ಬೆಟ್ಟ ಬಳಕೆದಾರರ ಹಕ್ಕು ರಕ್ಷಣೆ ಮತ್ತು ಪ್ರಸ್ತುತ ಬೆಟ್ಟ ಬಳಕೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶನಿವಾರ ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಜಾಗೃತಿ ಕಾರ್ಯಾಗಾರ ನಡೆಯಿತು.
ಈ ಕಾರ್ಯಾಗಾರವನ್ನು ಉದ್ಘಾಟಿಸಿದ ಶಿರಸಿಯ ಟಿ.ಆರ್.ಸಿ ಸೊಸೈಟಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಮಾತನಾಡಿ, ರೈತರೇ ಬೆಟ್ಟಭೂಮಿಯ ವಾರಸುದಾರರು ಮತ್ತು ಪಾರಂಪರಿಕ ಸಂರಕ್ಷಕರು, ಈ ವಿಷಯದಲ್ಲಿ ಅನ್ಯರ ಹಸ್ತಕ್ಷೇಪ ಸರಿಯಲ್ಲ. ಆದರೆ ಇತ್ತೀಚೆಗೆ ಬೆಟ್ಟಭೂಮಿ ಬಳಕೆಗೆ ಹಾಗೂ ತೋಟಕ್ಕೆ ಸೊಪ್ಪು ಹಾಕಲು, ಮಣ್ಣು ಹಾಕಲು ತೊಂದರೆ ಆಗುತ್ತಿದೆ. ಅರಣ್ಯ ಇಲಾಖೆಯ ಬಳಿ ಯಾರೂ ಸಹ ಭೀಕ್ಷೆ ಬೇಡುವ ಪರಿಸ್ಥಿತಿ ಬೇಡ. ಬೆಟ್ಟ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತರಬೇಕು, ಪೂರ್ವಜರ ಕಾಲದಿಂದಲೂ ಬಂದ ಬೆಟ್ಟವನ್ನು ಉಳಿಸಿಕೊಳ್ಳೋಣ, ಬೆಟ್ಟ ರಕ್ಷಣೆಗಾಗಿ ಪಕ್ಷಬೇಧ ಮರೆತು ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡೋಣ ಎಂದರು.
ಬೆಟ್ಟ ಜಾಗೃತಿ ಅಭಿಯಾನದ ಶಿರಸಿ ಸಂಚಾಲಕ ಎಸ್.ಕೆ.ಭಾಗ್ವತ ಮಾತನಾಡಿ ಬೆಟ್ಟವು ರೈತರಿಗೆ ನೀಡಿದ ಸವಲತ್ತು ಮಾತ್ರವಲ್ಲ ಅದು ರೈತರ ಹಕ್ಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ನಿಶ್ಚಿತ ಗುರಿ, ಯೋಜಿತ ಹೋರಾಟ ಇದ್ದರೆ ಯಶಸ್ಸು ಸಾಧ್ಯ. ಜಿಲ್ಲೆ ಮತ್ತು ತಾಲೂಕು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಬೆಟ್ಟ ಹಕ್ಕು ರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಲಿ ಎಂದರು.
ರವಿ ಹೆಗಡೆ ಹೂವಿನಮನೆ, ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ, ರಾಘವೇಂದ್ರ ಭಟ್ಟ ಹಾಸಣಗಿ, ಆರ್.ಕೆ.ಭಟ್ಟ ಮುಂತಾದವರು ಮಾತನಾಡಿದರು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು, ವಿವಿಧ ಸಂಘಟನೆಗಳ ಪ್ರಮುಖರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಕೆ.ಟಿ.ಹೆಗಡೆ ಸ್ವಾಗತಿಸಿದರು. ದೀಪಕ ಭಟ್ಟ ಶೀಗೆಕೇರಿ ನಿರ್ವಹಿಸಿದರು.
ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ! ಈ ಕೆರೆಯಲ್ಲಿ ಕಾಣಿಸಿಕೊಳ್ಳುವ ಮೊಸಳೆಯನ್ನು ಹಿಡಿದು ಬೇರೆಡೆಗೆ ಸಾಗಿಸಲು ಎರಡು ದಿನಗಳಿಂದ ನಡೆಸಿದ ಪ್ರಯತ್ನ… Read more: ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ!