ಮೇ.23 2001 ರಂದು ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೇ ನ್ಯಾಯಾಲಯದಿಂದ ಜಾಮಿನು ಪಡೆದುಕೊಂಡು, ನಂತರ ನ್ಯಾಯಾಲಯದ ಮುದ್ದತ್ತಿಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.
ಮೆ.23 2001ರಂದು ಆರೋಪಿ ಲಾರಿ ಚಾಲಕ, ಗುಜರಾತ ರಾಜ್ಯದ ಫೋರಬಂದರ್ ಜಿಲ್ಲೆಯ ಕುಟಿಯಾ ಮುಂಡವಾಡ ಮುಲಾದಿನಗಲ್ಲಿ ನಿವಾಸಿ, ಕೇಸುಬಾಯಿ ತಂದೆ ಮಿನಂದಾಬಾಯಿ ಸಿಸೋಡಿಯಾ ಎಂಬಾತ ಕಾರವಾರ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೋಗಿನಕೊಪ್ಪ ಕ್ರಾಸ್ ಸಮೀಪ ತನ್ನ ಲಾರಿಯನ್ನು ಜೋರಾಗಿ ಚಲಾಯಿಸಿಕೊಂಡುಬಂದು, ಕೆ.ಎಸ್.ಅರ್.ಟಿ.ಸಿ. ಬಸ್ಸನ್ನು ಹಿಂದಕ್ಕೆ ಹಾಕಲುಬಂದಾಗ ಬಸ್ ಚಾಲಕನೊಂದಿಗೆ ಜಗಳ ಮಾಡಿದ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ಆರೋಪಿಯು ನ್ಯಾಯಾಲಯದಲ್ಲಿ ಜಾಮೀನುಪಡೆದುಕೊಂಡು ಹೋದವನು ನಂತರ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಆರೋಪಿಯ ವಿರುದ್ಧ ವಾರೆಂಟ್ ಜಾರಿಯಾಗಿತ್ತು. ನ್ಯಾಯಾಲಯದಿಂದ ಉದ್ಘೋಷಣೆ ಹೊರಡಿಸಲಾಗಿತ್ತು.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗರ್ಶನದಲ್ಲಿ ಯಲ್ಲಾಪುರ ಠಾಣೆಯ ಪಿಎಸ್ಸೈಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ಮಹಾವೀರ ಕಾಂಬ್ಳೆ ಹಾಗೂ ಸಿಬ್ಬಂದಿಗಳ ತಂಡವು ಖಚಿತ ಮಾಹಿತಿಯ ಮೇರೆಗೆ ಆರೋಪಿ ಕೇಸುಬಾಯಿ ಗುಜರಾತ ರಾಜ್ಯದ ರಣವಾವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವುದನ್ನು ಪತ್ತೆಹಚ್ಚಿದ್ದರು. ಪೊಲೀಸ್ ಸಿಬ್ಬಂದಿಗಳಾದ ರಾಘವೇಂದ್ರ ಮೂಳೆ ಹಾಗೂ ಮಾರುತಿ ಅವರು ಗುಜರಾತ್ ನಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಯಲ್ಲಾಪುರ ಠಾಣೆಯ ಸಿಬ್ಬಂದಿಗಳಾದ ಸಂತೋಷ ಬಾಳೇರ, ಬಸವರಾಜ ಡಿ.ಕೆ, ಪರಮೇಶ್ವರ ಎಸ್.ಕೆ, ರೇಖಾ ಎಂ.ಎಸ್, ಅಂಕೋಲಾ ಠಾಣೆಯ ಸಿಬ್ಬಂದಿ ಮಹಮದ್ ಶಫಿ, ಶೇಖ್ ಹಾಗೂ ಕಾರಾವಾರ ಟೆಕ್ನಿಕಲ್ ಸೆಲ್ ನ ಉದಯ ಗುನಗಾ, ಬಬನ್ ಕದಂ, ಮಹಾಲಿಂಗ ಸಾವಳಗಿ ಪಾಲ್ಗೊಂಡಿದ್ದರು.