ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರ ಮತ್ತು ಉತ್ತರ ಕನ್ನಡ ಜಿಲ್ಲಾ ರೈತ ಮೋರ್ಚ ವತಿಯಿಂದ ಹಾಗೂ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಕಾರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.

ರೈತ ಮೋರ್ಚ ಜಿಲ್ಲಾಧ್ಯಕ್ಷಅನಂತಮೂರ್ತಿ ಹೆಗಡೆ ಮಾತನಾಡಿ ದಿನಾಂಕ 26 ಮೇ 2024 ರಂದು ಚಂದ್ರಶೇಖರನ್ ಎನ್ನುವ ಅಧಿಕಾರಿ ಆತ್ಮಹತ್ಯೆ ಆತ್ಮಹತ್ಯೆ ಮಾಡಿಕೊಳ್ಳುವ ಪೂರ್ವದಲ್ಲಿ ಆರು ಪುಟಗಳ ಡೆತ್ ನೋಟ್ ಬರದಿಟ್ಟಿರುತ್ತಾರೆ, ಅದರಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ ನಾಗೇಂದ್ರರವರು ಮೌಖಿಕವಾಗಿ ಹಲವಾರು ಅಕೌಂಟ್ಗಳಿಗೆ ಹಣವನ್ನು ಹಾಕಲು ಆದೇಶ ಮಾಡಿರುತ್ತಾರೆ ಎನ್ನುವ ಮತ್ತು ಯಾವ ಅಕೌಂಟ್ ಹಣ ಹೋಗಿದೆ ಎಂಬುದನ್ನು ಬರೆದು ಇಟ್ಟಿದ್ದಾರೆ, ಬಡ ವಾಲ್ಮೀಕಿ ಜನಾಂಗದ ಅಭಿವೃದ್ಧಿಗೆ ಇಟ್ಟ 170 ಕೋಟಿ ಹಣವನ್ನು ತನ್ನ ಫೇಕ್ ಅಕೌಂಟ್ಗೆ ವರ್ಗಾವಣೆ ಮಾಡಿಕೊಂಡ ಭ್ರಷ್ಟ ನಾಗೇಂದ್ರ ರನ್ನು ತಕ್ಷಣ ವಜಾ ಮಾಡಬೇಕು ಅಥವಾ ನಾಗೇಂದ್ರ ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹಿಸಿದರು, ಈ ಸಂದರ್ಭದಲ್ಲಿ ಚಂದ್ರು ಎಸಳೆ, ಕೆ.ಜಿ. ನಾಯಕ್, ಆನಂದ ಸಾಲೆರ್, ಉಷಾ ಹೆಗಡೆ, ತಿಮ್ಮಪ್ಪ ಎಂ ಕೆ ಮುಂತಾದವರು ಇದ್ದರು.

======================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading