ಯಲ್ಲಾಪುರ ತಾಲೂಕಿನ ಮಾಗೋಡಿನಲ್ಲಿ ಸಮಗ್ರ ಕೃಷಿ ಪದ್ಧತಿ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಂಕರ ಹೆಗಡೆ ಕುಮಟಾ ಉಪನ್ಯಾಸ ನೀಡಿ ಮಾತನಾಡಿ, ಜಗತ್ತಿನಲ್ಲಿ ಜೀವಿಗಳಿಗೆ ಮಣ್ಣು ಆಧಾರವಾಗಿದೆ. ಮಣ್ಣಿನ ಫಲವತ್ತತೆಯನ್ನು ಕಾಪಾಡಿ, ಮಣ್ಣಿನ ಸತ್ವ ಹೆಚ್ಚಿಸುವ ಮೂಲಕ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಮಚಂದ್ರ ವೆಂಕಟರಮಣ ಭಟ್ ಕುಂಭತ್ತಿ ಮಾತನಾಡಿ, ಈಗ ಕೃಷಿ ಭೂಮಿಗೆ ಅಗತ್ಯವಾದ ಔಷಧೋಪಚಾರವನ್ನು ಮಾಡುವುದು ಅತ್ಯಂತ ಅಗತ್ಯ. ಮೊದಲೆಲ್ಲ ಕೇವಲ ಗೊಬ್ಬರ ಸೊಪ್ಪುಗಳಿಂದ ಕೃಷಿಕ ಬೆಳೆ ಬೆಳೆಯುತ್ತಿದ್ದ. ಈಗ ಕಾಲ ಬದಲಾದಂತೆ ಅಭಿವೃದ್ಧಿ ಹೊಂದಿದ ಭಾರತದಲ್ಲಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವಂತಹ ಔಷಧಗಳನ್ನೆಲ್ಲ ವಿಜ್ಞಾನಿಗಳು ಕಂಡುಹಿಡಿದದ್ದರಿಂದ ನಾವೆಲ್ಲ ಅವುಗಳನ್ನು ಬಳಸಿ ನಮ್ಮ ನಮ್ಮ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಂಡು ಉತ್ತಮ ಇಳುವರಿಯನ್ನು ಹೊಂದುವಂತೆ ನಾವೆಲ್ಲ ಪ್ರಯತ್ನಿಸೋಣ ಎಂದರು.

ಎಂ.ಜಿ.ಭಟ್ಟ, ರಾಮಚಂದ್ರ ಭಟ್ಟ, ವೆಂಕಟರಮಣ ಭಟ್ಟ ಮೊಟ್ಟೆಗದ್ದೆ, ತಿಮ್ಮಣ್ಣ ಭಾಗ್ವತ್ ನಂದೊಳ್ಳಿ ಮುಂತಾದವರು ಇದ್ದರು. ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಕೃಷಿಕರು ಪಾಲ್ಗೊಂಡಿದ್ದರು. ಮೇಘಾ ಮಂಜುನಾಥ್ ಭಟ್ ಕುಂಭತ್ತಿ ಪ್ರಾರ್ಥಿಸಿದರು. ತಿಮ್ಮಣ್ಣ ಭಾಗ್ವತ್ ನಿರ್ವಹಿಸಿದರು.

======================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading