ ಫೋಟೋ ಸ್ಪರ್ಧೆ-2021” ಫಲಿತಾಂಶವನ್ನು ಇಂದು ಸಂಜೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಪ್ರಕಟಿಸಲಾಗಿದೆ.

ಯಲ್ಲಾಪುರ ತಾಲೂಕಿನ ಪುರಾಣಪ್ರಸಿದ್ಧ ಅಣಲಗಾರ ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ ಶ್ರೀದೇವರ ಸನ್ನಿಧಿಯಲ್ಲಿ ಗಣ್ಯರು ಸ್ಪರ್ಧಾವಿಜೇತರ ಹೆಸರುಗಳನ್ನು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಖ್ಯಾತ ಮದ್ದಳೆ ವಾದಕ, ಯಕ್ಷಗುರು ಗಣಪತಿ ಭಾಗ್ವತ್ ಕವಾಳೆ, ಕೇಂದ್ರ ಸರಕಾರದ ಬಿಸ್ಮಿಲ್ಲಾಖಾನ್ ಯುವ ಪ್ರಶಸ್ತಿ ಪುರಸ್ಕೃತ ಭಾಗವತ ಅನಂತ ಹೆಗಡೆ ದಂತಳಿಗೆ, ಅಣಲಗಾರ್ ಗೋಪಾಲಕೃಷ್ಣ ದೇವಾಲಯದ ಮೊಕ್ತೇಸರ ಗೋಪಾಲಕೃಷ್ಣ ಭಟ್ಟ ವೈದಿಕರಮನೆ, ಮೃದಂಗವಾದಕ ನರಸಿಂಹ ಭಟ್ಟ ಹಂಡ್ರಮನೆ, ಚಂಡೆವಾದಕ ಪ್ರಮೋದ ಕಬ್ಬಿನಗದ್ದೆ, ವಿಜಯವಾಣಿ ವರದಿಗಾರ ಶ್ರೀಧರ ಅಣಲಗಾರ್, ಶ್ರೀರಾಮಲಿಂಗೇಶ್ವರ ಕಲಾಕೂಟದ ಅಧ್ಯಕ್ಷ ಎನ್.ಎಸ್.ಭಟ್ಟ ನಂದೊಳ್ಳಿ ಹಾಗೂ ಸುಜ್ಞಾನ ನೆಟ್‍ವರ್ಕ್ ಮುಖ್ಯಸ್ಥ ಜ್ಯೋತಿರಾದಿತ್ಯ ಭಟ್ ಯಲ್ಲಾಪುರ ಉಪಸ್ಥಿತರಿದ್ದರು.
ಉತ್ತಮ ಸ್ಪಂದನೆ ;
“ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ -2021” ಸ್ಫರ್ಧೆಗೆ ಉತ್ತರಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಮುದ್ದು ಕೃಷ್ಣ ವೇಷದ ಫೋಟೋಗಳನ್ನು ಕಳಿಸಲಾಗಿತ್ತು. ಇವುಗಳಲ್ಲಿ ಮೂರು ಫೋಟೋಗಳನ್ನು ಪ್ರಥಮ,ದ್ವಿತೀಯ,ತೃತೀಯ ಬಹುಮಾನಕ್ಕೆ ನಿರ್ಣಾಯಕರು ಆಯ್ಕೆ ಮಾಡಿದ್ದಾರೆ. ಮತ್ತು 10 ಫೋಟೋಗಳಿಗೆ ಸಮಾಧಾನಕರ ಬಹುಮಾನಗಳನ್ನು ಪ್ರಕಟಿಸಲಾಗಿದೆ. ಈ ಸ್ಪರ್ಧೆಯ ನಿರ್ಣಾಯಕರಾಗಿ ವಿಶ್ರಾಂತ ಪ್ರಾಂಶುಪಾಲರು, ಬರಹಗಾರರೂ ಆದ ಬೀರಣ್ಣಾ ನಾಯಕ ಮೊಗಟಾ, ಖ್ಯಾತ ನೇತ್ರತಜ್ಞೆ ಡಾ. ಸೌಮ್ಯ ಕೆ.ವಿ. ಹಾಗೂ ವಿಶ್ರಾಂತ ಪ್ರಾಂಶುಪಾಲ ಜಯರಾಮ ಗುನಗಾ ಅವರು ಪಾಲ್ಗೊಂಡಿದ್ದರು.
ಸೆ.4ಕ್ಕೆ ಬಹುಮಾನ ವಿತರಣೆ ;
ಸ್ಪರ್ಧಾ ವಿಜೇತರಿಗೆ ಹಾಗೂ ಸಮಾಧಾನಕರ ಬಹುಮಾನಕ್ಕೆ ಆಯ್ಕೆಯಾದವರಿಗೆ ಸೆ.4ರಂದು ಯಲ್ಲಾಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಬಹುಮಾನ ವಿತರಣೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಈ ಸ್ಪರ್ಧೆಯ ಸಹಪ್ರಾಯೋಜಕರಾದ ಖ್ಯಾತ ಆಭರಣ ಮಳಿಗೆ ಗೌತಮ್ ಜ್ಯುವೆಲ್ಲರ್ಸ್ ಮಾಲಕರಾದ ಪ್ರಕಾಶ ಎಂ. ಶೇಟ್, ಹಾಗೂ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಮುದ್ದು ಕೃಷ್ಣ ವೇಷ ಫೋಟೋ ಸ್ಪರ್ಧೆ” -2021 ರ ಸ್ಪರ್ಧಾ ವಿಜೇತರು.
“ ಪ್ರಥಮ ಬಹುಮಾನ ”- ಸಿಂಚನಾ ಸಂಜಯ ಭಟ್,
ಮಾರ್ಗಜಡ್ಡಿ, ಯಲ್ಲಾಪುರ.

ಮಾರ್ಗಜಡ್ಡಿ, ಯಲ್ಲಾಪುರ.. “ ಪ್ರಥಮ ಬಹುಮಾನ
“ ದ್ವಿತೀಯ ಬಹುಮಾನ ”
ಆರವ ಸಂತೋಷ ನಾಯ್ಕ, ಅಂಕೋಲಾ

ಆರವ ಸಂತೋಷ ನಾಯಕ, ಅಂಕೋಲಾ
“ ತೃತೀಯ ಬಹುಮಾನ ” –
ಆಯುಷ್ ಪ್ರಶಾಂತ ಹೆಗಡೆ,ಲಕ್ಕಿಜಡ್ಡಿ, ಸಿದ್ದಾಪುರ.

ಆಯುಷ್ ಪ್ರಶಾಂತ ಹೆಗಡೆ,ಲಕ್ಕಿಜಡ್ಡಿ, ಸಿದ್ದಾಪುರ.
—————————-
ಸಮಾಧಾನಕರ ಬಹುಮಾನಗಳು ;
ನೇಸರ್ ವಾಸುದೇವ ಫುಲ್ಕರ್ ಹೊನ್ನಾವರ, ಧೃತಿ ವಿನಾಯಕ ಶೆಟ್ಟಿ ಶಿರಸಿ,ಆಯಷ್ ಭಟ್, ಕಲ್ಲೇಶ್ವರ, ಅಂಕೋಲಾ, ತರುಣ ಹಿರೇಮಠ, ಯಲ್ಲಾಪುರ, ಧ್ಯಾನ್ ನಾಗರಾಜ ಮೂಗ್ತಿ, ಶಿರಸಿ
ಶ್ರೀನೀಲ್ ಲಮಾಣಿ. ಯಲ್ಲಾಪುರ, ಶೋಭಿತ್ ಕಿರಣ ಹೆಗಡೆ, ಶಿರಸಿ, ಸಾತ್ವಿಕ್.ಎಮ್.ಹೆಗಡೆ. ಮಂಚೀಕೇರಿ, ಶ್ರೀರಕ್ಷಾ ಸುಬ್ರಾಯ ಭಟ್ಟ ಬಂಡಿಹಳ್ಳ, ಧೃತಿ ಮಹೇಶ ಹೆಗಡೆ,ಪಣತಗೇರಿ.
ಈ ಸ್ಫರ್ಧೆಯಲ್ಲಿ ಪಾಲ್ಗೊಂಡ ಎಲ್ಲ ಮಕ್ಕಳಿಗೆ ಹಾಗೂ ಪಾಲಕ,ಪೋಷಕರಿಗೆ ಧನ್ಯವಾದಗಳು. ಸ್ಫರ್ಧೆಗೆ ಸ್ವೀಕೃತವಾದ ಫೋಟೋಗಳಲ್ಲಿ ಆಯ್ದ ಫೋಟೋಗಳನ್ನು e-yellapur.com digital ಮಾಧ್ಯಮದಲ್ಲಿ ಪ್ರಕಟಿಸಲಾಗುವುದು.
— team sujnan networks
—ADVT–









ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/KlvHKrtcQbl1m1rcati7gv
ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur
FACEBOOK GROUP – https://www.facebook.com/groups/593852164946589













