ವಿಶ್ವ ಹಿಂದೂ ಪರಿಷತ್ ಮಾತೃಮಂಡಳಿ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಯಲ್ಲಾಪುರ ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ಅ 26 ರಂದು ಮಧ್ಯಾಹ್ನ 3 ಗಂಟೆಗೆ ಸಾಮೂಹಿಕ ಅರಿಷಿಣ ಕುಂಕುಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಗ್ರಾಮದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಮಾತೃಮಂಡಳಿಯಿಂದ 19ನೇ ವರ್ಷದ ಶ್ರಾವಣ ಮಾಸದ ಅರಿಷಿಣ ಕುಂಕುಮ ಕಾರ್ಯಕ್ರಮ ಇದಾಗಿದ್ದು, ಉಪನ್ಯಾಸ, ವಿಶೇಷ ಸೇವೆಯಲ್ಲಿ ಗುರುತಿಸಿಕೊಂಡ ಮಹಿಳೆಗೆ ಸನ್ಮಾನ ಹಾಗೂ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮ ನಡೆಯಲಿದೆ.

ಈ ಸಂದರ್ಭದಲ್ಲಿ ವಿಹಿಪ ಮಾತೃಮಂಡಳಿಯ ಸುಮಂಗಲಾ ಮರಾಠಿ, ಶ್ಯಾಮಿಲಿ ಪಾಠಣಕರ, ವೀಣಾ ಯಲ್ಲಾಪುರಕರ, ಮಂಗಳಾ ನಾಯ್ಕ, ಪುಷ್ಪ ಜೋಗಾರ ಶೆಟ್ಟರ್, ರಾಮು ನಾಯ್ಕ, ನಮಿತಾ ಬಿಡಿಕರ್, ಮಾಲಾ ಬಾಳೆಹೊಸೂರ, ಆರತಿ ನಾಯ್ಕ, ಸುನೀತಾ ವೇರ್ಣೇಕರ್, ರಾಧಾ ಗುಡಿಗಾರ್, ಗೌರಿ ನಂದೋಳ್ಳಿಮಠ, ಸಾಕ್ಷಿ ಮುರುಕುಂಬಿ, ಶಶಿಕಲಾ ಅಂಬಿಗ, ಕುಮುದಾ ಸಾಣೆ, ಭಾರತಿ ಗುಡಿಗಾರ, ಲಕ್ಷ್ಮಿ ಗುಡಿಗಾರ, ಗೌರಿ ಬೀಡಿಕರ್, ಪ್ರಭಾವತಿ ಗೋವಿ, ರಜನಿ ಚಂದ್ರ ಶೇಖರ ಮುಂತಾದವರು ಇದ್ದರು.

=======================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading