ಕುರಿ ಸಾಕಾಣಿಕೆಗೆಂದು ಬ್ಯಾಂಕಿನಲ್ಲಿ ಮಾಡಿದ್ದ ಸಾಲವನ್ನು ತೀರಿಸಲಾಗದೇ, ಇದನ್ನೇ ಮನಸ್ಸಿಗೆ ಹಚ್ಚಿಕೊಂಡು, ಅಡಿಕೆ ತೋಟಕ್ಕೆ ಹೊಡೆಯುವ ಕಳೆನಾಶಕ ಔಷಧಿಯನ್ನು ಸೇವಿಸಿ ಅಸ್ವಸ್ಥನಾಗಿದ್ದ ಯುವಕನೊಬ್ಬ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ.

ಯಲ್ಲಾಪುರ ತಾಲೂಕಿನ ಶಿರನಾಳ ಸಮೀಪದ ಪುರತ ಬೊಮ್ಮನಳ್ಳಿ ನಿವಾಸಿ, ಕೃಷಿ ಕೆಲಸದ 28 ವರ್ಷದ ಸಚಿನ್ ತಂದೆ ಸದಾನಂದ ರೇವಣ್ಕರ್ ಎಂಬಾತ, ಮುಂಡಗೋಡಿನ ಕೋ-ಆಪರೇಟಿವ್ ಬ್ಯಾಂಕ್ ಒಂದರಲ್ಲಿ ಮಾಡಿದ್ದ ಕುರಿ ಸಾಲವನ್ನು ತೀರಿಸಲು ಸಾಧ್ಯವಾಗಿಲ್ಲ ಎನ್ನುವುದನ್ನು ಮನಸ್ಸಿಗೆ ಹಚ್ಚಿಕೊಂಡು, ಜು.28ರಂದು ಬೆಳಿಗ್ಗೆ ಅಡಿಕೆ ತೋಟಕ್ಕೆ ಹೊಡೆಯುವ ಕಳೆನಾಶಕ ಔಷಧಿಯನ್ನು ಸೇವಿಸಿದ್ದನು.

ಅಸ್ವಸ್ಥನಾಗಿದ್ದ ಈತನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆ.2 ರಂದು ಮೃತಪಟ್ಟಿದ್ದಾನೆ. ಈ ಕುರಿತು ಮೃತನ ತಂದೆ ಪುರತ ಬೊಮ್ಮನಳ್ಳಿಯ ಸದಾನಂದ ರೇವಣಕರ್ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

====================

  • ಉದ್ಯೋಗ ವಾರ್ತೆ
    ಖಾಸಗಿ ಕಂಪನಿಯಲ್ಲಿ ಉದ್ಯೋಗಾವಕಾಶ: ನೇರ ಸಂದರ್ಶನ ಉದ್ಯೋಗದ ಸ್ಥಳ : ಕಾರವಾರ, ಕುಮಟಾ, ಹಳಿಯಾಳ, ದಾಂಡೇಲಿ, ಮುಂಡಗೋಡ, ಕುಂದಾಪುರ, ಉಡುಪಿ, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ರೆಸ್ಯೂಮ್ ಪ್ರತಿಯೊಂದಿಗೆ, ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಳಿಗಾಗಿ ಈ ಕಚÉೀರಿಯನ್ನು ಖುದ್ದಾಗಿ ಅಥವಾ ಮೊಬೈಲ್ ಸಂಖ್ಯೆ 6364860521, 8310044796 ಅಥವಾ ಕಚÉೀರಿ ದೂರವಾಣಿ ಸಂಖ್ಯೆ: 08382-226386 ಗೆ ಸಂಪರ್ಕಿಸುವಂತೆ ಕಾರವಾರದ ಯೋಜನಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನ ನೇಮಕಾತಿ… Read more: ಉದ್ಯೋಗ ವಾರ್ತೆ
  • ಭಟ್ರಕೇರಿಯ ಭಾರದ್ವಾಜಾಶ್ರಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜನೆ
    ಭಟ್ರಕೇರಿಯ ಭಾರದ್ವಾಜಾಶ್ರಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಐವತ್ತಕ್ಕೂ ಹೆಚ್ಚು ಋತ್ವಿಜರಿಂದ ನಡೆಯುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ, ವೇದ ಪಾರಾಯಣ, ಮಹಾರುದ್ರಾನುಷ್ಠಾನ, ಧನ್ವಂತರಿ ಹವನ, ಅಖಂಡ ಗೀತಾ ಪಾರಾಯಣ ಮುಂತಾದವು ನಡೆಯಲಿವೆ.ಗುರುವಾರ ಬೆಳಿಗ್ಗೆ ಗಂಗಾಪೂಜೆ, ಪೂರ್ವಾಂಗ ಕಾರ್ಯಕ್ರಮಗಳು, ಮಹಾಸಂಕಲ್ಪ, ನಂತರ ವೇದಪಾರಾಯಣ ಆರಂಭ, ಮಹಾನ್ಯಾಸಪೂರ್ವಕ ರುದ್ರ ಪಾರಾಯಣ ಆರಂಭವಾಗಲಿದೆ. ಮಧ್ಯಾಹ್ನ ಭಾರದ್ವಾಜೇಶ್ವರನಿಗೆ ಮಹಾ ಮಂಗಳಾರತಿ, ಪ್ರಸಾದ ಗ್ರಹಣ, ಸಂತರ್ಪಣೆ ನಡೆಯಲಿದೆ. ಸಂಜೆ ಗೋಪೂಜೆ, ಯಾಗಶಾಲಾ ಪ್ರವೇಶ, ಮಂಟಪ ಪೂಜೆ, ಅಗ್ನಿ ಜನನ, ಕಲಶ ಪೂಜೆ, ರಾಜೋಪಚಾರ ಪೂಜೆ… Read more: ಭಟ್ರಕೇರಿಯ ಭಾರದ್ವಾಜಾಶ್ರಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜನೆ
  • ಸುರೇಶ ಬೋರ್ಕರ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
    ಸುರೇಶ ಬೋರ್ಕರ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಇವರ ಸಾಮಾಜಿಕ ಸೇವೆಯನ್ನು ಗುರುತಿಸಿ ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ (ರಿ) ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ. ಕನ್ನಡ ರಾಜ್ಯೋತ್ಸವದ ನಿಮಿತ್ತ ಈ ಪ್ರಶಸ್ತಿಯನ್ನು ಕನ್ನಡ ನಾಡು, ನುಡಿಗೆ, ಕಲೆ, ಸಾಹಿತ್ಯ, ಸಂಸ್ಕೃತಿ,, ಸಮಾಜ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ಮಹನೀಯರಿಗೆ ನೀಡಲಾಗಿದೆ. ಮಂಗಳವಾರ ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ, ಕನ್ನಡಭವನ, ನಯನ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. =================
  • ಹೆದ್ದಾರಿ ತಡೆ ಪ್ರತಿಭಟನೆಯ ಸಮಗ್ರ ವರದಿ
    ಹೆದ್ದಾರಿ ತಡೆ ಪ್ರತಿಭಟನೆಯ ಸಮಗ್ರ ವರದಿ ಓದಿ: ಹೆದ್ದಾರಿ ತಡೆ ಪ್ರತಿಭಟನೆಗೆ ಸಂಬಂಧಿಸಿ ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ಮಾಧ್ಯಮದಲ್ಲಿ ಪ್ರಕಟವಾದ ಎಲ್ಲಾ ವರದಿಗಳು ಇಲ್ಲಿವೆ. ನದಿ ತಿರುವು ಯೋಜನೆ ವಿರೋಧಿಸಿ ಪ್ರತಿಭಟನೆ ಆರಂಭ ನದಿ ತಿರುವು ಯೋಜನೆ ಮೂರ್ಖತನದ ನಿರ್ಣಯ: ಪರಿಸರ ತಜ್ಞ ಬಿ.ಎಂ.ಕುಮಾರಸ್ವಾಮಿ ಆಕ್ರೋಶ ನದಿ ತಿರುವು ಯೋಜನೆಗೂ ನನ್ನ ಉದ್ಯಮಕ್ಕೂ ಯಾವುದೇ ಸಂಬಂಧವಿಲ್ಲ: ಶಾಸಕ ಹೆಬ್ಬಾರ್ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂಸದ, ಶಾಸಕರು ಏನಂದ್ರು? ಸಂಪೂರ್ಣ ವರದಿ ಇಲ್ಲಿದೆ ನದಿ ತಿರುವು ಯೋಜನೆ ಹಿಮ್ಮೆಟ್ಟಿಸಲು ಜನರು… Read more: ಹೆದ್ದಾರಿ ತಡೆ ಪ್ರತಿಭಟನೆಯ ಸಮಗ್ರ ವರದಿ
  • ಯೋಜನೆ ಹಿಮ್ಮೆಟ್ಟಿಸಲು ಒಗ್ಗಟ್ಟಾದ ಜನರು, ಜನಪ್ರತಿನಿಧಿಗಳು ಒಂದಾಗುವರೇ?
    ಯೋಜನೆ ಹಿಮ್ಮೆಟ್ಟಿಸಲು ಒಗ್ಗಟ್ಟಾದ ಜನರು, ಜನಪ್ರತಿನಿಧಿಗಳು ಒಂದಾಗುವರೇ? ಒಗ್ಗಟ್ಟಾದ ಜನಶಕ್ತಿ ಜಿಲ್ಲೆಯ ಜನರ ವಿರೋಧದ ನಡುವೆಯೂ ನದಿ ತಿರುವು ಯೋಜನೆಯನ್ನು ಜಾರಿಗೊಳಿಸಲು ಸರ್ಕಾರಗಳು ಹವಣಿಸುತ್ತಿರುವುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಒಂದೂವರೆ ವರ್ಷದಿಂದಲೂ ನಿರಂತರವಾಗಿ ಯೋಜನೆಯ ವಿರುದ್ಧ ಹೋರಾಟ ನಡೆಯುತ್ತಿದ್ದರೂ ಸರ್ಕಾರಗಳು ಮಾತ್ರ ಯಾವುದೇ ಸ್ಪಂದನೆ ನೀಡದೇ, ಯೋಜನೆಯ ಜಾರಿಗೆ ಮುಂದಾಗುತ್ತಿರುವ ವಿದ್ಯಮಾನದಿಂದ ಜನರು ಆತಂಕಗೊಂಡಿರುವುದು ಮತ್ತು ಸರ್ಕಾರಗಳ ನಡೆಗೆ ಜನರು ಸಹನೆ ಕಳೆದುಕೊಳ್ಳುತ್ತಿರುವುದು ಈ ಪ್ರತಿಭಟನೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಯಲ್ಲಾಪುರ, ಶಿರಸಿ, ಸಿದ್ದಾಪುರ,… Read more: ಯೋಜನೆ ಹಿಮ್ಮೆಟ್ಟಿಸಲು ಒಗ್ಗಟ್ಟಾದ ಜನರು, ಜನಪ್ರತಿನಿಧಿಗಳು ಒಂದಾಗುವರೇ?
  • ಹೆದ್ದಾರಿ ತಡೆ ಪ್ರತಿಭಟನೆ ಮುಕ್ತಾಯ: ಜನಪ್ರತಿನಿಧಿಗಳು ಏನಂದ್ರು?
    ಹೆದ್ದಾರಿ ತಡೆ ಪ್ರತಿಭಟನೆ ಮುಕ್ತಾಯ: ಜನಪ್ರತಿನಿಧಿಗಳು ಏನಂದ್ರು? ನದಿ ತಿರುವು ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಅವರಿಗೆ ಮನವಿ ಸಲ್ಲಿಸಲಾಯಿತು. ಇದನ್ನೂ ಓದಿ: ನದಿ ತಿರುವು ಯೋಜನೆಗೂ ನನ್ನ ಉದ್ಯಮಕ್ಕೂ ಯಾವುದೇ ಸಂಬಂಧವಿಲ್ಲ: ಶಾಸಕ ಹೆಬ್ಬಾರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜನರನ್ನು ಉದ್ದೇಶಿಸಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ಶಿರಸಿ ಶಾಸಕ ಭೀಮಣ್ಣ ನಾಯ್ಕ, ಕುಮಟಾ ಶಾಸಕ ದಿನಕರ ಶೆಟ್ಟಿ ಹಾಗೂ ಹೆದ್ದಾರಿ ತಡೆ ಹೋರಾಟ… Read more: ಹೆದ್ದಾರಿ ತಡೆ ಪ್ರತಿಭಟನೆ ಮುಕ್ತಾಯ: ಜನಪ್ರತಿನಿಧಿಗಳು ಏನಂದ್ರು?
  • ನನ್ನ ಉದ್ಯಮಕ್ಕೂ ನದಿ ತಿರುವು ಯೋಜನೆಗೂ ಯಾವ ಸಂಬಂಧವೂ ಇಲ್ಲ : ಶಾಸಕ ಶಿವರಾಮ ಹೆಬ್ಬಾರ್
    ನನ್ನ ಉದ್ಯಮಕ್ಕೂ ನದಿ ತಿರುವು ಯೋಜನೆಗೂ ಯಾವ ಸಂಬಂಧವೂ ಇಲ್ಲ : ಶಾಸಕ ಶಿವರಾಮ ಹೆಬ್ಬಾರ್ ಯಲ್ಲಾಪುರ ಪಟ್ಟಣದಲ್ಲಿ ಮಂಗಳವಾರ ನಡೆದ ಹೆದ್ದಾರಿ ತಡೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ,  ರಾಜಕಾರಣದಿಂದ ಈ ಹೋರಾಟವನ್ನು ದೂರ ಇಡಬೇಕು. ಹೋರಾಟದಲ್ಲಿ ರಾಜಕೀಯ ಮಾಡಬಾರದು, ನಾವು ಜನಪ್ರತಿನಿಧಿಗಳು ಒಟ್ಟಾಗಿ ಈ ಯೋಜನೆಯ ವಿರುದ್ಧ ಎಲ್ಲಾ ರೀತಿಯಲ್ಲಿ, ಎಲ್ಲಾ ಹಂತದಲ್ಲಿ ಹೋರಾಡುತ್ತೇವೆ, ಈ ಯೋಜನೆ ರದ್ದು ಮಾಡಲು ನಮ್ಮ ಎಲ್ಲಾ ಶಕ್ತಿಯನ್ನು ಬಳಸುತ್ತೇವೆ. ವಿಜ್ಞಾನಿಗಳೇ ಇಂತಹ ಯೋಜನೆ ರೂಪಿಸಲು ಕಾರಣ, ಸರ್ಕಾರ ಅನುಷ್ಠಾನಗೊಳಿಸುತ್ತದೆ,… Read more: ನನ್ನ ಉದ್ಯಮಕ್ಕೂ ನದಿ ತಿರುವು ಯೋಜನೆಗೂ ಯಾವ ಸಂಬಂಧವೂ ಇಲ್ಲ : ಶಾಸಕ ಶಿವರಾಮ ಹೆಬ್ಬಾರ್
  • ನದಿ ತಿರುವು ಯೋಜನೆ ಮೂರ್ಖತನದ ನಿರ್ಣಯ
    ನದಿ ತಿರುವು ಯೋಜನೆ ಮೂರ್ಖತನದ ನಿರ್ಣಯ ಅವರು ಮಂಗಳವಾರ ಯಲ್ಲಾಪುರದಲ್ಲಿ ನಡೆದ ನದಿ ತಿರುವು ಯೋಜನೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ  ಮಾತನಾಡಿ, ಬೇಡ್ತಿ ನದಿಯಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆ ಎನ್ನುವುದನ್ನು ವಿಜ್ಞಾನಿಗಳು ವರದಿ ನೀಡಿದರೂ ಸರ್ಕಾರ ಗಮನ ಹರಿಸಿಲ್ಲ. ಈ ಯೋಜನೆಯು ಸೊಳ್ಳೆ ಪರದೆಯಲ್ಲಿ ನೀರು ತರುವಂತಹ ವಿಫಲ ಯೋಜನೆಯಾಗಿದೆ, ಇನ್ನಾದರೂ ಈ ಯೋಜನೆಯ ಪರವಾಗಿ ಇರುವ ರಾಜಕಾರಣಿಗಳಿಗೆ ಜ್ಞಾನೋದಯವಾಗಲಿ ಎಂದರು ವೇದಿಕೆಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ, ಶಾಸಕರಾದ ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ, ದಿನಕರ… Read more: ನದಿ ತಿರುವು ಯೋಜನೆ ಮೂರ್ಖತನದ ನಿರ್ಣಯ
  • ನದಿ ತಿರುವು ಯೋಜನೆ ವಿರೋಧಿಸಿ ಪ್ರತಿಭಟನೆ ಆರಂಭ
    ನದಿ ತಿರುವು ಯೋಜನೆ ವಿರೋಧಿಸಿ ಪ್ರತಿಭಟನೆ ಆರಂಭ ನದಿ ತಿರುವು ಯೋಜನೆಯನ್ನು ವಿರೋಧಿಸಿ ಮಂಗಳವಾರ ಬೆಳಿಗ್ಗೆ ಯಲ್ಲಾಪುರದಲ್ಲಿ ಪ್ರತಿಭಟನೆ ಆರಂಭವಾಗಿದೆ. ಬೆಳಿಗ್ಗೆ 9.30 ಗಂಟೆಗೆ ಸರಿಯಾಗಿ ಪಟ್ಟಣದ ಟಿ.ಎಂ.ಎಸ್.ಸೂಪರ್ ಮಾರ್ಟ್ ಎದುರು ಸಾವಿರಾರು ಜನರು ಸೇರಿದ್ದಾರೆ, ಅಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಮಾತೆಯರಿಂದ ದೇಶಭಕ್ತಿಗೀತೆ ಭಜನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬೇಡ್ತಿ ಬಿಡೆವು, ಅಘನಾಶನಿ ಕೊಡೆವು ಮುಂತಾದ ಘೋಷಣೆಗಳು ಮೊಳಗಿದವು ಯಲ್ಲಾಪುರ ತಾಲೂಕಿನ ವಿವಿಧ ಭಾಗಗಳಿಂದ ಹಾಗೂ ಶಿರಸಿ, ಸಿದ್ದಾಪುರ, ಮುಂಡಗೋಡ, ಅಂಕೋಲಾ ಮುಂತಾದ ತಾಲೂಕುಗಳಿಂದಲೂ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.… Read more: ನದಿ ತಿರುವು ಯೋಜನೆ ವಿರೋಧಿಸಿ ಪ್ರತಿಭಟನೆ ಆರಂಭ
  • ಹೆದ್ದಾರಿ ತಡೆ ಪ್ರತಿಭಟನೆಗೆ ಸಂಪೂರ್ಣ ಸಿದ್ಧತೆ
    ಹೆದ್ದಾರಿ ತಡೆ ಪ್ರತಿಭಟನೆಗೆ ಸಂಪೂರ್ಣ ಸಿದ್ಧತೆ ಮಂಗಳವಾರ ಬೆಳಿಗ್ಗೆ 9.30 ಗಂಟೆಗೆ ಬಸ್ ನಿಲ್ದಾಣ ಸಮೀಪದ ಟಿ.ಎಂ.ಎಸ್.ಸೂಪರ್ ಮಾರ್ಟ್ ಹತ್ತಿರ ಸಭೆ ಸೇರುವುದೆಂದು ತಿಳಿಸಲಾಗಿದೆ. ಪರಿಸರತಜ್ಞರುಇಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಮೆರವಣಿಗೆಯ ಮೂಲಕ ಎಲ್.ಎಸ್.ಎಂ.ಪಿ. ಸೊಸೈಟಿ ಎದುರು ಹೆದ್ದಾರಿಯಲ್ಲಿ 11 ಗಂಟೆಗೆ ಪ್ರತಿಭಟನಾ ಸಭೆ ಆರಂಭವಾಗಲಿದೆ. ಹಲವು ಪ್ರಮುಖರು ಇಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ವಾಹನ ನಿಲುಗಡೆ ವ್ಯವಸ್ಥೆ ಶಿರಸಿ ಕಡೆಯಿಂದ ಬರುವವರು ತಮ್ಮ ವಾಹನಗಳನ್ನು ಎಪಿಎಂಸಿ ಆವರಣದಲ್ಲಿ ನಿಲ್ಲಿಸಬೇಕು, ಕಾರವಾರ ರಸ್ತೆ ಕಡೆಯಿಂದ ಬರುವವರು… Read more: ಹೆದ್ದಾರಿ ತಡೆ ಪ್ರತಿಭಟನೆಗೆ ಸಂಪೂರ್ಣ ಸಿದ್ಧತೆ
  • ರಸ್ತೆ ತಡೆ ಪ್ರತಿಭಟನೆಗೆ ರೈತ ಸಂಘದ ಬೆಂಬಲ
    ರಸ್ತೆ ತಡೆ ಪ್ರತಿಭಟನೆಗೆ ರೈತ ಸಂಘದ ಬೆಂಬಲ ನಾಗೇಶ ಹೆಗಡೆ ಪಣತಗೇರಿ ಈ ಕುರಿತು ಸೋಮವಾರ ತಾಲೂಕಾ ರೈತ ಸಂಘದ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ ಮಾತನಾಡಿ, ಹೆದ್ದಾರಿ ತಡೆ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂಧವರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಬೇಡ್ತಿ ನದಿಯಲ್ಲಿ ಈ ಭಾಗದ ರೈತರ ಜಮೀನುಗಳಿಗೆ ಅಗತ್ಯ ಇರುವಷ್ಟು ನೀರು ಕೂಡಾ ಬೇಸಿಗೆಯ ಸಂದರ್ಭದಲ್ಲಿ ಲಭ್ಯ ಇರುವುದಿಲ್ಲ. ಈ ಯೋಜನೆ ಜಾರಿಯಾದರೆ ಇಲ್ಲಿನ ಪರಿಸರದ ಮೇಲೆ ಮತ್ತು ಜಿಲ್ಲೆಯ ಜನಜೀವನದ ಮೇಲೆ… Read more: ರಸ್ತೆ ತಡೆ ಪ್ರತಿಭಟನೆಗೆ ರೈತ ಸಂಘದ ಬೆಂಬಲ
  • ಯಕ್ಷಗಾನವು ಸಮೃದ್ಧವಾದ ಮತ್ತು ಪರಿಪೂರ್ಣವಾದ ರಾಜಕಲೆಯಾಗಿದೆ : ಸ್ವರ್ಣವಲ್ಲೀ ಶ್ರೀ
    ಯಕ್ಷಗಾನವು ಸಮೃದ್ಧವಾದ ಮತ್ತು ಪರಿಪೂರ್ಣವಾದ ರಾಜಕಲೆಯಾಗಿದೆ : ಸ್ವರ್ಣವಲ್ಲೀ ಶ್ರೀ ಯಲ್ಲಾಪುರ ಪಟ್ಟಣದ ಗಾಂಧಿಕುಟೀರದಲ್ಲಿ ರವಿವಾರ ರಾತ್ರಿ 40 ನೇ ಸಂಕಲ್ಪ ಉತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ಯಕ್ಷಗಾನವು ನೃತ್ಯ, ಅಭಿನಯ, ಗಾನ,ತಾಳ,ವೇಷ, ಅರ್ಥಗಾರಿಕೆಯನ್ನು ಒಳಗೊಂಡ ಸಮೃದ್ಧವಾದ ಕಲೆಯಾಗಿದೆ. ಯಕ್ಷಗಾನವನ್ನು ಕಲೆಗಳ ರಾಜ ಎನ್ನಬಹುದು. ಯಕ್ಷಗಾನ ಪ್ರದರ್ಶನದಲ್ಲಿ ತಪಸ್ವಿಗಳ, ಮಹಾತ್ಮರ, ತ್ಯಾಗಿಗಳ ಕಥಾನಕಗಳು ಹೆಚ್ಚು ಬರುವಂತಾಗಬೇಕು, ಈ ಮೂಲಕ ಸಾಧಕರ, ಮಹಾತ್ಮರ ಬದುಕಿನ ಚಿತ್ರಣಗಳು ರಂಗಕ್ಕೆ ಬರುವ ಮೂಲಕ ಪ್ರೇಕ್ಷಕರಲ್ಲಿ ಸದ್ಭಾವನೆ ಬೆಳೆಯಬೇಕು, ಈ… Read more: ಯಕ್ಷಗಾನವು ಸಮೃದ್ಧವಾದ ಮತ್ತು ಪರಿಪೂರ್ಣವಾದ ರಾಜಕಲೆಯಾಗಿದೆ : ಸ್ವರ್ಣವಲ್ಲೀ ಶ್ರೀ
  • ಅರಬೈಲ್ ಶಾಲೆಯಲ್ಲಿ ಸಂಭ್ರಮದಿಂದ ನಡೆದ ಕನ್ನಡ ರಾಜ್ಯೋತ್ಸವ
    ಅರಬೈಲ್ ಶಾಲೆಯಲ್ಲಿ ಸಂಭ್ರಮದಿಂದ ನಡೆದ ಕನ್ನಡ ರಾಜ್ಯೋತ್ಸವ ಈ ನಿಮಿತ್ತ ನಡೆದ ಭವ್ಯ ಮೆರವಣಿಗೆಯಲ್ಲಿ ಶಾಲಾಮಕ್ಕಳು ವಿವಿಧ ವೇಷಭೂಷಣ ಧರಿಸಿ ಕನ್ನಡಾಂಬೆಯ ಜಯಘೋಷ ಮೊಳಗಿಸಿದರು. ಕನ್ನಡ ನಾಡು ನುಡಿಯ ಕುರಿತು ಸಾಹಿತಿ, ಮುಖ್ಯಾಧ್ಯಾಪಕಿ ಶಿವಲೀಲಾ ಹುಣಸಗಿ ಮಾತನಾಡಿ, ಕನ್ನಡ ನಮ್ಮ ನಾಡು, ಕನ್ನಡ ನಮ್ಮ ನುಡಿ, ಕನ್ನಡ ನಮ್ಮ ಹೆಮ್ಮೆ,ನಮ್ಮ ಉಸಿರು. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಅತ್ಯಂತ ಶ್ರೀಮಂತವಾದ ಭಾಷೆಯಾಗಿದೆ. ಕವಿರಾಜಮಾರ್ಗದಿಂದ ಹಿಡಿದು ಇಂದಿನ ಆಧುನಿಕ ಸಾಹಿತ್ಯದವರೆಗೆ ಕನ್ನಡ ಸಾಹಿತ್ಯವು ತನ್ನದೇ ಆದ… Read more: ಅರಬೈಲ್ ಶಾಲೆಯಲ್ಲಿ ಸಂಭ್ರಮದಿಂದ ನಡೆದ ಕನ್ನಡ ರಾಜ್ಯೋತ್ಸವ
  • ಹೆದ್ದಾರಿ ತಡೆ ಪ್ರತಿಭಟನೆಗೆ ಸಕಲ ಸಿದ್ಧತೆ
    ಹೆದ್ದಾರಿ ತಡೆ ಪ್ರತಿಭಟನೆಗೆ ಸಕಲ ಸಿದ್ಧತೆ ಅವರು ಸಮೀತಿಯ ಪ್ರಮುಖರೊಂದಿಗೆ ರವಿವಾರ ಯಲ್ಲಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಹಲವು ಹಂತಗಳಲ್ಲಿ ನದಿ ತಿರುವು ಯೋಜನೆ ವಿರುದ್ಧ ಪ್ರತಿಭಟನೆ ನಡೆದಿದೆ. ಆದರೆ ನಮ್ಮ ಬೆಡಿಕೆಗೆ ಸರ್ಕಾರಗಳು ಸ್ಪಂದಿಸಿಲ್ಲ, ನಮ್ಮ ಪ್ರತಿಭಟನೆಯ ಕಾವು ಹೆಚ್ಚಾದಂತೆ ಸರ್ಕಾರಗಳು ಯೋಜನೆಯ ಪರವಾಗಿ ಒಂದು ಹೆಜ್ಜೆ ಮುಂದಿಡುತ್ತಿರುವುದನ್ನು ನಾವು ಗಮನಿಸಿದ್ದೇವೆ. ಯೋಜನೆಯನ್ನು ವಿರೋಧಿಸಿ ಇತ್ತೀಚೆಗೆ ಶಿರಸಿ, ಬೆಂಗಳೂರಿನಲ್ಲಿ ನಡೆದ ಹೋರಾಟಕ್ಕೆ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯಲಿಲ್ಲ, ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ಹೋರಾಟ ನಡೆಯುತ್ತಿದ್ದು, ಈಗಾಗಲೇ… Read more: ಹೆದ್ದಾರಿ ತಡೆ ಪ್ರತಿಭಟನೆಗೆ ಸಕಲ ಸಿದ್ಧತೆ
  • ಹೆದ್ದಾರಿ ತಡೆ ಪ್ರತಿಭಟನೆಗೆ ಜಯಕರ್ನಾಟಕ ಸಂಘಟನೆಯ ಬೆಂಬಲ
    ಹೆದ್ದಾರಿ ತಡೆ ಪ್ರತಿಭಟನೆಗೆ ಜಯಕರ್ನಾಟಕ ಸಂಘಟನೆಯ ಬೆಂಬಲ ವಿಲ್ಸನ್ ಫರ್ನಾಂಡಿಸ್ ಈ ಕುರಿತು ಜಯಕರ್ನಾಟಕ ಸಂಘಟನೆಯ ತಾಲೂಕಾ ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ರವಿವಾರ ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ಪ್ರತಿನಿಧಿಯೊಂದಿಗೆ ಮಾತನಾಡಿ, ನಮ್ಮ ಜಿಲ್ಲೆಯ ಉಳಿವಿಗಾಗಿ ನದಿತಿರುವು ಯೋಜನೆಯನ್ನು ತಕ್ಷಣ ಕೈಬಿಡಬೇಕು, ಅವೈಜ್ಞಾನಿಕ ಈ ಯೋಜನೆಯು ಜಿಲ್ಲೆಯ ಜನಜೀವನ ಮತ್ತು ಪರಿಸರದ ಮೇಲೆ ಪ್ರತೀಕೂಲವಾದ ಪರಿಣಾಮ ಬೀರಲಿದೆ. ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಜಾರಿಗೊಳಿಸಬಾರದು ಎಂದು ಅವರು ಆಗ್ರಹಿಸಿದ್ದಾರೆ. ನದಿ ತಿರುವು ಯೋಜನೆಯ ವಿರುದ್ಧ ನ.3 ರಂದು ಯಲ್ಲಾಪುರದಲ್ಲಿ… Read more: ಹೆದ್ದಾರಿ ತಡೆ ಪ್ರತಿಭಟನೆಗೆ ಜಯಕರ್ನಾಟಕ ಸಂಘಟನೆಯ ಬೆಂಬಲ
  • ಜಯಕರ್ನಾಟಕ ಸಂಘಟನೆಯ ವತಿಯಿಂದ ವಿಜೃಂಭಣೆಯಿಂದ ನಡೆದ ಕನ್ನಡ ರಾಜ್ಯೋತ್ಸವ
    ಜಯಕರ್ನಾಟಕ ಸಂಘಟನೆಯ ವತಿಯಿಂದ ವಿಜೃಂಭಣೆಯಿಂದ ನಡೆದ ಕನ್ನಡ ರಾಜ್ಯೋತ್ಸವ ವಿಲ್ಸನ್ ಫರ್ನಾಂಡಿಸ್ ಜಯಕರ್ನಾಟಕ ಸಂಘಟನೆಯ ತಾಲೂಕಾ ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಮಾತನಾಡಿ, ನಮ್ಮ ಕನ್ನಡ ಭಾಷೆ, ನಮ್ಮ ನೆಲ, ನಮ್ಮ ಸಂಸ್ಕೃತಿ ಮತ್ತು ನಮ್ಮ ನಾಡಿನ ಮಹೋನ್ನತ ಇತಿಹಾಸದ ಬಗ್ಗೆ ನಾವೆಲ್ಲರೂ ಅರಿತುಕೊಂಡು, ನಾಡುನುಡಿಯ ಬಗ್ಗೆ ಹೆಮ್ಮೆ ಮತ್ತು ಅಭಿಮಾನ ಪಡಬೇಕು. ಜಯಕರ್ನಾಟಕ ಸಂಘಟನೆಯು ನಿರಂತರವಾಗಿ ನಾಡು ನುಡಿಯ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದೆ, ನಾಡಿನ ಸಮಸ್ತ ಜನರ ಅಭ್ಯುದಯಕ್ಕೆ ನಮ್ಮ ಸಂಘಟನೆ ಅನೇಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದೆ ಎಂದರು. ಕಾರ್ಯಕ್ರಮದಲ್ಲಿ… Read more: ಜಯಕರ್ನಾಟಕ ಸಂಘಟನೆಯ ವತಿಯಿಂದ ವಿಜೃಂಭಣೆಯಿಂದ ನಡೆದ ಕನ್ನಡ ರಾಜ್ಯೋತ್ಸವ
  • ಕನ್ನಡ ಭಾಷೆ, ಸಂಸ್ಕೃತಿ ಮತ್ತು ನೆಲ-ಜಲದ ರಕ್ಷಣೆಗೆ ಬದ್ಧರಾಗಿರೋಣ: ಸಚಿವ ಲಕ್ಷ್ಮಣ ಸವದಿ
    ಕನ್ನಡ ಭಾಷೆ, ಸಂಸ್ಕೃತಿ ಮತ್ತು ನೆಲ-ಜಲದ ರಕ್ಷಣೆಗೆ ಬದ್ಧರಾಗಿರೋಣ: ಸಚಿವ ಲಕ್ಷ್ಮಣ ಸವದಿ ಅವರು ಭಾನುವಾರ ಉತ್ತರ ಕನ್ನಡ ಜಿಲ್ಲಾಡಳಿತ ವತಿಯಿಂದ ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕರ್ನಾಟಕವು ತನ್ನ ವೈವಿಧ್ಯಮಯ ಸಂಸ್ಕೃತಿ, ಜನಪದ ಕಲೆಗಳಿಂದ ಶ್ರೀಮಂತವಾಗಿದ್ದು, ಕನ್ನಡವು ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಪಡೆದಿದೆ. ಪ್ರತಿಯೊಬ್ಬರೂ ಕನ್ನಡವನ್ನು ಪ್ರೀತಿಸಿ, ಕನ್ನಡದಲ್ಲಿ ವ್ಯವಹರಿಸಿ ಕನ್ನಡದ ಕಲೆ ಮತ್ತು ಸಾಹಿತ್ಯವನ್ನು ಗೌರವಿಸಬೇಕು. ನಮ್ಮ ನಾಡಿನ ಏಕತೆ, ಸೌಹಾರ್ದತೆ ಮತ್ತು… Read more: ಕನ್ನಡ ಭಾಷೆ, ಸಂಸ್ಕೃತಿ ಮತ್ತು ನೆಲ-ಜಲದ ರಕ್ಷಣೆಗೆ ಬದ್ಧರಾಗಿರೋಣ: ಸಚಿವ ಲಕ್ಷ್ಮಣ ಸವದಿ
  • ಓದುವ ಅಭಿರುಚಿಯು ಭಾಷಾ ಬೆಳವಣಿಗೆಗೆ ಸಹಕಾರಿ: ದತ್ತಾತ್ರೇಯ ಕಣ್ಣೀಪಾಲ
    ಓದುವ ಅಭಿರುಚಿಯು ಭಾಷಾ ಬೆಳವಣಿಗೆಗೆ ಸಹಕಾರಿ: ದತ್ತಾತ್ರೇಯ ಕಣ್ಣೀಪಾಲ ಬರಹಗಾರ ದತ್ತಾತ್ರೇಯ ಕಣ್ಣೀಪಾಲ ಉಪನ್ಯಾಸ ನೀಡಿ ಮಾತನಾಡಿ, ಆಧುನಿಕ ಭರಾಟೆಯಲ್ಲಿ ಕನ್ನಡ ಭಾಷೆಯ ಅಂತಃಸತ್ವ ಕ್ಷಿಣವಾಗುತ್ತಿದೆ, ಕನ್ನಡ ಭಾಷೆಯು ಮೂಲ ಸತ್ವವನ್ನು ಬಿಟ್ಟು ಪಲ್ಲಟವಾಗುತ್ತಿರುವುದು ಆತಂಕದ ಸಂಗತಿಯಾಗಿದೆ, ಕನ್ನಡ ಸಾಹಿತ್ಯವನ್ನು ಓದುವ ಅಭಿರುಚಿ ಬೆಳೆಸಿಕೊಂಡರೆ ನಮ್ಮ ಮಾತೃಭಾಷೆಯ ಉಳಿವಿಗೆ ಮತ್ತು ಭಾಷಾ ಬೆಳವಣಿಗೆಗೆ ಹೆಚ್ಚು ಅನುಕೂಲವಾಗುತ್ತದೆ. ಇಂದಿನ ಎಐ ಯುಗದಲ್ಲಿ ಕನ್ನಡ ಭಾಷೆಯ ಬಳಕೆಯು ಸಂಕ್ಷಿಪ್ತವಾಗುತ್ತಿದೆ, ಭಾಷಾಪ್ರೀತಿ ದೂರವಾಗುತ್ತಿದೆ, ಮಾತೃಭಾಷೆಯಲ್ಲಿ ಸಂವಹನ ನಡೆಸುವುದು ವಿರಳವಾಗುತ್ತಿದೆ, ಇದು ಇನ್ನಷ್ಟು… Read more: ಓದುವ ಅಭಿರುಚಿಯು ಭಾಷಾ ಬೆಳವಣಿಗೆಗೆ ಸಹಕಾರಿ: ದತ್ತಾತ್ರೇಯ ಕಣ್ಣೀಪಾಲ
  • ಯಲ್ಲಾಪುರದಲ್ಲಿ ಸಂಭ್ರಮದಿಂದ ನಡೆದ ಕನ್ನಡ ರಾಜ್ಯೋತ್ಸವ
    ಯಲ್ಲಾಪುರದಲ್ಲಿ ಸಂಭ್ರಮದಿಂದ ನಡೆದ ಕನ್ನಡ ರಾಜ್ಯೋತ್ಸವ ಕನ್ನಡ ರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ, ಕನ್ನಡಾಂಬೆಯ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ರವಿವಾರ ಬೆಳಿಗ್ಗೆ ತಹಶಿಲ್ದಾರ ಕಚೇರಿಯಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಆಕರ್ಷಕ, ವಿವಿಧ ಸ್ಥಬ್ದ ಚಿತ್ರಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸಿದ್ದಿ ಸಮುದಾಯದ ಮಹಿಳೆಯರು ಡಮಾಮಿ ನೃತ್ಯ ಪ್ರದರ್ಶಿಸಿದರು. ತಹಶಿಲ್ದಾರ್ ಕಚೇರಿಯಿಂದ ಹೊರಟ ಮೆರವಣಿಗೆಯು ತಾಲೂಕಾ ಪಂಚಾಯತಿ ಆವರಣದ ಗಾಂಧಿ ಕುಟೀರದಲ್ಲಿ ಸಂಪನ್ನಗೊಂಡಿತು. ಗಾಂಧಿ ಕುಟೀರದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಮಾತನಾಡಿ,… Read more: ಯಲ್ಲಾಪುರದಲ್ಲಿ ಸಂಭ್ರಮದಿಂದ ನಡೆದ ಕನ್ನಡ ರಾಜ್ಯೋತ್ಸವ
  • ಭಗವದ್ಗೀತೆಯ ಸೇವೆಯು ಭಗವಂತನ ಸೇವೆಯಾಗಿದೆ: ಸ್ವರ್ಣವಲ್ಲೀ ಶ್ರೀ
    ಭಗವದ್ಗೀತೆಯ ಸೇವೆಯು ಭಗವಂತನ ಸೇವೆಯಾಗಿದೆ: ಸ್ವರ್ಣವಲ್ಲೀ ಶ್ರೀ ಭಗವದ್ಗೀತಾ ಅಭಿಯಾನದ ಅಂಗವಾಗಿ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಮಹಿಳಾ ಸಮಾಜ ವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಭಗವದ್ಗೀತಾ ಉಪನ್ಯಾಸಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಗವದ್ಗೀತಾ ಅಭಿಯಾನಕ್ಕೆ ನಿರ್ಧಿಷ್ಟವಾದ ಗುರಿ, ಉದ್ದೇಶ ಇದೆ. ವ್ಯಕ್ತಿತ್ವ ವಿಕಸನ, ನೈತಿಕತೆಯ ಪುನರುತ್ಥಾನ, ಸಾಮಾಜಿಕ ಸಾಮರಸ್ಯ, ರಾಷ್ಟ್ರೀಯ ಭಾವೈಕ್ಯತೆ ಇವುಗಳಿಗಾಗಿ ಅಭಿಯಾನ ನಡೆಯುತ್ತಿದೆ. ಎಲ್ಲೆಡೆಯೂ ಗೀತೆಯ ಪ್ರಸಾರ, ಪಠಣ ಆಗಬೇಕು, ಭಕ್ತಿಯ ಭಾವುಕತೆ ಮತ್ತು ವೈಚಾರಿಕ, ವೈಜ್ಞಾನಿಕ ಹಿನ್ನೆಲೆಯಲ್ಲಿ ಗೀತೆಗೆ ಮಹತ್ವದ… Read more: ಭಗವದ್ಗೀತೆಯ ಸೇವೆಯು ಭಗವಂತನ ಸೇವೆಯಾಗಿದೆ: ಸ್ವರ್ಣವಲ್ಲೀ ಶ್ರೀ
  • ಯಲ್ಲಾಪುರದ ಸುರೇಶ ಬೋರ್ಕರ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
    ಯಲ್ಲಾಪುರದ ಸುರೇಶ ಬೋರ್ಕರ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಸುರೇಶ ಬೋರ್ಕರ್ ಕನ್ನಡ ರಾಜ್ಯೋತ್ಸವದ ನಿಮಿತ್ತ ಈ ಪ್ರಶಸ್ತಿಯನ್ನು ಕನ್ನಡ ನಾಡು, ನುಡಿಗೆ, ಕಲೆ, ಸಾಹಿತ್ಯ, ಸಂಸ್ಕೃತಿ, ಸಮಾಜ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ಮಹನೀಯರಿಗೆ ನೀಡಲಾಗುತ್ತಿದೆ. ನ.3 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನ.3 ರಂದು ಸಂಜೆ 5.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ, ಕನ್ನಡಭವನ, ನಯನ ಸಭಾಂಗಣದಲ್ಲಿ ಈ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಮಾದರಿ ಸಮಾಜ ಸೇವಕ… Read more: ಯಲ್ಲಾಪುರದ ಸುರೇಶ ಬೋರ್ಕರ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
  • ನಮ್ಮ ಪರಿಸರಕ್ಕೆ ಧಕ್ಕೆಯಾಗುವಂತಹ ಯೋಜನೆ ಜಾರಿಗೆ ತರಲು ನಾವು ಬಿಡುವುದಿಲ್ಲ: ಹರಿಪ್ರಕಾಶ ಕೋಣೆಮನೆ
    ನಮ್ಮ ಪರಿಸರಕ್ಕೆ ಧಕ್ಕೆಯಾಗುವಂತಹ ಯೋಜನೆ ಜಾರಿಗೆ ತರಲು ನಾವು ಬಿಡುವುದಿಲ್ಲ: ಹರಿಪ್ರಕಾಶ ಕೋಣೆಮನೆ ಅವರು ಗುರುವಾರ ಪಟ್ಟಣದ ಎಲ್.ಎಸ್.ಎಂ.ಪಿ ಸೊಸೈಟಿ ಸಭಾಭವನದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಆಂದೋಲನದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಂಸದ ಬೊಮ್ಮಾಯಿ ಯೋಜನೆ ಜಾರಿಯಾಗಬೇಕೆಂದು ಮತ್ತೆ ಒತ್ತಾಯಿಸಿದ್ದಾರೆ. ಅವರಿಗೆ ಸಮಯ ಬಂದಾಗ ತಕ್ಕ ಉತ್ತರ ನೀಡಲಿದ್ದೇವೆ. ಬಯಲುಸೀಮೆಗೆ ನೀರು ಕೊಡುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ನಮ್ಮನ್ನು ಒಕ್ಕಲೆಬ್ಬಿಸಿ, ನಮ್ಮ ಪರಿಸರಕ್ಕೆ ಧಕ್ಕೆಯಾಗುಂತಹ ಯೋಜನೆ ಜಾರಿಗೆ ತರಲು ನಾವು ಬಿಡುವುದಿಲ್ಲ. ಅದಕ್ಕಾಗಿಯೇ ಸ್ವರ್ಣವಲ್ಲೀ ಶ್ರೀಗಳ… Read more: ನಮ್ಮ ಪರಿಸರಕ್ಕೆ ಧಕ್ಕೆಯಾಗುವಂತಹ ಯೋಜನೆ ಜಾರಿಗೆ ತರಲು ನಾವು ಬಿಡುವುದಿಲ್ಲ: ಹರಿಪ್ರಕಾಶ ಕೋಣೆಮನೆ
  • ವಿವಿದೆಡೆ ಭಗವದ್ಗೀತಾ ಅಭಿಯಾನ ಸಂಪರ್ಕ ಸಭೆ
    ವಿವಿದೆಡೆ ಭಗವದ್ಗೀತಾ ಅಭಿಯಾನ ಸಂಪರ್ಕ ಸಭೆ ಆತ್ಮೀಯ ಓದುಗರೇ..ಯಲ್ಲಾಪುರ ತಾಲೂಕಾ ವ್ಯಾಪ್ತಿಯಲ್ಲಿ ನಡೆಯುವ ಭಗವದ್ಗೀತಾ ಅಭಿಯಾನದ ಫೋಟೋಗಳನ್ನು ಹಾಗೂ ಅಭಿಯಾನದ ಮಾಹಿತಿಯನ್ನು ನಮಗೆ ಕಳುಹಿಸಿ, ಸಮೀತಿಯ ದಾಖಲೆಗಳಲ್ಲಿ ನಮೂದಿಸುವ ಜೊತೆಗೆ, ವಿವಿಧ ಮಾಧ್ಯಮಗಳಲ್ಲಿ ಪ್ರಕಟಿಸುತ್ತೇವೆ. ಫೋಟೋ ಮತ್ತು ಮಾಹಿತಿ ಕಳಿಸಬೇಕಾದ ನಂಬರ್ : 7899588538 ಆನಗೋಡ ಭಾಗದಲ್ಲಿ ಸಂಪರ್ಕ ಸಭೆ ತಾಲೂಕಿನ ಆನಗೋಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬುಧವಾರ ಭಗವದ್ಗೀತಾ ಅಭಿಯಾನದ ಸಂಪರ್ಕ ಸಭೆ ನಡೆಸಲಾಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ತಾಲೂಕಾ ಭಗವದ್ಗೀತಾ ಅಭಿಯಾನ ಸಮೀತಿಯ ಅಧ್ಯಕ್ಷ ಜಿ.ಎನ್.ಭಟ್… Read more: ವಿವಿದೆಡೆ ಭಗವದ್ಗೀತಾ ಅಭಿಯಾನ ಸಂಪರ್ಕ ಸಭೆ
  • ಹೆದ್ದಾರಿ ತಡೆ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಶಾಸಕ ಹೆಬ್ಬಾರ್ ಕರೆ
    ನದಿ ತಿರುವು ಯೋಜನೆ ವಿರೋಧಿಸಿ ನಡೆಯುವ ಹೆದ್ದಾರಿ ತಡೆ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಶಾಸಕ ಹೆಬ್ಬಾರ್ ಕರೆ ಈ ಕುರಿತು ಬುಧವಾರ ಮಾತನಾಡಿದ ಅವರು, ಸ್ವರ್ಣವಲ್ಲಿ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಹೋರಾಟದಲ್ಲಿ ನಾವೆಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ನೈಸರ್ಗಿಕ ಸಂಪತ್ತು, ಪರಿಸರ ಹಾಗೂ ಜನಜೀವನದ ಹಿತದೃಷ್ಟಿಯಿಂದ ಈ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವಂತೆ ಒತ್ತಾಯಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚಿನ… Read more: ಹೆದ್ದಾರಿ ತಡೆ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಶಾಸಕ ಹೆಬ್ಬಾರ್ ಕರೆ
  • ಪರಿಷತ್ ಚುನಾವಣಾ ಫಲಿತಾಂಶ ಮುಂದಿನ ರಾಜ್ಯ ರಾಜಕಾರಣದ ದಿಕ್ಸೂಚಿ: ಹರಿಪ್ರಕಾಶ ಕೋಣೆಮನೆ
    ಪರಿಷತ್ ಚುನಾವಣಾ ಫಲಿತಾಂಶ ಮುಂದಿನ ರಾಜ್ಯ ರಾಜಕಾರಣದ ದಿಕ್ಸೂಚಿ: ಹರಿಪ್ರಕಾಶ ಕೋಣೆಮನೆ ಪಶ್ಚಿಮ ಪದವೀಧರ ಕ್ಷೇತ್ರ,ಆಗ್ನೇಯ ಪದವೀಧರ ಕ್ಷೇತ್ರ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರವನ್ನು ಬಿಜೆಪಿ ಉಳಿಸುಕೊಂಡಿದೆ,ಅಷ್ಟು ಮಾತ್ರವಲ್ಲ ಮತಗಳಿಕೆ ಪ್ರಮಾಣವನ್ನು ಬಿಜೆಪಿ ಹೆಚ್ಚಿಸಿಕೊಂಡಿದೆ. ಬೆಂಗಳೂರು ಶಿಕ್ಷಕ ಕ್ಷೇತ್ರವನ್ನು ಕಾಂಗ್ರೆಸ್ ನಿಂದ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ಗೆದ್ದುಕೊಂಡಿರುವುದು ಪ್ರಜ್ಞಾವಂತ ಮತದಾರರು ಕಾಂಗ್ರೇಸ್ ಪಕ್ಷವನ್ನು ಸ್ಪಷ್ಟವಾಗಿ ತಿರಸ್ಕರಿಸಿರುವುದರ ಸಂಕೇತ ಎಂದು ಹರಿಪ್ರಕಾಶ ಕೋಣೆಮನೆ ವಿಶ್ಲೇಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದ ಬಳಿಕ ಒಂದೇ… Read more: ಪರಿಷತ್ ಚುನಾವಣಾ ಫಲಿತಾಂಶ ಮುಂದಿನ ರಾಜ್ಯ ರಾಜಕಾರಣದ ದಿಕ್ಸೂಚಿ: ಹರಿಪ್ರಕಾಶ ಕೋಣೆಮನೆ

Leave a Reply

You cannot copy content of this page