4-9-2021. ಶನಿವಾರ.
e-yellapur.com News

ಸುಜ್ಞಾನ ನೆಟ್ ವರ್ಕ್ ಯಲ್ಲಾಪುರ ಅವರ

e-yellapur.com ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೊ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣಾ ಸಮಾರಂಭವು ಶನಿವಾರ ಯಲ್ಲಾಪುರ ಪಟ್ಟಣದ ಏಪಿಎಂಸಿ ಆವಾರದ ಅಡಕೆ ಭವನದಲ್ಲಿ ಸರಳವಾಗಿ ನಡೆಯಿತು.

ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರ ಧರ್ಮಪತ್ನಿ ವನಜಾಕ್ಷಿ ಹೆಬ್ಬಾರ್ ಉಧ್ಘಾಟಿಸಿದರು. ಜಿಲ್ಲೆಯ ವಿವಿದೆಡೆಯಿಂದ ಆಗಮಿಸಿದ ಸ್ಫರ್ಧಾ ವಿಜೇತರಿಗೆ ಬಹುಮಾನವನ್ನು ವಿತರಿಸಿ ಮಾತನಾಡಿದ ಅವರು, ನಮ್ಮ ಸನಾತನ ಪರಂಪರೆ, ಭಾರತೀಯ ಸಂಸ್ಕ್ರತಿ, ಸಂಪ್ರದಾಯವನ್ನು ಪ್ರತಿನಿಧಿಸುವ ಇಂತಹ ಕಾರ್ಯಕ್ರಮವನ್ನು ಏರ್ಪಡಿಸಿರುವುದು ಅತ್ಯಂತ ಶ್ಲಾಘನೀವಾಗಿದೆ.

ಮಕ್ಕಳು ದೇವರ ಪ್ರತಿರೂಪ. ಮಕ್ಕಳ ಮೂಲಕ ದೇವರನ್ನು ಕಾಣುತ್ತೇವೆ. ಇಂತಹ ಸ್ಫರ್ಧಾ ಕಾರ್ಯಕ್ರಮವನ್ನು ಏರ್ಪಡಿಸುವುದರಿಂದ ಮಕ್ಕಳಲ್ಲಿ ನಮ್ಮ ಸಂಸ್ಕ್ರತಿ, ಧಾರ್ಮಿಕ ಪ್ರಜ್ಞೆ ಜಾಗ್ರತವಾಗಲು ಸಹಕಾರಿಯಾಗುತ್ತದೆ . ಸುಜ್ಞಾನ್ ನೆಟ್ ವರ್ಕ್ ಅವರ ಕಾರ್ಯಗಳು ಮಹತ್ವದ್ದು . ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಭಾಗವಹಿಸಬೇಕಿತ್ತು. ಆದರೆ ಸಚಿವರು ಇಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ಅವರ ಪರವಾಗಿ ನಾನು ಬಂದಿದ್ದೇನೆ. ಈ ಕಾರ್ಯಕ್ರಮಕ್ಕೆ ಸಚಿವರು ಶುಭಕೋರಿದ್ದಾರೆ ಎಂದರು.


ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಾಯಕನಕೆರೆ ಶಾರದಾಂಬಾ ದೇವಾಲಯದ ಅಧ್ಯಕ್ಷ ಡಿ.ಶಂಕರ ಭಟ್ ಮಾತನಾಡಿ, ಕೃಷ್ಣನನ್ನು ನಾವು ಯಶೋದಾ ಕಂದ ಎಂದೇ ಕರೆಯುತ್ತೇವೆ. ಮುದ್ದುಕೃಷ್ಣನ ವೇಷದ ಫೋಟೋ ಸ್ಫರ್ಧೆ ಆಯೋಜನೆಯು ಕ್ರಿಯಾಶೀಲ ಕಾರ್ಯವಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಮಾತನಾಡಿ, ನಮ್ಮ ಜೀವನದಲ್ಲಿ ಬಾಲ್ಯತನವು ಎಂದೂ ಮರೆಯಲಾಗದ ಸಂತಸದ ಕ್ಷಣವಾಗಿದೆ. ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲಿ ONLINE ಮೂಲಕ ಫೋಟೋ ಸ್ಫರ್ಧೆ ಆಯೋಜಿಸಿದ ಸುಜ್ಞಾನ ನೆಟ್‍ವರ್ಕ್ ಅವರ ಕಾರ್ಯ ಶ್ಲಾಘನೀಯ ಎಂದರು.

ತಾಲೂಕಾ ಭಾರತ ಸೇವಾದಳದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಮಾತನಾಡಿ, ಆಧುನಿಕ ಕಾಲದ ನಿತ್ಯ ಅಗತ್ಯಗಳಲ್ಲಿ ಒಂದಾದ ಡಿಜಿಟಲ್ ಮಾಧ್ಯಮದ ಮೂಲಕ ಕ್ರಿಯಾಶೀಲ ಚಟುವಟಿಕೆ ನಡೆಸುತ್ತಿರುವ ಸುಜ್ಞಾನ್ ನೆಟ್ ವರ್ಕ್ ಅವರ ಕಾರ್ಯಗಳು ಮಾದರಿಯಾಗಿವೆ ಎಂದರು.

–ADVT–

ಯಲ್ಲಾಪುರ ಪಟ್ಟಣದ ಗೌತಮ ಜುವೆಲ್ಲರ್ಸ್ ಮಾಲಕ ಪ್ರಕಾಶ ಶೇಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಟ್ಟದ ಸ್ಫರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಮಕ್ಕಳಿಗೆ ಹಾಗೂ ಸಮಾಧಾನಕರ ಬಹುಮಾನ ಪಡೆದ 10 ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

–ADVT–


ಕಾರ್ಯಕ್ರಮದಲ್ಲಿ ಪ.ಪಂ.ಅಧ್ಯಕ್ಷೆ ಸುನಂದಾ ದಾಸ್, ಸ್ಫರ್ಧೆಯ ತೀರ್ಪುಗಾರರಾದ ನೇತ್ರತಜ್ಞೆ ಡಾ.ಸೌಮ್ಯಾ ಕೆ.ವಿ. ನಿವೃತ್ತ ಪ್ರಾಂಶುಪಾಲರಾದ ಬೀರಣ್ಣ ನಾಯಕ ಮೊಗಟಾ, ಜಯರಾಮ ಗುನಗಾ, ವಾಯ್.ಟಿ.ಎಸ್.ಎಸ್. ಕಾಲೇಜಿನ ಪ್ರಾಂಶುಪಾಲೆ ವಾಣಿಶ್ರೀ ಹೆಗಡೆ, ನಿವೃತ್ತ ತಹಸೀಲ್ದಾರ್ ಡಿ.ಜಿ.ಹೆಗಡೆ, ಮುಂತಾದವರು ಇದ್ದರು.

–ADVT–

ಸುಜ್ಞಾನ್ ನೆಟ್‍ವರ್ಕ್ ಮುಖ್ಯಸ್ಥ ಜ್ಯೋತಿರಾದಿತ್ಯ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿನ್ಮಯ ಭಾಗ್ವತ್ ದಾಂಡೇಲಿ, ಪ್ರತೀತ ಭಟ್, ಸಮರ್ಥ ಭಟ್ಟ ಹೊನ್ನಗದ್ದೆ ಸಹಕರಿಸಿದರು. ಬಿಂದು ವೈದ್ಯ ಪ್ರಾರ್ಥಿಸಿದರು. ಪತ್ರಕರ್ತ ಶ್ರೀಧರ ಅಣಲಗಾರ ನಿರ್ವಹಿಸಿದರು.

–ADVT–

–ADVT–

==========================

ಸುಜ್ಞಾನ್ ನೆಟ್ ವರ್ಕ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಫರ್ಧೆಯಲ್ಲಿನ ಆಯ್ದ ಫೊಟೋಗಳು.

ಸಿಂಚನಾ ಭಟ್. ಮಾರ್ಗಜಡ್ಡಿ. ಯಲ್ಲಾಪುರ.
ಆರವ್ ಸಂತೋಷ ನಾಯಕ ಅಂಕೋಲಾ.
ಆಯುಷ್ ಪ್ರಶಾಂತ ಹೆಗಡೆ ಸಿದ್ಧಾಪುರ.
ಧೃತಿ ಹೆಗಡೆ ಪಣತಗೇರಿ.
ಆಯುಷ್ ಭಟ್ ಕಲ್ಲೇಶ್ವರ.ಅಂಕೋಲಾ.
ಧ್ಯಾನ್ ನಾಗರಾಜ ಮೂಗ್ತಿ ಶಿರಸಿ.
ಶ್ರೀನಿಲ್ ಲಮಾಣಿ. ಯಲ್ಲಾಪುರ,
ತರುಣ ಯೋಗೀಶ್ ಹಿರೇಮಠ್ ಯಲ್ಲಾಪುರ.
ಸಾತ್ವಿಕ್ ಹೆಗಡೆ ನಂದಿಸರ.
ಶೋಭಿತ ಹೆಗಡೆ ಶಿರಸಿ.
ಧೃತಿ ವಿನಾಯಕ ಶೆಟ್ಟಿ ಶಿರಸಿ.
ನೇಸರ್ ಪುಲ್ಕರ್ ಹೊನ್ನಾವರ.
ಶ್ರೀರಕ್ಷಾ ಭಟ್ ಬಂಡಿಹಳ್ಳ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/KlvHKrtcQbl1m1rcati7gv

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

FACEBOOK GROUP – https://www.facebook.com/groups/593852164946589/

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading