ನೇಪಾಳ-ಟಿಬೆಟ್ ಗಡಿಭಾಗಕ್ಕೆ ತೆರಳಿರುವ ಜಿಲ್ಲೆಯ ಸಾರ್ವಜನಿಕರ ಮಾಹಿತಿ ನೀಡಿ: ಜಿಲ್ಲಾಧಿಕಾರಿ
ನೇಪಾಳ-ಟಿಬೆಟ್ ಗಡಿಭಾಗದಲ್ಲಿ ಆ.26 ರಂದು ಸಂಭವಿಸಿದ ದಿಡೀರ್ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಿಲ್ಲೆಯ ಸಾರ್ವಜನಿಕರ ಹಿತದೃಷ್ಠಿಯಿಂದ, ಉತ್ತರ ಕನ್ನಡ ಜಿಲ್ಲೆಯಿಂದ ನೇಪಾಳಕ್ಕೆ ಪ್ರವಾಸ ಅಥವಾ ಇತರೆ ಕಾರಣಗಳಿಗಾಗಿ ತೆರಳಿರುವ ಯಾವುದೇ ಪ್ರವಾಸಿಗರು ಅಥವಾ ನಾಗರಿಕರು ನಾಪತ್ತೆಯಾಗಿರುವುದು, ಸಿಲುಕಿಕೊಂಡಿರುವುದು ಅಥವಾ ಪ್ರಸ್ತುತ ಸಂಪರ್ಕಕ್ಕೆ ಸಿಗದಿರುವುದು ಕಂಡು ಬಂದಲ್ಲಿ, ಅವರ ಕುಟುಂಬಸ್ಥರು, ಸ್ನೇಹಿತರು ಅಥವಾ ಅಪರಿಚಿತರು ಕೊಡಲೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ
ಸಂಬಂಧ ಪಟ್ಟ ವ್ಯಕ್ತಿಯ ಹೆಸರು, ವಯಸ್ಸು, ವಿಳಾಸ, ಮೊಬೈಲ್ ಸಂಖ್ಯೆ, ಪ್ರಯಾಣ ವಿವರಗಳು ಹಾಗೂ ಕೊನೆದಾಗಿ ಸಂಪರ್ಕವಾದ ದಿನಾಂಕ ಮತ್ತು ಸ್ಥಳದ ಮಾಹಿತಿ ಸೇರಿದಂತೆ ಲಭ್ಯವಿರುವ ವಿವರಗಳನ್ನು ಯಾವುದೇ ವಿಳಂಬವಿಲ್ಲದೆ ಜಿಲ್ಲಾಡಳಿತದ ಗಮನಕ್ಕೆ ತರಬೇಕು.
ವಿವರಗಳನ್ನು ಸಲ್ಲಿಸಿದ ನಂತರ ಸಂಬಂಧಪಟ್ಟ ಮಾಹಿತಿ ಮತ್ತು ವಿವರಗಳನ್ನು ಉತ್ತರ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ತುರ್ತು ಕಾರ್ಯಚರಣೆ ಕೇಂದ್ರ (ಡಿಇಓಸಿ) ಸಹಾಯವಾಣಿ ಸಂ;08382-229857, ಉಚಿತ ಸಹಾಯವಾಣಿ ಸಂ:1077, ಮೊ.ಸಂ:9483511015 ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಸಹಾಯವಾಣಿ ಸಂ:080-22253707, ನೇಪಾಳ ಭಾರತೀಯ ರಾಯಭಾರಿ ಕಚೇರಿ ಸಹಾಯವಾಣಿ ಸಂ: 977 9851316807, 977 9709107500, 977 9810326117 ಸಹಾಯವಾಣಿ ಮೂಲಕ ತಿಳಿಸಬಹುದಾಗಿದೆ.
ನಾಪತ್ತೆಯಾಗಿರುವವರ ಪತ್ತೆ, ಸುರಕ್ಷತೆ ಹಾಗೂ ಅಗತ್ಯವಿರುವ ಸಹಾಯ ಮತ್ತು ಸಮನ್ವಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಲು ಅನುಕೂಲವಾಗುವಂತೆ ಲಭ್ಯವಿರುವ ಮಾಹಿತಿಗಳನ್ನು ಯಾವುದೇ ವಿಳಂಬಕ್ಕೆ ಅಸ್ಪದ ನೀಡದೆ ಜಿಲ್ಲಾಡಳಿತಕ್ಕೆ ಸಾರ್ವಜನಿಕರು ಒದಗಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.