8-10-2021. ಶುಕ್ರವಾರ
E-YELLAPUR.COM NEWS.
ಯಲ್ಲಾಪುರ ಪಟ್ಟಣದ ಅಧಿದೇವತೆಯಾದ ಗ್ರಾಮದೇವಿ ದೇವಾಲಯವು ಸದ್ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ದೇವಾಲಯಲ್ಲಿ ಶರನ್ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ, ಆರಾಧನೆಗಳು ನಡೆಯುತ್ತಿವೆ. ಪುರಾತನ ಕಾಲದಿಂದಲೂ ಭಜಕರನ್ನು ರಕ್ಷಿಸುತ್ತಿರುವ ಗ್ರಾಮ ದೇವಿಯರಾದ ಕಾಳಮ್ಮ-ದುರ್ಗಮ್ಮ ಶ್ರೀದೇವಿಯರ ದರ್ಶನವು ಮಂಗಳಕರವಾಗಿದೆ.
ಕಳೆದ ಹಲವು ವರ್ಷಗಳ ಹಿಂದೆ ಹೊಸ ದೇವಾಲಯವನ್ನು ನಿರ್ಮಿಸಲಾಗಿದೆ. ಪ್ರತೀ ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವಿ ಜಾತ್ರೆಯು ರಾಜ್ಯದಲ್ಲಿ ನಡೆಯುವ ದೊಡ್ಡ ಜಾತ್ರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಇದೆ. ನವರಾತ್ರಿಯ ಪ್ರಯುಕ್ತ ದೇವಾಲಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿಶೇಷ ಪೂಜೆಗಳು ನಡೆಯುತ್ತಿವೆ.
ಶ್ರೀಗ್ರಾಮ ದೇವಿ ದರ್ಶನ ವಿಡಿಯೋ ನೋಡಿ
ಗ್ರಾಮದೇವಿಯ ಧಾರ್ಮಿಕ ಹಿನ್ನೆಲೆ;
ಗ್ರಾಮದೇವಿ ಜಾತ್ರೆಗೆ ಶತಮಾನಗಳ ಇತಿಹಾಸವಿದೆ. ತಾಲೂಕಿನ ನಾರಾಯಣಗೆರೆಯಲ್ಲಿ ಸುಮಾರು 650 ವರ್ಷಗಳ ಹಿಂದೆ ರೈತನೊಬ್ಬನಿಗೆ ಉಳುಮೆ ಮಾಡುತ್ತಿರುವಾಗ ದೇವಿಯರ ಎರಡು ವಿಗೃಹಗಳು ಸಿಕ್ಕವು. ನಂತರ ಅವುಗಳನ್ನೇ ಹೋಲುವ ಹೊಸಪ್ರತಿಮೆಯನ್ನು ಶಿವಣಿ ಕಟ್ಟಿಗೆಯಿಂದ ಮಾಡಿ ಪಟ್ಟಣದ ಕೇಂದ್ರ ಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.
ಈ ದೇವಿಯರನ್ನು ಕಾಳಮ್ಮ ಹಾಗೂ ದುರ್ಗಮ್ಮ ಎಂದು ಕರೆಯಲಾಗುತ್ತದೆ. ನೀಲ ವರ್ಣದ ದೇವತೆಯನ್ನು ಕಾಳಮ್ಮ ಎಂದು ಹಾಗೂ ಕಡು ಕೆಂಪು ಬಣ್ಣದ ದೇವತೆಯನ್ನು ದುರ್ಗಮ್ಮ ಎಂಬ ಹೆಸರಿನಿಂದ ಪೂಜಿಸಲಾಗುತ್ತಿದೆ. ಇವರು ಅಕ್ಕ ತಂಗಿಯರೆಂಬ ಪ್ರತೀತಿ ಇದೆ.
ನವರಾತ್ರಿ ಎರಡನೇ ದಿನ ವಿಶೇಷ.
ನವರಾತ್ರಿಯ ಎರಡನೆಯದಿನ ಶ್ರೀದೇವಿಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ. ನವದುರ್ಗೆಯರಲ್ಲಿ ಬ್ರಹ್ಮಚಾರಿಣಿಯದ್ದು ಎರಡನೇ ರೂಪವಾಗಿದೆ. ಶಿವನನ್ನು ಪಡೆಯಲು ಕಠಿಣ ತಪಸ್ಸು ಮಾಡಿ ಬ್ರಹ್ಮಚಾರಿಣಿಯಾದಳು.ಇವಳ ರೂಪ ಪೂರ್ಣ ಜ್ಯೋತಿರ್ಮಯ ಮತ್ತು ಭವ್ಯವಾಗಿದೆ. ಬಿಳಿಸೀರೆ ಧರಿಸಿ, ಕೈಯಲ್ಲಿ ಜಪಮಾಲೆ, ಕಮಂಡಲ, ಮತ್ತೊಂದು ಕೈಯಲ್ಲಿ ಜಪಮಾಲೆಯನ್ನು ಧರಿಸಿ, ಬ್ರಹ್ಮಚಾರಿಣಿ ರೂಪದಲ್ಲಿ ಇರುತ್ತಾಳೆ. ಇವಳ ಉಪಾಸನೆಯಿಂದ ತ್ಯಾಗ, ವೈರಾಗ್ಯ, ಸಂಯಮ ವೃದ್ಧಿಯಾಗುತ್ತದೆ. ಈ ದೇವಿಯನ್ನು ಪೂಜೆ ಮಾಡಿದರೆ ಸ್ವಚರಿತ್ರೆಯ ಪ್ರೇರಣೆ ಮತ್ತು ಬ್ರಹ್ಮಜ್ಞಾನ ಸಿಗುತ್ತದೆ.
ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur
FACEBOOK GROUP – https://www.facebook.com/groups/593852164946589/
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/FIBfndirvSLCTUzJq4BMP1
- ಮೊದಲನೇ ಪ್ರಜಾಸೇವೆ ಆಂದೋಲನ ಸಭೆಯ 1163 ಅರ್ಜಿಗಳ ವಿಲೇವಾರಿ : ಜಿಲ್ಲಾಧಿಕಾರಿ
by TEAM E – YELLAPUR
- ಗಂಧದ ಮರ ಕಡಿದವರು ಯಾರು? ತೀವ್ರಗೊಂಡ ತನಿಖೆ
by TEAM E – YELLAPUR
- ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: 10 ಜನರ ವಿರುದ್ಧ ಪ್ರಕರಣ ದಾಖಲು
by TEAM E – YELLAPUR
- ಬೈಕಿಗೆ ಕ್ರೂಸರ್ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೇ ಬೈಕ್ ಸವಾರ ಸಾವು
by TEAM E – YELLAPUR
- ಶಾಂತಿ, ಸೌಹಾರ್ದಯುತ ಗಣೇಶೋತ್ಸವ ಆಚರಣೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್
by TEAM E – YELLAPUR
- ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ!
by TEAM E – YELLAPUR
- ಪಡಿತರ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು
by TEAM E – YELLAPUR
- ಸ್ವದೇಶಿ ವಸ್ತುಗಳ ಮಾರಾಟ ಮೇಳ, ಆಹಾರ ಮೇಳಕ್ಕೆ ಉದ್ಯಮಿ ಬಾಲು ನಾಯಕ ಚಾಲನೆ
by TEAM E – YELLAPUR
- ಹಾಲು ಸಂಗ್ರಹಣೆ ಮತ್ತು ಮಾರಾಟದಲ್ಲಿ ಆನಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಉತ್ತಮ ಸಾಧನೆ
by TEAM E – YELLAPUR
- ಡಿ.ಜೆ. ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ
by TEAM E – YELLAPUR
- ಶಿಕ್ಷಕಿ ಉಷಾಬಾಯಿ ನಾಯಕರಿಗೆ ಕಾಯಕರತ್ನ ಪ್ರಶಸ್ತಿ ಪ್ರದಾನ
by TEAM E – YELLAPUR
- ಯಲ್ಲಾಪುರದಲ್ಲಿ ಸೆ.11ರಿಂದ ಮೂರು ದಿನ ಸ್ವದೇಶಿ ವಸ್ತುಗಳ ಮಾರಾಟ ಮೇಳ ಮತ್ತು ಆಹಾರ ಮೇಳ
by TEAM E – YELLAPUR
- ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಪಾಲ್ಗೊಂಡ ಉದ್ಯಮಿ ಬಾಲು ನಾಯಕ
by TEAM E – YELLAPUR
- ಲಯನ್ಸ್ ಕ್ಲಬ್ ವತಿಯಿಂದ ಅದ್ದೂರಿಯಾಗಿ ನಡೆದ ಬಾಲಗೋಪಾಲ ಮತ್ತು ರಾಧಾ-ಕೃಷ್ಣ ವೇಷ ಸ್ಪರ್ಧೆ
by TEAM E – YELLAPUR
- ಅರಣ್ಯ ಇಲಾಖೆಯ ಕಾರ್ಯಾಚರಣೆ: ವನ್ಯಜೀವಿ ಉತ್ಪನ್ನಗಳ ಅಕ್ರಮ ಸಾಗಾಟ ಜಾಲ ಪತ್ತೆ, ಇಬ್ಬರ ಬಂಧನ
by TEAM E – YELLAPUR
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related