ಗ್ರಾಮೀಣ ಭಾಗದ ಸ್ವ-ಸಹಾಯ ಸಂಘದ ಮಹಿಳೆಯರ ಆರ್ಥಿಕ ಬಲವರ್ಧನೆಗೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ಸಾಕÀಷ್ಟು ಅವಕಾಶಗಳಿದ್ದು, ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಯೋಜನೆ ಸಹಕಾರಿಯಾಗಲಿದೆ ಎಂದು ಯಲ್ಲಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ದನವಾಡಕರ ಹೇಳಿದರು.
ಅವರು ಗುರುವಾರ ಯಲ್ಲಾಪುರ ತಾಲೂಕಿನ ಆನಗೋಡ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸ್ವಸಹಾಯ ಸಂಘದ ಗುಂಪುಗಳನ್ನು ಒಟ್ಟುಗೂಡಿಸಿ ಆಯೋಜಿಸಿದ್ದ ಜಾಬ್ ಕಾರ್ಡ್ ಮೇಳದಲ್ಲಿ ಭಾಗವಹಿಸಿ ಮಾತನಾಡಿದರು. ವಿಬಿ-ಜಿ ರಾಮ್-ಜಿ ಯೋಜನೆ ಮತ್ತು ಡೇ- ಎನ್.ಆರ್.ಎಲ್.ಎಮ್. ಯೋಜನೆಯ ಒಗ್ಗೂಡಿಸುವಿಕೆಯಡಿ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರ, ಎಸ್‍ಹೆಚ್‍ಇ ಮಾರ್ಟ್, ಸಮುದಾಯ ಆಧಾರಿತ ಕೋಳಿ ಶೆಡ್ ನಿರ್ಮಾಣ, ಜಿಪಿಎಲ್‍ಎಫ್ ಅಥವಾ ಸಿಎಲ್‍ಎಫ್ ಕಟ್ಟಡ ನಿರ್ಮಾಣ, ಕೋಲ್ಡ್ ಪ್ರೆಸ್ ಆಯಿಲ್ ಪೆÇ್ರಸೆಸಿಂಗ್ ಘಟಕ, ಗ್ರಾಮೀಣ ಗೋದಾಮು, ಜೀವನೋಪಾಯ ಸೇವಾ ಕೇಂದ್ರ, ಕಸ್ಟ್‍ಂ ಹೈರಿಂಗ್ ಸರ್ವೀಸ್ ಸೆಂಟರ್, ಬಿಆರ್‍ಸಿ ಕಟ್ಟಡ, ಸೀಡ್ ಬ್ಯಾಂಕ್ ಕಟ್ಟಡ ಸೇರಿದಂತೆ ಸ್ವ ಸಹಾಯ ಸಂಘಗಳ ಶ್ರೇಯೋಭಿವೃದ್ಧಿಗಾಗಿ ಅಗತ್ಯವಿರುವ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ. ಸಂಘದ ಮಹಿಳೆಯರು ತಮಗೆ ಅವಶ್ಯವಿರುವ ಸೌಲಭ್ಯವನ್ನು ಪಡೆದು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಇದೇ ವೇಳೆ ಭಾರತ ಜೋಡೊ ಯುವ ಸಂಘ ಸ್ಥಾಪನೆಗೆ ಸದಸ್ಯರು ನೊಂದಣಿ ಪ್ರಕ್ರಿಯೆ ಜಾರಿಯಲ್ಲಿದ್ದು ಆಸಕ್ತರು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅಥವಾ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಅನಗೋಡ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ ಪಿ. ಶೇಟ್, ಟಿಎಮ್‍ಆಯ್‍ಎಸ್ ರಘು, ಐಇಸಿ ಸಂಯೋಜಕ ಕಿರಣ ಜೋತೆಪ್ಪನವರ, ಎಂಬಿಕೆ ಮರಿಯಂಬಿ ಸೈಯದ್, ಒಕ್ಕೂಟದ ಅಧ್ಯಕ್ಷೆ ಸೀಮಾ ಭಾಸ್ಕರ ಮರಾಠೆ ಸೇರಿದಂತೆ ಒಕ್ಕೂಟದ ಸರ್ವ ಸದಸ್ಯರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.
ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ! ಈ ಕೆರೆಯಲ್ಲಿ ಕಾಣಿಸಿಕೊಳ್ಳುವ ಮೊಸಳೆಯನ್ನು ಹಿಡಿದು ಬೇರೆಡೆಗೆ ಸಾಗಿಸಲು ಎರಡು ದಿನಗಳಿಂದ ನಡೆಸಿದ ಪ್ರಯತ್ನ… Read more: ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ!