
E-ಯಲ್ಲಾಪುರ (ಪ್ರಾಯೋಜಿತ)

“ಶಿಕ್ಷಣವೇ ಶಕ್ತಿ-ಸಂಸ್ಕೃತಿಯೇ ಜೀವನ” ಎಂಬ ಮಹೋನ್ನತ ಧ್ಯೇಯವನ್ನು ಪರಿಪಾಲಿಸಲು ಸಂಕಲ್ಪಿಸಿ 1997-98ರಲ್ಲಿ ಸ್ಥಾಪಿತವಾದ ಯಲ್ಲಾಪುರ ತಾಲೂಕಿನ ಇಡಗುಂದಿಯ ಸ್ನೇಹಸಾಗರ ಆಂಗ್ಲಮಾಧ್ಯಮ ವಸತಿ ಶಾಲೆಯು ಶ್ರೇಷ್ಠ ಗುಣಮಟ್ಟದ, ಉತ್ತಮ ಶಿಕ್ಷಣ ನೀಡುತ್ತಾ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಅನೇಕ ಸಾಧನೆಗಳನ್ನು ಮಾಡಿದ ಹಿರಿಮೆಯನ್ನು ಹೊಂದಿದೆ.

ಆಧುನಿಕ ವ್ಯವಸ್ಥೆಯಲ್ಲಿ ವಿಧ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಪೂರಕವಾದ ಪಠ್ಯ,ಪಠ್ಯೇತರ ಚಟುವಟಿಕೆಗಳನ್ನು ನೀಡುತ್ತಿರುವ ಈ ಶಾಲೆಯು ಆಂಗ್ಲಮಾಧ್ಯಮ ವಸತಿ ಶಾಲೆಯಾಗಿದ್ದು, ಇಲ್ಲಿ 5ರಿಂದ 10 ನೇತರಗತಿಯ ವರೆಗೆ ಕಲಿಸಲಾಗುತ್ತಿದೆ.ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ಸುಸಜ್ಕಿತ ಪರಿಪೂರ್ಣ ವಸತಿಗಾಗಿ ಹಾಸ್ಟೇಲ್ ವ್ಯವಸ್ಥೆಯನ್ನು ಹೊಂದಿದೆ.

ಮಲೆನಾಡಿನ ಶುದ್ಧವಾತಾವರಣದ, ಪ್ರಕೃತಿಯ ಮಡಿಲಿನಲ್ಲಿರುವ ಈ ಶಾಲೆಯು ಸಂಸ್ಕಾರಯುಕ್ತ ಶಿಕ್ಷಣ ನೀಡುತ್ತಾ, ಮಕ್ಕಳು ಸುಭಧ್ರ ಭವಿಷ್ಯವನ್ನು ಕಟ್ಟಿಕೊಳ್ಳಲು ನೆರವಾಗುತ್ತಿದೆ. ಮಾದರಿಯಾದ ಬೋಧನಾ ಕ್ರಮ ಮತ್ತು ಎಲ್ಲ ರೀತಿಯ ಸುಸಜ್ಜಿತ ಸೌಲಭ್ಯಗಳನ್ನು ಹೊಂದಿದ್ದು, ಪಾಲಕರ,ಪೋಷಕರ, ಜನರ ಮನ ಗೆದ್ದಿದೆ.

ಇಲ್ಲಿವೆ ವಿಶೇಷ ಕಲಿಕಾ ಸೌಲಭ್ಯಗಳು ;
ಉತ್ತಮ ಗುಣಮಟ್ಟದ ಶಿಕ್ಷಣ ಸೌಲಭ್ಯಕ್ಕೆ ಹೆಸರಾದ ಸ್ನೇಹಸಾಗರ ವಸತಿ ಶಾಲೆಯು ಗಮನ ಸೆಳೆಯುವ ಅನೇಕ ಕಲಿಕಾ ಸೌಲಭ್ಯಗಳನ್ನು ಹೊಂದಿದೆ. ಅನುಭವಿ, ನುರಿತ ಶಿಕ್ಷಕ ವೃಂದವಿದೆ. ದಕ್ಷ ಸಿಬ್ಬಂದಿಗಳಿದ್ದಾರೆ.

ಇ-ಲರ್ನಿಂಗ್, ಸಿಸಿಟಿವಿ ಕಣ್ಗಾವಲಿನ ವಿಶಾಲವಾದ ಕ್ಯಾಂಪಸ್, ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಅಳವಡಿಸಲಾದ ರೊಬ್ಯಾಟಿಕ್ ಲ್ಯಾಬ್, ಇಂಗ್ಲೀಷ್ ಲಾಂಗ್ವೇಜ್ ಲ್ಯಾಬ್, ರಾಜ್ಯ ಪಠ್ಯಕ್ರಮದ ಬೋಧನೆ, ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳ ಕಲಿಕೆಗೆ ಪೂರ್ಣ ಅವಕಾಶ ಇದೆ. ಯೋಗ, ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಬೇಸಿಗೆ ತರಬೇತಿ ಶಿಬಿರ ಏರ್ಪಡಿಸಲಾಗುತ್ತದೆ.

ಕಂಪ್ಯೂಟರ್ ಕೋರ್ಸ್ ತರಬೇತಿ ನೀಡಲಾಗುತ್ತಿದೆ. ಈ ತರಬೇತಿಯ ಪೂರ್ಣ ಅವಧಿಯ ನಂತರ (10 ನೇ ವರ್ಗ ಪಾಸಾದ ನಂತರ) ಕಂಪ್ಯೂಟರ್ ಶಿಕ್ಷಣ ಪೂರ್ಣಗೊಳಿಸಿದ ಬಗ್ಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಸ್ಮಾರ್ಟ್ ಡಿಜಿಟಲ್ ಕ್ಲಾಸ್ ರೂಂ ಹೊಂದಿದೆ.

ಬೈಯೋಮೆಟ್ರಿಕ್ ವ್ಯವಸ್ಥೆ, ಸೈನ್ಸ್ ಲ್ಯಾಬ್, ಕ್ರೀಡೆ ಮತ್ತು ಸಾಹಿತ್ಯ ಚಟುವಟಿಕೆಗೆ ಪ್ರೋತ್ಸಾಹ ಇಲ್ಲಿಯ ವಿಶೇಷವಾಗಿದೆ. ಐದು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿರುವ ಲೈಬ್ರರಿ ಇದ್ದು, ಈ ಲೈಬ್ರರಿಯಲ್ಲಿ ಮಕ್ಕಳು ಓದುವ, ಪುಸ್ತಕಗಳನ್ನು ತೆಗೆದುಕೊಳ್ಳುವ, ಮರಳಿಸುವ ಬಗ್ಗೆ ಹಾಗೂ ಮಕ್ಕಳ ಕಲಿಕಾ ಪ್ರಗತಿ, ದಿನಚರಿಗಳು ಪಾಲಕರಿಗೆ ಮೆಸೇಜ್ ರೂಪದಲ್ಲಿ ರವಾನೆಯಾಗುತ್ತಿದ್ದು, ಮಗುವಿನ ಎಲ್ಲ ಚಟುವಟಿಕೆಗಳನ್ನು ಪಾಲಕರು ತಮ್ಮ ಮನೆಯಿಂದಲೇ ಅರಿಯಬಹುದಾಗಿದೆ.

ಇಲ್ಲಿನ ಶಿಕ್ಷಕರೂ ಸಹ ಕ್ಯಾಂಪಸ್‍ನಲ್ಲಿಯೇ ವಾಸ್ತವ್ಯ ಮಾಡುತ್ತಿದ್ದು, ವಿಧ್ಯಾರ್ಥಿಗಳೊಂದಿಗೆ ನಿರಂತರವಾಗಿ ಕಲಿಕಾ ಸಂಪರ್ಕಲ್ಲಿರುವುದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ. ಸ್ಮಾರ್ಟ್ ಕ್ಲಾಸ್ ಸೌಲಭ್ಯ ಇದೆ. ಕ್ಲಾಸ್ ರೂಂ ಹಾಗೂ ಸಂಪೂರ್ಣ ಕ್ಯಾಂಪಸ್, ಹಾಸ್ಟೇಲ್‍ಗಳು ಸಿ.ಸಿ.ಟಿವಿ ಕಣ್ಗಾವಲಿನಲ್ಲಿ ಇದೆ. ಪ್ರತಿ ವರ್ಷ ಸ್ವರ್ಣವಲ್ಲೀ ಶ್ರೀಮಠದ ವತಿಯಿಂದ ಕುಮಾರಿ ಸಂಸ್ಕೃತಿ ಶಿಬಿರ, ಭಗವದ್ಗೀತಾ ಅಭಿಯಾನ, ಶಾಲೆಯ ವತಿಯಿಂದ ವನಮಹೋತ್ಸವ ನಡೆಯುತ್ತವೆ. ಹಾರ್ಮೊನಿಯಂ, ಸಂಗೀತ, ತಬಲಾ ಭರತನಾಟ್ಯ ತರಬೇತಿ ವಿಶಾಲವಾದ ಸಭಾಂಗಣ ವ್ಯವಸ್ಥೆ ಇದ್ದು, ಇಲ್ಲಿ ಸಾಧಕರ ಫೋಟೋಗಳನ್ನು ಅಳವಡಿಸಲಾಗಿದ್ದು, ಮಕ್ಕಳ ಸಾಧನೆಗೆ ಪೂರಕವಾಗಿದೆ.

ಆರೋಗ್ಯದ ರಕ್ಷಣೆಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ದಿನ ಮಕ್ಕಳ ಆರೋಗ್ಯದ ಕುರಿತು ನಿಗಾ ವಹಿಸಲು ಸ್ಟಾಪ್‍ನರ್ಸ ಇದ್ದಾರೆ. ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಶಾಲೆಯ ವತಿಯಿಂದ ಸ್ಥಳೀಯವಾಗಿ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ.

ಸೈನಿಕ ನಿಧಿ ಸ್ಥಾಪನೆ;
ಹತ್ತು-ಹಲವು ವಿವಿಧ,ವಿಶೇಷ ಚಟುವಟಿಕೆಗಳ ಮೂಲಕ ಈ ಶಾಲೆಯು ರಾಜ್ಯದ ಗಮನ ಸೆಳೆಯುತ್ತಿದೆ. ಈ ಶಾಲೆಯ ಮಕ್ಕಳು ಸ್ವಯಂ ಪ್ರೇರಿತರಾಗಿ ಸೈನಿಕ ನಿಧಿ ಸ್ಥಾಪಿಸಿಕೊಂಡು, ಈ ಮೂಲಕ ಹುತಾತ್ಮ ಯೋಧರ ಕುಟುಂಬಗಳಿಗೆ ಅನೇಕ ವರ್ಷಗಳಿಂದ ತನ್ನ ಇತಿ-ಮಿತಿಯಲ್ಲಿ ಸಹಾಯ ನೀಡುತ್ತಿದ್ದಾರೆ.

ಈಗಾಗಲೇ ರಾಜ್ಯದ ಹತ್ತಕ್ಕೂ ಹೆಚ್ಚು ಹುತಾತ್ಮ ಯೋಧರ ಕುಟುಂಬಗಳಿಗೆ ಅವರ ಸ್ವಗ್ರಾಮಗಳಿಗೆ ಮಕ್ಕಳು ಹಾಗೂ ಆಡಳಿತ ಮಂಡಳಿಯವರು ತೆರಳಿ, ಭೇಟಿ ಮಾಡಿ ಈ ಶಾಲೆಯ ಪ್ರಮುಖರು ಸಾಂತ್ವನ ಹೇಳಿ ನಿಧಿಯನ್ನು ಹಸ್ತಾಂತರಿಸಿದ್ದಾರೆ. ಪ್ರತಿ ವರ್ಷ ಆಡಳಿತ ಮಂಡಳಿಯ ವತಿಯಿಂದ ಆರ್ಮಿ ಫಂಡ್‍ಗೆ 25 ಸಾವಿರ ಜಮಾ ಮಾಡಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ದೇಶಭಕ್ತಿ ಜಾಗ್ರತವಾಗಲು ಸಹಕಾರಿಯಾಗಿದೆ.

ಶುಚಿ-ರುಚಿ ಊಟೋಪಹಾರ ;
ಸ್ನೇಹ ಸಾಗರ ವಸತಿ ಶಾಲೆಯಲ್ಲಿ ವಿಧ್ಯಾರ್ಥಿಗಳಿಗೆ ಶುಚಿ-ರುಚಿಯಾದ ಸತ್ವಯುತ ಹಾಗೂ ಪುಷ್ಟಿಕರವಾದ ಊಟೋಪಹಾರದ ವ್ಯವಸ್ಥೆ ಇದೆ. ಇಲ್ಲಿರುವ ಶಿಕ್ಷಕರು ಹಾಗೂ ಸಿಬ್ಬಂದಿಗಳು ಸಹ ವಿಧ್ಯಾರ್ಥಿಗಳೊಂದಿಗೆ ಒಟ್ಟಿಗೆ ಕುಳಿತು ಊಟ ಮಾಡುವ ಪದ್ಧತಿ ಇದೆ. ಶಾಲಾ ಆವಾರದಲ್ಲಿ ಜಂಕ್ ಫುಡ್ ಬಳಕೆ ಇಲ್ಲ. ಸಸ್ಯಾಹಾರ ಮಾತ್ರ ಇದೆ.

ದಕ್ಷ ಆಡಳಿತ ಮಂಡಳಿ;
ಸ್ನೇಹಸಾಗರ ಶಿಕ್ಷಣ ಸಂಸ್ಥೆಯಲ್ಲಿ ದಕ್ಷ ಆಡಳಿತ ಮಂಡಳಿಯ ಹಾಗೂ ಶೈಕ್ಷಣಿಕ ಸಲಹಾ ಮಂಡಳಿ ಇದೆ. ಆಡಳಿತ ಮಂಡಳಿಯಲ್ಲಿ ಹಾಗೂ ಸಲಹಾ ಸಮೀತಿಯಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರು ಇದ್ದಾರೆ. ಪ್ರಸ್ತುತ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಎಸ್.ಎಲ್.ಭಟ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸಾಧನೆಯನ್ನು ಪರಿಗಣಿಸಿ ಇವರಿಗೆ ಆರ್ಯಭಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರು ಕ್ಯಾಂಪಸ್‍ನಲ್ಲಿಯೇ ವಾಸ್ತವ್ಯ ಮಾಡಿ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ,ಸಿಬ್ಬಂದಿಗಳಿಗೆ ನಿತ್ಯ, ನಿರಂತರ ಮಾರ್ಗದರ್ಶನ ಮಾಡುತ್ತಿದ್ದಾರೆ.

ಗಣ್ಯರ ಭೇಟಿ;
ಪ್ರತಿ ವರ್ಷವೂ ಸ್ನೇಹಸಾಗರ ಶಾಲೆಗೆ ದೇಶದ,ರಾಜ್ಯದ ಅನೇಕ ಗಣ್ಯರು ಭೇಟಿ ನೀಡಿ ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಖ್ಯಾತ ವಿದ್ವಾಂಸರಾದ ಡಾ.ಕೆ.ಎಸ್.ನಾರಾಯಣಾಚಾರ್ಯ, ಶತಾವಧಾನಿ ಆರ್.ಗಣೇಶ, ದಿ.ಲಾಲ್ ಬಹದ್ದೂರ್ ಶಾಸ್ತ್ರಿಯವರ ಮಗ ಸುನೀಲ್ ಶಾಸ್ತ್ರಿ, ರಾಮಕೃಷ್ಣ ಆಶ್ರಮದ ಮುಕ್ತಿದಾನಂದ ಸ್ವಾಮೀಜಿ, ಖ್ಯಾತ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ, ಖ್ಯಾತ ರಂಗಕರ್ಮಿ ಯಶವಂತ್ ಸರದೇಶಪಾಂಡೆ, ಪರಿಸರ ತಜ್ಞ ಶಿವಾನಂದ ಕಳವೆ, ಮುಂತಾದವರು ಭೇಟಿ ನೀಡಿದ್ದಾರೆ.

ಸುಸಜ್ಜಿತ ವಸತಿ ವ್ಯವಸ್ಥೆ ಸೇರಿದಂತೆ ಸರ್ವ ಸೌಲಭ್ಯಗಳೊಂದಿಗೆ ನಮ್ಮ ಶಿಕ್ಷಣ ಸಂಸ್ಥೆಯು ಮಕ್ಕಳ ಶೈಕ್ಷಣಿಕ ಪ್ರಗತಿಗೆ, ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ. ಸದ್ಯ ಕೊರೊನಾ ಸಂದರ್ಭದಲ್ಲಿ ಶಾಲಾ ಕ್ಯಾಂಪಸ್‍ನಲ್ಲಿ ಕೋವಿಡ್ ನಿಯಮಾವಳಿಗಳನ್ನು ಸಂಪೂರ್ಣವಾಗಿ ಪಾಲಿಸಲಾಗುತ್ತಿದೆ. ಸಹಜ ಸ್ಥಿತಿಗೆ ಬಂದ ನಂತರ ಸರಕಾರದ ಮಾರ್ಗಸೂಚಿಯಂತೆ ಎಲ್ಲ ರೀತಿಯ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲಾಗುತ್ತದೆ. ಮಕ್ಕಳಿಗೆ ಮಾನಸಿಕ,ದೈಹಿಕ, ಸಾಂಸ್ಕೃತಿಕ, ಆರೋಗ್ಯಪೂರ್ಣ ಶಿಕ್ಷಣ ನೀಡಲಾಗುತ್ತಿದೆ. ==== ಎಸ್.ಎಲ್.ಭಟ್. ಆಡಳಿತ ಮಂಡಳಿಯ ಅಧ್ಯಕ್ಷರು. ಸ್ನೇಹಸಾಗರ ಶಿಕ್ಷಣ ಸಂಸ್ಥೆ.
ವಿಳಾಸ;
ಸ್ನೇಹಸಾಗರ ಇಂಗ್ಲೀಷ್ ಮೀಡಿಯಂ ರೆಸಿಡೆನ್ಸಿಯಲ್ ಸ್ಕೂಲ್.(ರಿ)
ವಿದ್ಯಾನಿಕೇತನ. ಇಡಗುಂದಿ.
ತಾ; ಯಲ್ಲಾಪುರ. ಉತ್ತರಕನ್ನಡ.
ಸಂಪರ್ಕ ;
ಕಛೇರಿಯ ಫೋನ್ ನಂ ; 9449067601, 9449067602, ಸತೀಶ್ ; 9481463484, 7019629293.
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/KlvHKrtcQbl1m1rcati7gv
ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur
FACEBOOK GROUP – https://www.facebook.com/groups/593852164946589













